• Home
 • »
 • News
 • »
 • national-international
 • »
 • Jharkhand: ರೆಬೆಕ್ಕಾ ಹತ್ಯಾಕಾಂಡ: ಕೊಲೆಗೈದು ಚರ್ಮ ಸುಲಿದ್ರು, ಬಳಿಕ ದೇಹವನ್ನು 40ಕ್ಕೂ ಹೆಚ್ಚು ಪೀಸ್ ಮಾಡಿದ್ರು!

Jharkhand: ರೆಬೆಕ್ಕಾ ಹತ್ಯಾಕಾಂಡ: ಕೊಲೆಗೈದು ಚರ್ಮ ಸುಲಿದ್ರು, ಬಳಿಕ ದೇಹವನ್ನು 40ಕ್ಕೂ ಹೆಚ್ಚು ಪೀಸ್ ಮಾಡಿದ್ರು!

ರತೆಬೆಕ್ಕಾ ಹಾಗೂ ಕೊಲೆ ಆರೋಪಿ

ರತೆಬೆಕ್ಕಾ ಹಾಗೂ ಕೊಲೆ ಆರೋಪಿ

ಮಾಹಿತಿ ಪ್ರಕಾರ, ಮರಣೋತ್ತರ ಪರೀಕ್ಷೆಗೆ ತರಲಾದ ದೇಹದ ಬಹುತೇಕ ಭಾಗಗಳ ಮೇಲೆ ಚರ್ಮ ಇರಲಿಲ್ಲ. ಕೊಲೆಯ ನಂತರ ದೇಹದ ಚರ್ಮವನ್ನು ಸುಲಿದು ಬಳಿಕ ನಂತರ ದೇಹದ ಭಾಗಗಳನ್ನು 6-8 ಗಂಟೆಗಳ ಒಳಗೆ ಕಟರ್‌ಗಳಿಂದ ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ಇದು ಸೂಚಿಸುತ್ತದೆ.

 • News18 Kannada
 • 2-MIN READ
 • Last Updated :
 • Ranchi, India
 • Share this:

  ದುಜಾರ್ಖಂಡ್(ಡಿ.22): 28 ತುಣುಕುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂಬ ಅಂಶದಿಂದ ರೆಬೆಕ್ಕಾ ಕೊಲೆ (Rebecca Murder Case) ಪ್ರಕರಣವನ್ನು ಎಷ್ಟು ಕ್ರೂರವಾಗಿ ಕಾರ್ಯಗತಗೊಳಿಸಲಾಗಿದೆ ಎಂಬುದನ್ನು ಅಳೆಯಬಹುದು. ಅಷ್ಟೇ ಅಲ್ಲ ದೇಹದ ಭಾಗಗಳ ಚರ್ಮ ಸುಲಿದಿರುವ ಅಂಶವೂ ಬೆಳಕಿಗೆ ಬಂದಿದೆ. ಫುಲೋ-ಜಾನೋ ವೈದ್ಯಕೀಯ ಕಾಲೇಜು (Medical College) ಮತ್ತು ಸಾಹಿಬ್‌ಗಂಜ್ ಆಸ್ಪತ್ರೆಯ ವೈದ್ಯರ ತಂಡವು ರೆಬೆಕ್ಕಾ ಪಹಾಡಿನ್ ಅವರ ದೇಹದ ತುಣುಕುಗಳ ಮರಣೋತ್ತರ ಪರೀಕ್ಷೆಯನ್ನು ಮಾಡಿದೆ. ಇಂದು ರೆಬೆಕ್ಕಾಳ ಮರಣೋತ್ತರ ಪರೀಕ್ಷೆ (Post-mortem Report) ವರದಿ ಬರಬಹುದು ಎಂದು ಹೇಳಲಾಗುತ್ತಿದೆ.


  ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಪೊಲೀಸರು ರೆಬೆಕ್ಕಾಳ ಮೃತದೇಹದ 28 ತುಂಡುಗಳನ್ನು ಮರಣೋತ್ತರ ಪರೀಕ್ಷೆಗೆ ತಂದಿದ್ದರು. ಮಾಹಿತಿ ಪ್ರಕಾರ, ಮರಣೋತ್ತರ ಪರೀಕ್ಷೆಗೆ ತರಲಾದ ದೇಹದ ಬಹುತೇಕ ಭಾಗಗಳ ಮೇಲೆ ಚರ್ಮ ಇರಲಿಲ್ಲ. ಕೊಲೆಯ ನಂತರ ದೇಹದ ಚರ್ಮವನ್ನು ಸುಲಿದು, ಬಳಿಕ ನಂತರ ದೇಹದ ಭಾಗಗಳನ್ನು 6-8 ಗಂಟೆಗಳ ಒಳಗೆ ಕಟರ್‌ಗಳಿಂದ ತುಂಡರಿಸಲಾಗಿದೆ ಎಂದು ಇದು ಸೂಚಿಸುತ್ತದೆ.


  ಏತನ್ಮಧ್ಯೆ, ಮಾಹಿತಿ ಪ್ರಕಾರ, ರೆಬೆಕ್ಕಾ ಅವರ ಮರಣೋತ್ತರ ಪರೀಕ್ಷೆಯ ವರದಿ ಇಂದು ಬರಬಹುದು. ಹೀಗಿರುವಾಗ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ರೆಬೆಕಾಳನ್ನು ಎಷ್ಟು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬುದು ಖಚಿತವಾಗಲಿದೆ ಎಂದು ಹೇಳಲಾಗುತ್ತಿದೆ.


  ಇದನ್ನೂ ಓದಿ: Cholesterol Problem: ಚಳಿಗಾಲದಲ್ಲಿ ಇವುಗಳನ್ನು ಸೇವಿಸಿದ್ರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ ಎಚ್ಚರ!


  ಈ ನಡುವೆ ರೆಬೆಕ್ಕಾ ಹತ್ಯೆ ಪ್ರಕರಣ ಕ್ರಮೇಣ ರಾಜಕೀಯ ಬಣ್ಣ ಪಡೆದುಕೊಂಡಿದೆ. ಬುಧವಾರ, 21 ಸದಸ್ಯರ ರಾಜ್ಯ ಬಿಜೆಪಿ ಪರಿಶಿಷ್ಟ ಪಂಗಡ ಫ್ರಂಟ್ ರಾಂಚಿಯ ನಿಯೋಗವು ಬೋರಿಯೊ ತಲುಪಿ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವ ಭರವಸೆ ನೀಡಿದೆ.


  ಸಂಸತ್ತಿನಲ್ಲೂ ಚರ್ಚೆ ಹುಟ್ಟಿಸಿದ್ದ ಕೊಲೆ ಪ್ರಕರಣ


  ಕೆಲ ದಿನಗಳ ಹಿಂದಷ್ಟೇ ಈ ಕೊಲೆ ಪ್ರಕರಣ ಸಂಸತ್ತಿನಲ್ಲೂ ಚರ್ಚೆ ಹುಟ್ಟಿಸಿತ್ತು. ಬಿಜೆಪಿ ಸಂಸದರು ಈ ವಿಚಾರವನ್ನು ಎತ್ತಿದ್ದು, ಮಹಿಳೆಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಆಕೆ ಬುಡಕಟ್ಟು ಸಮುದಾಯಕ್ಕೆ ಸೇರಿದ್ದಾಳೆಂದು ಹೇಳಿದ್ದರು.


  ಒಂದು ತಿಂಗಳ ಹಿಂದೆ ರೆಬೆಕ್ಕಾ ಮುಸ್ಲಿಂ ಯುವಕ ದಿಲ್ದಾರ್ ಅನ್ಸಾರಿ ಅವರನ್ನು ಮದುವೆಯಾಗಿದ್ದರು. ಇಬ್ಬರೂ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದರು. ಇದು ದಿಲ್ದಾರ್ ಅವರ ಎರಡನೇ ವಿವಾಹವಾಗಿತ್ತು. ಅವರ ಮೊದಲ ಪತ್ನಿ ಸರೇಜಾ ಖಾತೂನ್ ಕೂಡ ದಿಲ್ದಾರ್ ಮನೆಯಲ್ಲಿ ವಾಸಿಸುತ್ತಿದ್ದರು. ರೆಬೆಕ್ಕಾ ಪಹಾರಿಯಾ ಸಮುದಾಯಕ್ಕೆ ಸೇರಿದವರು. ಆಕೆಗೆ ಐದು ವರ್ಷದ ಮಗಳಿದ್ದಾಳೆ. ಇನ್ನು ರೆಬೆಕ್ಕಾ ರಾಜೀವ್ ಮಾಲ್ಟೊ ಎಂಬ ಯುವಕನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಈ ಸಂಬಂಧದಲ್ಲಿದ್ದಾಗ ಆಕೆಗೊಬ್ಬ ಮಗಳು ಜನಿಸಿದ್ದಳು.


  ಏತನ್ಮಧ್ಯೆ, ಈ ಕೊಲೆ ಪ್ರಕರಣದಲ್ಲಿ ದಿಲ್ದಾರ್ ಸೇರಿದಂತೆ 10 ಜನರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.


  ಇದನ್ನೂ ಓದಿ: Bagalkot: ಮಗಳ ಗಂಡನ ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಕೊಚ್ಚಿ ಕೊಲೆ, ಮರ್ಯಾದ ಹತ್ಯೆಯ ಕರಾಳತೆ!  ಪೊಲೀಸರು ಹೇಳೋದೇನು?

  ಕೌಟುಂಬಿಕ ಕಲಹದಿಂದ ರೆಬೆಕ್ಕಾ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ದಿಲ್ದಾರ್ ಅನ್ಸಾರಿ (27 ವರ್ಷ), ಮೈನುಲ್ ಹಕ್ (53 ವರ್ಷ), ಮಹತಾಬ್ ಅನ್ಸಾರಿ (22 ವರ್ಷ), ಜರೀನಾ ಖಾತೂನ್ (48 ವರ್ಷ), ಸರೇಜಾ ಖಾತೂನ್ (25 ವರ್ಷ), ಗುಲೇರಾ ಖಾತೂನ್ (29 ವರ್ಷ), ಅಮೀರ್ ಹುಸೇನ್ (23 ವರ್ಷ), ಮುಸ್ತಕೀಮ್ ಅನ್ಸಾರಿ (60 ವರ್ಷ), ಮರ್ಯಮ್ ನಿಶಾ (55 ವರ್ಷ) ಮತ್ತು ಸಹರ್ಬಾನೋ ಖಾತುನ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.


  Published by:Precilla Olivia Dias
  First published: