ಜಾರ್ಖಂಡ್​​ ಸಾಮೂಹಿಕ ಹಲ್ಲೆ ಪ್ರಕರಣ: 11 ಆರೋಪಿಗಳ ವಿರುದ್ದದ ಚಾರ್ಜ್​ಶೀಟ್​ ಕೈ ಬಿಟ್ಟ ಪೊಲೀಸರು

ಕಳೆದ ಜೂನ್​ 18ರಂದು ತಬ್ರೇಸ್​ ಅನ್ಸಾರಿ ಎಂಬ ಯುವಕನನ್ನು ಗುಂಪೊಂದು ಜೈ ಶ್ರೀರಾಮ್​ ಎನ್ನುವಂತೆ ಒತ್ತಾಯಿಸಿತ್ತು. ಆತ ಜೈ ಶ್ರೀ ರಾಮ್​ ಘೋಷಣೆ ಕೂಗಲಿಲ್ಲ ಎಂಬ ಕಾರಣಕ್ಕೆ ಆತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿತ್ತು. ಹಲ್ಲೆಗೆ ಒಳಗಾದ ಯುವಕ ಘಟನೆ ನಡೆದು ಐದು ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

Seema.R | news18-kannada
Updated:September 10, 2019, 10:58 AM IST
ಜಾರ್ಖಂಡ್​​ ಸಾಮೂಹಿಕ ಹಲ್ಲೆ ಪ್ರಕರಣ: 11 ಆರೋಪಿಗಳ ವಿರುದ್ದದ ಚಾರ್ಜ್​ಶೀಟ್​ ಕೈ ಬಿಟ್ಟ ಪೊಲೀಸರು
ದೊಂಬಿ ಹಲ್ಲೆಯ ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ (ಸೆ.10): ಜೈ ಶ್ರೀರಾಮ್​ ಘೋಷಣೆ ಕೂಗಲು ನಿರಾಕರಿಸಿದ ಕಾರಣಕ್ಕೆ 24 ವರ್ಷದ ರಾಂಚಿ ಯುವಕನನ್ನು ಥಳಿಸಿ ಕೊಂದಿದ್ದ ಘಟನೆಯ ಆರೋಪಿಗಳ ವಿರುದ್ಧದ ಕೊಲೆ ಚಾರ್ಜ್​ಶೀಟ್​ನ್ನು ಪೊಲೀಸರು ಕೈ ಬಿಟ್ಟಿದೆ.

ಕಳೆದ ಜೂನ್​ 18ರಂದು ತಬ್ರೇಸ್​ ಅನ್ಸಾರಿ ಎಂಬ ಯುವಕನನ್ನು ಗುಂಪೊಂದು ಜೈ ಶ್ರೀರಾಮ್​ ಎನ್ನುವಂತೆ ಒತ್ತಾಯಿಸಿತ್ತು. ಆತ ಜೈ ಶ್ರೀ ರಾಮ್​ ಘೋಷಣೆ ಕೂಗಲಿಲ್ಲ ಎಂಬ ಕಾರಣಕ್ಕೆ ಆತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿತ್ತು. ಹಲ್ಲೆಗೆ ಒಳಗಾದ ಯುವಕ ಘಟನೆ ನಡೆದು ಐದು ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಈಗ ತಬ್ರೇಸ್​ ಅನ್ಸಾರಿ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಆತ ಹೃದಯಾಘಾತದಿಂದ ಸತ್ತಿದ್ದಾನೆ. ದೈಹಿಕ ಹಲ್ಲೆಯಿಂದ ಅಲ್ಲ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು 11 ಜನ ಆರೋಪಿಗಳ ವಿರುದ್ಧ ಹಾಕಲಾಗಿದ್ದು ಕೊಲೆ ಚಾರ್ಜ್​ಶೀಟ್​ನನ್ನು ಕೈಬಿಟ್ಟಿದ್ದಾರೆ.

ಪ್ರಕರಣದ ಕುರಿತು ಐಪಿಸಿ ಸೆಕ್ಷನ್​​ 304ರ ಅಡಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಆತ ಸ್ಥಳದಲ್ಲಿಯೇ ಸಾವನ್ನಪ್ಪಿರಲಿಲ್ಲ. ಅನ್ಸಾರಿಯನ್ನು ಕೊಲ್ಲಬೇಕು ಎಂಬ ಯಾವ ಇರಾದೆಯೂ ಗ್ರಾಮಸ್ಥರಿಗೆ ಇರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಮರಣೋತ್ತರ ಪರೀಕ್ಷೆ ವರದಿ ಪಡೆಯಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಕಾರ್ತಿಕ್​ ಎಸ್ ತಿಳಿಸಿದ್ದಾರೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಇದನ್ನು ಓದಿ: ಪಾಕಿಸ್ತಾನವನ್ನು ತ್ಯಜಿಸಿ ಭಾರತದ ಆಶ್ರಯ ಪಡೆಯಲು ಮುಂದಾದ ಇಮ್ರಾನ್ ಖಾನ್ ಪಕ್ಷದ ಶಾಸಕ; ಕಾರಣವೇನು ಗೊತ್ತಾ?

ತಬ್ರೇಸ್​ ಅನ್ಸಾರಿ ಪ್ರಕರಣದ ನಡೆದ ಬಳಿಕ ಕೇಳಿ ಬಂದ ಒತ್ತಾಯದ ಹಿನ್ನೆಲೆ ಐದು ದಿನಗಳ ನಂತರ ಆರೋಪಿಗಳ ವಿರುದ್ಧ ಪೊಲೀಸರು ಜಾರ್ಜ್​ಶೀಟ್​ ದಾಖಲಿಸಿದ್ದರು.

ಈಗ ಚಾರ್ಜ್​ಶೀಟ್​ ಕೈ  ಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು ಚಾರ್ಜ್​ಶೀಟ್​ನ್ನು ಪ್ರಾಸಿಕ್ಯೂಷನ್​ ಇಲಾಖೆಯಿಂದ ಪರಿಶೀಲಿಸಲಾಗಿದೆ ಎಂದರು
First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ