ಜಾರ್ಖಂಡ್​​: ಫೆ.17ಕ್ಕೆ ಉಭಯ ನಾಯಕರ ಸಮ್ಮುಖದಲ್ಲೇ ಬಿಜೆಪಿ ಜತೆ ಜೆವಿಎಂ ವಿಲೀನ

2019ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮೈತ್ರಿಯಾಗಿ ಸ್ಪರ್ಧಿಸಿದ್ದವು. ಈ ಮೈತ್ರಿಯೂ 81 ಕ್ಷೇತ್ರಗಳಲ್ಲಿ 50ರಲ್ಲಿ ಗೆಲುವು ಸಾಧಿಸಿತ್ತು. ಈ ಪೈಕಿ 3 ಕ್ಷೇತ್ರಗಳ ಮಾತ್ರ ಜೆವಿಎಂ ಪಾಲಾಗಿದ್ದವು. 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿತ್ತು.

ಜೆವಿಎಂ ಮುಖ್ಯಸ್ಥ ಬಾಬುಲಾಲ್​​​ ಮರಂಡಿ

ಜೆವಿಎಂ ಮುಖ್ಯಸ್ಥ ಬಾಬುಲಾಲ್​​​ ಮರಂಡಿ

 • Share this:
  ಜಾರ್ಖಂಡ್(ಫೆ.12): ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಂಡಿ ನೇತೃತ್ವದ ಜಾರ್ಖಂಡ್ ವಿಕಾಸ್ ಮೋರ್ಚಾ ಭಾರತೀಯ ಜನತಾ ಪಾರ್ಟಿ ಜೊತೆ ವಿಲೀನಕ್ಕೆ ಸಿದ್ಧವಾಗಿದೆ. ಇದೇ ಫೆ.17ನೇ ತಾರೀಕು ಜೆವಿಎಂ ಬಿಜೆಪಿಯೊಂದಿಗೆ ವಿಲೀನವಾಗಲಿದೆ ಎಂದು ಖುದ್ದು ಪಕ್ಷದ ಮುಖ್ಯಸ್ಥ ಬಾಬುಲಾಲ್ ಮರಾಂಡಿ ತಿಳಿಸಿದ್ದಾರೆ. ಉಭಯ ಪಕ್ಷಗಳ ಕಾರ್ಯಕರ್ತರ ಸಮ್ಮುಖದಲ್ಲಿ ಪಕ್ಷಗಳ ವಿಲೀನವಾಗಲಿದೆ ಎಂದೇಳಲಾಗುತ್ತಿದೆ.

  ಈ ಹಿಂದೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾರನ್ನು ಭೇಟಿ ಮಾಡಿದ ನಂತರವಷ್ಟೇ ಈ ಬೆಳವಣಿಗೆ ನಡೆದಿದೆ. ಜೆವಿಎಂ ಶಾಸಕರಾದ ಪ್ರದೀಪ್ ಯಾದವ್ ಮತ್ತು ಬಂಧು ಟಿರ್ಕೆ ಎಂಬುವರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಸದ್ಯ ಜೆವಿಎಂನ ಬಾಬುಲಾಲ್​​ ಈಗ ಏಕಾಂಗಿಯಾಗಿದ್ದು, ಬಿಜೆಪಿ ಜೊತೆಗೆ ವಿಲೀನಗೊಳಿಸುತ್ತಿದ್ದಾರೆ.

  2019ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮೈತ್ರಿಯಾಗಿ ಸ್ಪರ್ಧಿಸಿದ್ದವು. ಈ ಮೈತ್ರಿಯೂ 81 ಕ್ಷೇತ್ರಗಳಲ್ಲಿ 50ರಲ್ಲಿ ಗೆಲುವು ಸಾಧಿಸಿತ್ತು. ಈ ಪೈಕಿ 3 ಕ್ಷೇತ್ರಗಳ ಮಾತ್ರ ಜೆವಿಎಂ ಪಾಲಾಗಿದ್ದವು. 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿತ್ತು.

  ಇದನ್ನೂ ಓದಿ: ಜಾರ್ಖಂಡ್ ಮತಗಟ್ಟೆ ಸಮೀಕ್ಷೆ; ಬಿಜೆಪಿ ಕಡೆಗಣಿಸಿ ಕಾಂಗ್ರೆಸ್, ಜೆಎಂಎಂ, ಆರ್​ಜೆಡಿ ಮೈತ್ರಿಗೆ ಮತದಾರರ ಮುದ್ರೆ

  ಜಾರ್ಖಂಡ್ ವಿಕಾಸ್ ಮೋರ್ಚಾ 2019ರ ಡಿ. 24ರಂದು ಹೇಮಂತ್ ಸೊರೆನ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ನೀಡಿದ್ದ ಷರತ್ತುರಹಿತ ಬೆಂಬಲ ವಾಪಸ್ಸು ಪಡೆಯಿತು. ಇದಕ್ಕೆ ಕಾಂಗ್ರೆಸ್​​ ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಹೀಗಾಗಿ ನಮ್ಮ ಪಕ್ಷ ನೀಡಿದ್ದ ಬೆಂಬಲವನ್ನು ಪರಾಮರ್ಶಿಸಿದೆ. ಅದರ ನಂತರವೇ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದೇವೆ ಎಂದು ಜೆವಿಎಂ ಮುಖ್ಯಸ್ಥ ಬಾಬುಲಾಲ್ ಹೇಳಿದ್ದರು.
  First published: