ಬಹುಕೋಟಿ ಮೇವು ಹಗರಣ: ಲಾಲು ಪ್ರಸಾದ್ ಯಾದವ್ ಜಾಮೀನು ಅರ್ಜಿ ವಜಾಗೊಳಿಸಿದ ಜಾರ್ಖಂಡ್ ಹೈಕೋರ್ಟ್

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಜನವರಿ ನಾಲ್ಕರಂದು ಆದೇಶ ಕಾಯ್ದಿರಿಸಿತ್ತು. ಲಾಲು ಪರವಾಗಿ ಕಪಿಲ್ ಸಿಬಾಲ್ ವಾದ ಮಂಡಿಸಿದ್ದರು. ಸಿಬಿಐ ಪರವಾಗಿ ವಕೀಲ ರಾಜೀವ್ ಸಿನ್ಹಾ ವಕಾಲತ್ತು ವಹಿಸಿದ್ದರು. ಇಂದು ಲಾಲು ಅವರ ಜಾಮೀನು ಅರ್ಜಿಯನ್ನು ಕೋರ್ಟ್​ ತಿರಸ್ಕರಿಸಿತು.

HR Ramesh | news18
Updated:January 10, 2019, 6:00 PM IST
ಬಹುಕೋಟಿ ಮೇವು ಹಗರಣ: ಲಾಲು ಪ್ರಸಾದ್ ಯಾದವ್ ಜಾಮೀನು ಅರ್ಜಿ ವಜಾಗೊಳಿಸಿದ ಜಾರ್ಖಂಡ್ ಹೈಕೋರ್ಟ್
ಲಾಲೂ ಪ್ರಸಾದ್ ಯಾದವ್
HR Ramesh | news18
Updated: January 10, 2019, 6:00 PM IST
ರಾಂಚಿ: ಬಹುಕೋಟಿ ಮೇವು ಹಗರಣ ಸಂಬಂಧ ಮೂರು ಪ್ರಕರಣಗಳಲ್ಲಿ ಜಾಮೀನು ಕೋರಿ ಆರ್​ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.


ಬಹುಕೋಟಿ ಹಗರಣ ಸಂಬಂಧ ಇತರೆ ಪ್ರಕರಣಗಳಲ್ಲಿ ಲಾಲು ಪ್ರಸಾದ್ ಯಾದವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ತಿರಸ್ಕರಿಸಿದ್ದಾರೆ ಎಂದು ಸಿಬಿಐ ಪರ ವಕೀಲ ರಾಜೀವ್ ಸಿನ್ಹಾ ತಿಳಿಸಿದರು.ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಜನವರಿ ನಾಲ್ಕರಂದು ಆದೇಶ ಕಾಯ್ದಿರಿಸಿತ್ತು. ಲಾಲು ಪರವಾಗಿ ಕಪಿಲ್ ಸಿಬಾಲ್ ವಾದ ಮಂಡಿಸಿದ್ದರು. ಸಿಬಿಐ ಪರವಾಗಿ ವಕೀಲ ರಾಜೀವ್ ಸಿನ್ಹಾ ವಕಾಲತ್ತು ವಹಿಸಿದ್ದರು.Loading...


ಸದ್ಯ ಲಾಲು ಪ್ರಸಾದ್ ಯಾದವ್ ಅವರು ರಾಂಚಿಯ ಮೆಡಿಕಲ್ ಸೈನ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1990ರಲ್ಲಿ ಲಾಲು ಪ್ರಸಾದ್ ಯಾದವ್ ಬಿಹಾರ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ನಡೆದ ಬಹುಕೋಟೆ ಹಗರಣ ಸಂಬಂಧ ಬಂಧಿಸಲಾಗಿದೆ.First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ