ಲಕ್ನೋ: ಹಿಂದೂ ಸಂಪ್ರದಾಯದಲ್ಲಿ (Hindu Custom) ಗೋವನ್ನು (Cattle) ಪೂಜಿಸಲಾಗುತ್ತದೆ. ಆದರೆ ಅನೇಕ ಮಂದಿ ಪೂಜ್ಯ ಸ್ಥಾನದಲ್ಲಿರುವ ಗೋ ಹತ್ಯೆ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಗೋಹತ್ಯೆ ಕಾನೂನಿನ ಪ್ರಕಾರ ಅಪರಾಧವಾಗಿದ್ದರೂ, ದೇಶದಲ್ಲಿ ಗೋಹತ್ಯೆ ನಿಲ್ಲುತ್ತಿಲ್ಲ. ಕೆಲ ಜನರು ಗೋಮಾಂಸ ಸೇವಿಸುತ್ತಲೇ ಇದ್ದಾರೆ. ಇನ್ನೂ ರಾಜ್ಯದಲ್ಲಿ ಎಲ್ಲಾ ವಯಸ್ಸಿನ ಆಕಳು, ಕರು, ಗೂಳಿ, ಎತ್ತು, ಹಾಗೂ 13 ವರ್ಷದೊಳಗಿನ ಕೋಣ ಹಾಗೂ ಎಮ್ಮೆಗಳ ಹತ್ಯೆಯನ್ನು ಕರ್ನಾಟಕ (Karnataka) ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಡಿ ನಿಷೇಧಿಸಿದೆ. ಹೀಗಿದ್ದರೂ ಮೂಕ ಪ್ರಾಣಿಗಳನ್ನು ಮನುಷ್ಯರು (Human) ಬಲಿ ಪಡೆಯುತ್ತಲೇ ಇದ್ದಾರೆ. ಇದೀಗ ಮದ್ಯ (Alcohal) ಮತ್ತು ಗೋಮಾಂಸ (Beef Meat) ಸೇವಿಸಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ದುಷ್ಕರ್ಮಿಗಳು ಅಮಾನುಷವಾಗಿ ಕೋಲು ಮತ್ತು ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಜಾರ್ಖಂಡ್ನ (Jharkhand) ಸಾಹಿಬ್ಗಂಜ್ನ (Sahibganj) ರಾಧಾನಗರ ಗ್ರಾಮದಲ್ಲಿ (Radhanagar village) ನಡೆದಿದೆ.
ಹೊಸ ವರ್ಷದ ಹಿಂದಿನ ದಿನ ಘಟನೆ
ಸಂತ್ರಸ್ತ ವ್ಯಕ್ತಿಯನ್ನು ಚಂದನ್ ರವಿದಾಸ್ ಎಂದು ಗುರುತಿಸಲಾಗಿದ್ದು, ಹೊಸ ವರ್ಷದ ಹಿಂದಿನ ದಿನ ಗೋಮಾಂಸ ಸವಿಯಲು ನಿರಾಕರಿಸಿದ್ದರಿಂದ ರವಿದಾಸ್ಗೆ ಐವರು ಮಂದಿ ಸೇರಿಕೊಂಡು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಿಥುನ್ ಶೇಖ್ ಮತ್ತು ಇತರ ನಾಲ್ವರು ಸೇರಿಕೊಂಡು ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಅವರು ಚಂದನ್ ರವಿದಾಸ್ ಆರೋಪಿಸಿದ್ದಾರೆ.
ಅಂಗಡಿ ಹಿಂದೆ ಗೋಮಾಂಸ ಸೇವಿಸುತ್ತಿದ್ದ ದುಷ್ಕರ್ಮಿಗಳು
ಶನಿವಾರ ರಾತ್ರಿ ಪಕಿಂಜ ಮೋರ್ನಲ್ಲಿರುವ ಅಂಗಡಿಯೊಂದಕ್ಕೆ ಹೋಗಿದ್ದರು. ಈ ವೇಳೆ ಅಂಗಡಿಯ ಹಿಂದೆ ಹೋಗಿ ನೋಡಿದಾಗ ಐವರು ಮಂದಿ ಗೋಮಾಂಸ ಸೇವಿಸುತ್ತಾ, ಮದ್ಯ ಸೇವಿಸುತ್ತಿರುವುದನ್ನು ನೋಡಿದ್ದಾರೆ. ನಂತರ ಇದೇ ವಿಚಾರವಾಗಿ ಚಂದನ್ ಹಾಗೂ ಐವರು ಮಂದಿ ಮಧ್ಯೆ ವಾಗ್ವಾದ ನಡೆದಿದೆ. ಕೊನೆಗೆ ಐವರು ಕಿಡಿಗೇಡಿಗಳು ಸೇರಿಕೊಂಡು ಬಲವಂತವಾಗಿ ಚಂದನ್ಗೆ ಗೋಮಾಂಸ ತಿನ್ನಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತ ವ್ಯಕ್ತಿಯಿಂದ ಮೊಬೈಲ್, 8 ಸಾವಿರ ರೂ. ಕಿತ್ತುಕೊಂಡ ದುಷ್ಕರ್ಮಿಗಳು
ಇಷ್ಟೇ ಅಲ್ಲದೇ ಆರೋಪಿಗಳು ಚಂದನ್ ರವಿದಾಸ್ ಬಳಿ ಇದ್ದ ಮೊಬೈಲ್ ಕಿತ್ತುಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಥಳಿಸಿದಲ್ಲದೇ ನಂತರ ರವಿದಾಸ್ ಬಳಿ ಇದ್ದ 8 ಸಾವಿರ ರೂಪಾಯಿ ಹಣವನ್ನು ಕೂಡ ದೋಚಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಹಣ ನೀಡಲು ನಿರಾಕಿರಿಸಿದ್ದಕ್ಕೆ ವ್ಯಕ್ತಿ ವಿವಸ್ತ್ರಗೊಳಿಸಿದ ಕಿಡಿಗೇಡಿಗಳು
ಮೊಬೈಲ್ ಮತ್ತು ಹಣ ನೀಡಲು ನಿರಾಕರಿದಾಗ ಆತನನ್ನು ಕಿಡಿಗೇಡಿಗಳು ವಿವಸ್ತ್ರಗೊಳಿಸಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ಅಳಲು ತೊಡಿಕೊಂಡಿದ್ದಾರೆ. ಸದ್ಯ ಈ ಸಂಬಂಧ ದೂರನ್ನು ಸ್ವೀಕರಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ರಾಧಾನಗರ ಪೊಲೀಸ್ ಠಾಣೆ ಎಸ್ಐ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಈ ಮುನ್ನ ಎಣ್ಣೆ ಏಟಲ್ಲಿ ನಾಯಿ ಬಾಲ, ಕಿವಿ ಕತ್ತರಿಸಿ, ಉಪ್ಪು ಸವರಿ ತಿಂದ ಕುಡುಕ
ಈ ಮುನ್ನ ಬರೇಲಿ ಜಿಲ್ಲೆಯ ಫರೀದ್ಪುರ ಪ್ರದೇಶದ ಎಸ್ಡಿಎಂ ಕಾಲೋನಿಯಲ್ಲಿ ವ್ಯಕ್ತಿಯೋರ್ವ ಕುಡಿದ ಅಮಲಿನಲ್ಲಿ ನಂಚಿಕೊಳ್ಳಲು ನಾಯಿಮರಿಗಳ ಬಾಲ ,ಕಿವಿ ಕತ್ತರಿಸಿ ಅದಕ್ಕೆ ಉಪ್ಪು ಸವರಿ ತಿಂದು ಮದ್ಯ ಸೇವಿಸಿದ್ದನು.
ಇದನ್ನೂ ಓದಿ: UttarPradesh: ಎಣ್ಣೆ ಏಟಲ್ಲಿ ನಾಯಿ ಬಾಲ, ಕಿವಿ ಕತ್ತರಿಸಿ, ಉಪ್ಪು ಸವರಿ ತಿಂದ ಕುಡುಕ: ಶ್ವಾನಗಳ ಸ್ಥಿತಿ ಗಂಭೀರ!
ವ್ಯಕ್ತಿ ನಾಯಿ ಮರಿಗಳಲ್ಲಿ ಒಂದು ನಾಯಿ ಮರಿಯ ಕಿವಿ ಮತ್ತು ಇನ್ನೊಂದು ನಾಯಿ ಮರಿಯ ಬಾಲವನ್ನು ಕತ್ತರಿಸಿದ್ದನು. ಇದರಿಂದ ಎರಡೂ ನಾಯಿ ಮರಿಗಳಿಗೂ ತೀವ್ರ ರಕ್ತಸ್ರಾವವಾಗಿ, ಅವುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ