Jharkhand Video: ಹೆಲಿಕಾಪ್ಟರ್ ಮೂಲಕ ರಕ್ಷಿಸುವ ವೇಳೆ ಜಾರಿ ಬಿದ್ದು ವ್ಯಕ್ತಿ ಸಾವು: ಭಯಾನಕ ದೃಶ್ಯ ಸೆರೆ

Jharkhand Shocking Video: ವ್ಯಕ್ತಿಯನ್ನು ಐಎಎಫ್ ಎಂಐ17 ಹೆಲಿಕಾಪ್ಟರ್ ಬಳಸಿ ರಕ್ಷಿಸುತ್ತಿದ್ದಾಗ ಹಠಾತ್ ಹಿಡಿತ ತಪ್ಪಿ ಕೆಳಗಿರುವ ಕಲ್ಲಿನ ಮೇಲೆ ವ್ಯಕ್ತಿ ಬಿದ್ದಿದ್ದಾನೆ.

ಜಾರಿ ಬೀಳುತ್ತಿರುವ ವ್ಯಕ್ತಿ

ಜಾರಿ ಬೀಳುತ್ತಿರುವ ವ್ಯಕ್ತಿ

  • Share this:
ರಾಂಚಿ: ಜಾರ್ಖಂಡ್‌ ನ ದಿಯೋಘರ್ ಜಿಲ್ಲೆಯ ತ್ರಿಕುಟ್ ಬೆಟ್ಟಗಳಲ್ಲಿ ಭಾನುವಾರ ಕೇಬಲ್ ಕಾರ್ ದುರಂತದಲ್ಲಿ (Jharkhand's Deoghar Cable Car Accident) ಸಾವನ್ನಪ್ಪಿದವರ ಸಂಖ್ಯೆ 3ಕ್ಕೆ ಏರಿದೆ. ಕೇಬಲ್ ಕಾರ್​ ನಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸುವ ವೇಳೆ ಮತ್ತೊಬ್ಬರು ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್​ ಮೂಲಕ ರಕ್ಷಿಸುತ್ತಿದ್ದ ವೇಳೆ ಜಾರಿ ಕೆಳಗೆ ಬಿದ್ದು ಪ್ರಾಣ (Man falls from Helicopter) ಕಳೆದುಕೊಂಡಿದ್ದಾರೆ. ಆ ಮೂಲಕ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ. ವ್ಯಕ್ತಿಯನ್ನು ಐಎಎಫ್ ಎಂಐ17 ಹೆಲಿಕಾಪ್ಟರ್ ಬಳಸಿ ರಕ್ಷಿಸುತ್ತಿದ್ದಾಗ ಹಠಾತ್ ಹಿಡಿತ ತಪ್ಪಿ ಕೆಳಗಿರುವ ಕಲ್ಲಿನ ಮೇಲೆ ವ್ಯಕ್ತಿ ಬಿದ್ದಿದ್ದಾನೆ. ಬಾಬಾ ಬೈದ್ಯನಾಥ ದೇವಾಲಯದ ಸಮೀಪವಿರುವ ತ್ರಿಕುಟ್ ಬೆಟ್ಟಗಳಲ್ಲಿ ರೋಪ್‌ವೇಯಲ್ಲಿ ಕೆಲವು ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟು, ಸುಮಾರು 50 ಜನರು ಸಿಲುಕಿದ್ದರು. ಇವರನ್ನು ರಕ್ಷಿಸುತ್ತಿದ್ದ ವೇಳೆ 3ನೇ ಸಾವಾಗಿದೆ.

ರೋಪ್‌ವೇಯಲ್ಲಿ ಕನಿಷ್ಠ 12 ಕ್ಯಾಬಿನ್‌ಗಳಲ್ಲಿ ಸಿಲುಕಿಕೊಂಡಿದ್ದ 50 ಜನರಲ್ಲಿ 30 ಮಂದಿಯನ್ನು ರಕ್ಷಿಸಲಾಗಿದ್ದು, 18 ಮಂದಿ ಉಳಿದಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಎನ್‌ಡಿಆರ್‌ಎಫ್, ಭಾರತೀಯ ವಾಯುಪಡೆ (ಐಎಎಫ್), ಐಟಿಬಿಪಿ ಇತರ ತಂಡಗಳು ನಡೆಸುತ್ತಿದ್ದು, ಇನ್ನೂ ಪ್ರಗತಿಯಲ್ಲಿದೆ.​​​





ಕಾಕ್‌ಪಿಟ್‌ನ ಹತ್ತಿರ ತಲುಪಿದ್ದ ವ್ಯಕ್ತಿ

ವೀಡಿಯೊದಲ್ಲಿ, ಪಶ್ಚಿಮ ಬಂಗಾಳದ ಬುರ್ದ್ವಾನ್‌ನವನು ಎಂದು ಹೇಳಲಾದ ವ್ಯಕ್ತಿ, ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್‌ನಿಂದ ನೇತಾಡುತ್ತಿರುವ ಹಗ್ಗವನ್ನು ಹಿಡಿದುಕೊಂಡಿರುವುದು ಕಂಡುಬರುತ್ತದೆ. ಗಾಳಿ ಮತ್ತು ಚಾಪರ್ ಬ್ಲೇಡ್‌ಗಳ ಬಲದೊಂದಿಗೆ ಹೋರಾಡುತ್ತಾ ಕಾಕ್‌ಪಿಟ್‌ನ ಹತ್ತಿರ ತಲುಪುತ್ತಿರುವುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ನೋಡುಗರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವುದು ಕೇಳಿಬರುತ್ತಿದೆ.  ಆದರೆ ಆತನನ್ನು ಎಳೆದುಕೊಳ್ಳುವಷ್ಟರಲ್ಲಿ ಆ ವ್ಯಕ್ತಿ ಕಾಲು ಜಾರಿ ಬಿದ್ದು ಸಾಯುತ್ತಾನೆ.

ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಾಲಯದ ಸಮೀಪವಿರುವ ತ್ರಿಕುಟ್ ಬೆಟ್ಟಗಳಲ್ಲಿ ರೋಪ್‌ವೇಯಲ್ಲಿ ಕೆಲವು ಕೇಬಲ್ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಐಎಎಫ್ ಪ್ರಕಾರ ದಿಯೋಘರ್ ಜಿಲ್ಲೆಯಲ್ಲಿ ಎರಡು ಎಂಐ-17 ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಭರದಿಂದ ಸಾಗಿರುವ ರಕ್ಷಣಾ ಕಾರ್ಯಾಚರಣೆ

ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದಿಯೋಘರ್ ಉಪ ಆಯುಕ್ತ ಮಂಜುನಾಥ ಭಜಂತ್ರಿ ತಿಳಿಸಿದ್ದಾರೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ITBP) ಕೂಡ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ.  ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಇನ್ನೂ ಕೆಲವರು ರೋಪ್‌ ವೇಯಲ್ಲಿ ಕೇಬಲ್ ಕಾರ್‌ಗಳಲ್ಲಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಲಾಗುತ್ತಿದೆ. ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ಡಿಸಿ ಹೇಳಿದರು, ವದಂತಿಗಳನ್ನು ಹರಡದಂತೆ ಜನರಿಗೆ ಮನವಿ ಮಾಡಿದರು.

ಇದನ್ನೂ ಓದಿ: Cable Car Accident: ದೇಶದ ಅತಿ ಎತ್ತರದ ರೋಪ್ ವೇನಲ್ಲಿ ದುರಂತ: ಕೇಬಲ್ ಕಾರ್ ಡಿಕ್ಕಿಯಾಗಿ ಸಾವು-ನೋವು!

ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಅವರಿಗೆ ತಿಳಿಸಿದ್ದು, ಎನ್‌ ಡಿಆರ್ ‌ಎಫ್ ತಂಡಗಳನ್ನು ನಿಯೋಜಿಸಲು ವಿನಂತಿಸಿದ್ದಾರೆ.ಈ ವಿಷಯದ ಬಗ್ಗೆ ತಕ್ಷಣ ಗಮನ ಹರಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಜಾರ್ಖಂಡ್ ಪ್ರವಾಸೋದ್ಯಮವು ಬಾಬಾ ಬೈದ್ಯನಾಥ ದೇವಾಲಯದ ಸಮೀಪವಿರುವ ತ್ರಿಕುಟ್ ರೋಪ್‌ ವೇ ಭಾರತದ ಅತಿ ಎತ್ತರದ ಲಂಬ ರೋಪ್‌ ವೇ ಎಂದು ಹೇಳುತ್ತದೆ. ಬಾಬಾ ಬೈದ್ಯನಾಥ ದೇವಸ್ಥಾನದಿಂದ ಸುಮಾರು 20 ಕಿಮೀ ದೂರದಲ್ಲಿರುವ ರೋಪ್‌ ವೇ ಸುಮಾರು 766 ಮೀಟರ್ ಉದ್ದವಿದ್ದರೆ, ಬೆಟ್ಟವು 392 ಮೀಟರ್ ಎತ್ತರದಲ್ಲಿದೆ. ರೋಪ್‌ ವೇಯಲ್ಲಿ 25 ಗಾಡಿಗಳಿದ್ದು, ಪ್ರತಿಯೊಂದರಲ್ಲಿ ನಾಲ್ಕು ಜನರಿಗೆ ಆಸನಗಳಿವೆ.
Published by:Kavya V
First published: