ಪರೀಕ್ಷೆ ಬರೆಸಲು ಗರ್ಭಿಣಿ ಹೆಂಡತಿಯನ್ನು 1200 ಕಿ.ಮೀ ಬೈಕ್ ಮೇಲೆ ಕರೆದೊಯ್ದ ಗಂಡ ; ವಾಪಸ್ ಪ್ರಯಾಣಕ್ಕೆ ವಿಮಾನ ಟಿಕೆಟ್ ಗಿಫ್ಟ್

ದಂಪತಿಗಳ ಕಥೆ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ, ಅದಾನಿ ಫೌಂಡೇಶನ್ ಜಾರ್ಖಂಡ್‌ನಲ್ಲಿರುವ ತಮ್ಮ ಮನೆಗೆ ತಲುಪಲು ಹಿಂದಿರುಗುವ ಪ್ರಯಾಣಕ್ಕಾಗಿ ದಂಪತಿಗಳಿಗೆ ವಿಮಾನ ಟಿಕೆಟ್‌ಗಳನ್ನು ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಶಿಕ್ಷಕರ ಹುದ್ದೆಯ ನೇಮಕಾತಿ ಪರೀಕ್ಷೆ ಬರೆಸಲು ಜಾರ್ಖಂಡ್ ಮೂಲದ 27 ವರ್ಷದ ವ್ಯಕ್ತಿ, ತನ್ನ ಗರ್ಭಿಣಿ ಹೆಂಡತಿಯೊಂದಿಗೆ ಬೈಕ್​​ನಲ್ಲಿ 1200 ಕಿ.ಮೀ ಕ್ರಮಿಸಿದ್ದಾನೆ, ಸಾವಿರಾರು ಕಿಲೋಮೀಟರ್ ದೂರ ಬೈಕ್ ನಲ್ಲಿ ಬಂದ ಆಕಾಂಕ್ಷಿ ಶಿಕ್ಷಕರಿಗೆ ಪರೀಕ್ಷೆಗೆ ಕುಳಿತುಕೊಳ್ಳಲು, ಮನೆಗೆ ಹಿಂತಿರುಗಲು ವಿಮಾನ ಟಿಕೆಟ್ ಸಿಕ್ಕಿದೆ ಎಂದು ಪಿಟಿಐ ವರದಿ ಮಾಡಿದೆ. ಡಿಪ್ಲೊಮಾ ಇನ್ ಎಜ್ಯುಕೇಶನ್ ಪರೀಕ್ಷೆಯನ್ನು ಬರೆಯಲು ಪರೀಕ್ಷಾ ಕೇಂದ್ರವಿದ್ದ ಗ್ವಾಲಿಯರ್ ತಲುಪಲು ಧನಂಜಯ್ ಕುಮಾರ್ (27) ಮತ್ತು ಸೋನಿ ಹೆಂಬ್ರಮ್ (22) ಗೊಡ್ಡಾ ಜಿಲ್ಲೆಯ ಗಂತಾ ತೋಲಾ ಗ್ರಾಮದಿಂದ ಬೈಕ್​​ ನಲ್ಲಿ ಪ್ರಯಾಣಿಸಿದ್ದರು. ತನ್ನ ಹೆಂಡತಿ ಶಾಲಾ ಶಿಕ್ಷಕಿಯಾಗಬೇಕೆಂಬ ಹಂಬಲವು ಕುಮಾರ್‌ಗೆ ಇತ್ತು. ಆತ ಕೇವಲ 8 ನೇ ತರಗತಿಯವರೆಗೆ ಮಾತ್ರ ಓದಿದ್ದಾನೆ. ಹೀಗಾಗಿ ತನ್ನ ಹೆಂಡತಿಯಾದರೂ ಶಿಕ್ಷಕೆಯಾಗಲಿ ಎಂದು ಅಪೇಕ್ಷಿಸಿದ್ದಾನೆ. ರೈಲು, ಬಸ್‌ಗಳ ಸೇವೆ ದೊರೆಯದ ಕಾರಣ ಅವರಿಬ್ಬರು ಚಿಂತೆಗೀಡಾಗಿದ್ದರು.

  ಪರೀಕ್ಷಾ ಕೇಂದ್ರ ಸಾವಿರಾರು ಕಿಲೋಮೀಟರ್ ಅಂತರದಲ್ಲಿದ್ದರೂ ಗರ್ಭಿಣಿಯಾದ ಆಕೆಯನ್ನು ಬೈಕ್ ಮೇಲೆಯೇ ಕೂಡಿಸಿಕೊಂಡು ಪ್ರಯಾಣಿಸುವ ಸಾಹಸ ಮಾಡಿದ್ದಾನೆ. ನಾಲ್ಕು ರಾಜ್ಯಗಳಲ್ಲಿ 1,200 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿ ಮಳೆ ಮತ್ತು ಕೆಟ್ಟ ರಸ್ತೆಗಳನ್ನು ಕೋವಿಡ್ 19 ಲಾಕ್‌ಡೌನ್‌ನ ಮಧ್ಯೆ ಕಠಿಣ ಪ್ರಯಾಣವನ್ನು ಕೈಗೊಂಡಿದ್ದಾನೆ.

  ಇದನ್ನೂ ಓದಿ : ಡಿಆರ್​ಡಿಒನ ಹೈಪರ್​ಸೋನಿಕ್ ವಾಹನದ ಯಶಸ್ವಿ ಪ್ರಯೋಗ; ಅಮೆರಿಕ, ರಷ್ಯಾ, ಚೀನಾ ಸಾಲಿಗೆ ಭಾರತ

  ದಂಪತಿಗಳ ಕಥೆ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ, ಅದಾನಿ ಫೌಂಡೇಶನ್ ಜಾರ್ಖಂಡ್‌ನಲ್ಲಿರುವ ತಮ್ಮ ಮನೆಗೆ ತಲುಪಲು ಹಿಂದಿರುಗುವ ಪ್ರಯಾಣಕ್ಕಾಗಿ ದಂಪತಿಗಳಿಗೆ ವಿಮಾನ ಟಿಕೆಟ್‌ಗಳನ್ನು ನೀಡಿದೆ.  ಧನಂಜಯ್ ಮತ್ತು ಸೋನಿ ಅವರ ಗೊಡ್ಡಾಗೆ ಆರಾಮದಾಯಕವಾಗಿ ವಾಪಸ್ಸಾಗಲು, ಪ್ರಯಾಣದ ವ್ಯವಸ್ಥೆ ಮಾಡಲು ನಾವು ಅದಾನಿ ಫೌಂಡೇಶನ್ ವಿನಮ್ರರಾಗಿದ್ದೇವೆ ಮತ್ತು ಈ ಸ್ಪೂರ್ತಿದಾಯಕ ಕಥೆಯನ್ನು ಬೆಳಕಿಗೆ ತಂದ ಸ್ಥಳೀಯ ಮಾಧ್ಯಮಗಳಿಗೆ ಧನ್ಯವಾದಗಳು" ಎಂದು ಪ್ರತಿಷ್ಠಾನದ ಅಧ್ಯಕ್ಷೆ ಪ್ರೀತಿ ಅದಾನಿ ಶನಿವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಧನಂಜಯ್ ಕುಮಾರ್ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
  Published by:G Hareeshkumar
  First published: