HOME » NEWS » National-international » JHARKHAND EXIT POLLS GIVE EDGE TO CONGRESS JMM RJD COMBINE AS BJP PREDICTED TO FALL SHORT RH

ಜಾರ್ಖಂಡ್ ಮತಗಟ್ಟೆ ಸಮೀಕ್ಷೆ; ಬಿಜೆಪಿ ಕಡೆಗಣಿಸಿ ಕಾಂಗ್ರೆಸ್, ಜೆಎಂಎಂ, ಆರ್​ಜೆಡಿ ಮೈತ್ರಿಗೆ ಮತದಾರರ ಮುದ್ರೆ

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಜಾರ್ಖಂಡ್​ನಲ್ಲಿ ಒಟ್ಟು 2.26 ಕೋಟಿ ಮತದಾರರಿದ್ದಾರೆ. ರಾಜ್ಯಾದ್ಯಂತ ಮತದಾನಕ್ಕೆ ಒಟ್ಟು 29,464 ಮತಗಟ್ಟೆಗಳನ್ನು ಬಳಸಲಾಗಿತ್ತು. 2014ರ ಹಿಂದಿನ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಈ ಸಂಖ್ಯೆ ಶೇ.19ರಷ್ಟು ಹೆಚ್ಚಿಗೆ ಮಾಡಲಾಗಿದೆ.

HR Ramesh | news18-kannada
Updated:December 20, 2019, 10:35 PM IST
ಜಾರ್ಖಂಡ್ ಮತಗಟ್ಟೆ ಸಮೀಕ್ಷೆ; ಬಿಜೆಪಿ ಕಡೆಗಣಿಸಿ ಕಾಂಗ್ರೆಸ್, ಜೆಎಂಎಂ, ಆರ್​ಜೆಡಿ ಮೈತ್ರಿಗೆ ಮತದಾರರ ಮುದ್ರೆ
ಜೆಎಂಎಂ ಮುಖಂಡ ಹೇಮಂತ್ ಸೊರೆನ್(ಎಡ), ಕಾಂಗ್ರೆಸ್ ನಾಯಕ ಆರ್ಪಿಎನ್ ಸಿಂಗ್ (ಮಧ್ಯೆ), ಕಾಂಗ್ರೆಸ್ ಜಾರ್ಖಂಡ್ ರಾಜ್ಯಾಧ್ಯಕ್ಷ ರಾಮೇಶ್ವರ್ ಒರಾನ್ (ಬಲದಿಂದ ಎರಡನೆಯವರು) ಮತ್ತು ಆರ್ಜೆಡಿ ನಾಯಕರು.
 • Share this:
ನವದೆಹಲಿ: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಐದನೇ ಮತ್ತು ಕೊನೇ ಹಂತದ ಮತದಾನ ಇಂದು ಮುಕ್ತಾಯಗೊಂಡಿದೆ. ಮತದಾನ ಮುಕ್ತಾಯಗೊಂಡ ಬಳಿಕ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು, ಮೈತ್ರಿ ಪಕ್ಷಗಳಾದ ಕಾಂಗ್ರೆಸ್, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಅತಿದೊಡ್ಡ ಮೈತ್ರಿಯಾಗಿ ಹೊರಹೊಮ್ಮಿ, ಮುಂದಿನ ಸರ್ಕಾರ ರಚಿಸಲಿವೆ ಎಂದು ನಿರೀಕ್ಷೆ ಮಾಡಿವೆ. ಬಿಜೆಪಿ ಸರ್ಕಾರ ರಚಿಸಲು ಬೇಕಾದ ಸದಸ್ಯ ಸ್ಥಾನ ಗಳಿಸಲು ವಿಫಲವಾಗಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 41 ಸ್ಥಾನಗಳ ಅವಶ್ಯಕತೆ ಇದೆ. ಡಿಸೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಯಾವ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಐಎಎನ್​ಎಸ್​ ಮತ್ತು ಸಿ-ವೋಟರ್

 • ಕಾಂಗ್ರೆಸ್​-ಜೆಎಂಎಂ ಮೈತ್ರಿ - 31ರಿಂದ 39

 • ಬಿಜೆಪಿ - 28ರಿಂದ 36

 • ಎಜೆಎಸ್​ಯು - 3ರಿಂದ 7
 • ಜೆವಿಎಂ- 1ರಿಂದ 5


ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ

 • ಕಾಂಗ್ರೆಸ್​-ಜೆಎಂಎಂ ಮೈತ್ರಿ - 38ರಿಂದ 50

 • ಬಿಜೆಪಿ - 22ರಿಂದ 32

 • ಎಜೆಎಸ್​ಯು - 3ರಿಂದ 5

 • ಜೆವಿಎಂ- 2 ರಿಂದ 4


ಟೈಮ್ಸ್​ ನೌ

 • ಕಾಂಗ್ರೆಸ್​-ಜೆಎಂಎಂ, ಆರ್​ಜೆಡಿ ಮೈತ್ರಿ - 44

 • ಬಿಜೆಪಿ - 28

 • ಎಜೆಎಸ್​ಯು - 0

 • ಜೆವಿಎಂ- 3

 • ಇತರ – 6


ಪೋಲ್ ಆಫ್ ಪೋಲ್ಸ್​

 • ಕಾಂಗ್ರೆಸ್​-ಜೆಎಂಎಂ ಮೈತ್ರಿ - 41

 • ಬಿಜೆಪಿ - 29

 • ಎಜೆಎಸ್​ಯು - 3

 • ಜೆವಿಎಂ- 3

 • ಇತರೆ- 5ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಜಾರ್ಖಂಡ್​ನಲ್ಲಿ ಒಟ್ಟು 2.26 ಕೋಟಿ ಮತದಾರರಿದ್ದಾರೆ. ರಾಜ್ಯಾದ್ಯಂತ ಮತದಾನಕ್ಕೆ ಒಟ್ಟು 29,464 ಮತಗಟ್ಟೆಗಳನ್ನು ಬಳಸಲಾಗಿತ್ತು. 2014ರ ಹಿಂದಿನ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಈ ಸಂಖ್ಯೆ ಶೇ.19ರಷ್ಟು ಹೆಚ್ಚಿಗೆ ಮಾಡಲಾಗಿದೆ.

ಇದನ್ನು ಓದಿ: 

ಜಾರ್ಖಂಡ್​​​ ಚುನಾವಣೆಯೂ ಐದು ಹಂತಗಳಲ್ಲಿ ನಡೆದಿದೆ. ಕಳೆದ ನ.30ರಂದು ಮೊದಲ ಹಂತದ ಮತದಾನ, ಡಿ.7ರಂದು 2ನೇ ಹಂತದ ಮತದಾನ, ಡಿ.12ರಂದು 3ನೇ ಹಂತದ ಮತದಾನ, ಡಿ.16ರಂದು 4ನೇ ಹಂತದ ಮತದಾನ ಹಾಗೂ ಡಿ.20ರಂದು 5ನೇ ಹಂತದ ಮತದಾನ ನಡೆದಿದೆ. ಡಿಸೆಂಬರ್ 23ಕ್ಕೆ ಫಲಿತಾಂಶ ಹೊರಬೀಳಲಿದೆ.

 

 

 

 
Published by: HR Ramesh
First published: December 20, 2019, 10:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories