ಜಾರ್ಖಂಡ್ ಪೊಲೀಸ್ ಅಧಿಕಾರಿಯೊಬ್ಬರು ರಾಜ್ಯದ ಹಳ್ಳಿಗಳು ಮತ್ತು ನೆರೆಯ ಬಿಹಾರದ ನೂರಾರು ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಮಾರ್ಗದರ್ಶಕ ಮತ್ತು ಬೋಧಕರಾಗಿದ್ದಾರೆ. ಇಂತಹ 250ಕ್ಕೂ ಹೆಚ್ಚು ಆಕಾಂಕ್ಷಿಗಳು ಜಾರ್ಖಂಡ್ ಪೊಲೀಸ್‌ನ ಉಪ ಪೊಲೀಸ್ ಅಧೀಕ್ಷಕರಾದ (ಡಿಎಸ್‍ಪಿ) ವಿಕಾಸ್ ಚಂದ್ರ ಶ್ರೀವಾಸ್ತವ್ ರೊಂದಿಗೆ ನಿಯಮಿತವಾಗಿ ಆನ್‍ಲೈನ್‍ನಲ್ಲಿ ಸಂವಹನ ನಡೆಸುತ್ತಾರೆ. ಈ ವಿದ್ಯಾರ್ಥಿ ಗಳಲ್ಲದೆ, ಶ್ರೀವಾಸ್ತವ ಟ್ಯುಟೋರಿಯಲ್‍ಗಳನ್ನು ಅಪ್‍ಲೋಡ್ ಮಾಡುವ ಯೂಟ್ಯೂಬ್ ಚಾನೆಲ್ 'ಡಿಎಸ್‍ಪಿ ಕಿ ಪಾಠಶಾಲಾ’ ಎಂಬುದಕ್ಕೆ ಸುಮಾರು 1,600 ಚಂದಾದಾರರು ಇದ್ದಾರೆ.ಯೂಟ್ಯೂಬ್ ಚಾನೆಲ್‍ನಲ್ಲಿನ ಉಚಿತ ಟ್ಯುಟೋರಿಯಲ್ ಗಳು ದೂರದ ಹಳ್ಳಿಗಳ ಆಕಾಂಕ್ಷಿಗಳಿಗೆ ದೊಡ್ಡ ಭರವಸೆಯಾಗಿ ಮಾರ್ಪಟ್ಟಿವೆ. ಏಕೆಂದರೆ ಇತರ ದುಬಾರಿ ಆನ್‍ಲೈನ್ ತರಗತಿಗಳನ್ನು ಪಡೆದುಕೊಳ್ಳಲು ಕಷ್ಟವಾಗುತ್ತದೆ.
ಶ್ರೀವಾಸ್ತವರನ್ನು ಪ್ರಸ್ತುತ ರಾಂಚಿಯ ತನಿಖಾ ತರಬೇತಿ ಶಾಲೆಗೆ ನೇಮಿಸಲಾಗಿದೆ. ಇವರು ಜೂಮ್ ಆ್ಯಪ್ ಮೂಲಕ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಾರೆ. ಲಾಕ್‍ಡೌನ್ ಸಮಯದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಶ್ರೀವಾಸ್ತವ್‌ರಿಗೆ ಯೂಟ್ಯೂಬ್‍ನಲ್ಲಿ ನೇರ ತರಗತಿಗಳನ್ನು ನೀಡುವಂತೆ ಕೋರಲಾಯಿತು ಮತ್ತು ಎಲ್ಲಾ ಆಕಾಂಕ್ಷಿಗಳಿಗೆ ತಲುಪಿಸುವ ಸಲುವಾಗಿ 'ಡಿಎಸ್‍ಪಿ ಕಿ ಪಾಠಶಾಲಾ' ಶೀಘ್ರದಲ್ಲೇ ಆರಂಭವಾಯಿತು.
ಡಿಎಸ್‍ಪಿ ಕಿ ಪಾಠಶಾಲೆಯನ್ನು ಜುಲೈ 11 ರಂದು ಆರಂಭಿಸಲಾಯಿತು ಮತ್ತು ಯುಪಿಎಸ್‍ಸಿ ಹಾಗೂ ಜಾರ್ಖಂಡ್ ನಾಗರಿಕ ಸೇವೆಗಳ ಪರೀಕ್ಷೆ ಎದುರಿಸುವ ಆಕಾಂಕ್ಷಿಗಳಿಗಾಗಿ ನಾನು ವಾರಕ್ಕೆ ನಾಲ್ಕು ದಿನ ತಲಾ ಒಂದು ಗಂಟೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. 8 ವಾಟ್ಸ್ಆ್ಯಪ್ ಗ್ರೂಪ್‌ಗಳಿವೆ, ಅವುಗಳನ್ನು ಯಾವುದಾದರೂ ಪ್ರಮುಖ ಅಂಶಗಳಿದ್ದರೆ ಅದರ ಬಗ್ಗೆ ತಿಳಿಸಲು ಬಳಸಲಾಗುತ್ತದೆ ಎಂದುಶ್ರೀವಾಸ್ತವ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಶ್ರೀವಾಸ್ತವ ದಿಯೋಘರ್‌ನಲ್ಲಿರುವ ಅಂಬೇಡ್ಕರ್ ಗ್ರಂಥಾಲಯದ ಆಡಳಿತ ಮಂಡಳಿಯಿಂದ ಉಡುಗೊರೆಯಾಗಿ ಸ್ಮಾರ್ಟ್ ಬೋರ್ಡ್ ನೀಡಲಾಯಿತು. ಇದೇ ಸ್ಮಾರ್ಟ್ ಬೋರ್ಡ್ ಬಳಸಿ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸಲು ಸನ್ನದ್ಧರಾಗುತ್ತಿರುವ ಆಕಾಂಕ್ಷಿಗಳಿಗೆ ತರಗತಿಗಳನ್ನು ನಡೆಸಿದರು, ಅಂದರೆ ಅಲ್ಲಿ ಬೋಧಕರಾಗಿ ಆಕಾಂಕ್ಷಿಗಳಿಗೆ ವಿಷಯಗಳನ್ನು ಬೋಧಿಸುತ್ತಾರೆ.
ತರಗತಿಯ ನಂತರ ವಿದ್ಯಾರ್ಥಿಗಳಿಗೆ ಸಂದೇಹಗಳಿದ್ದಾಗ, ಅವರು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಸಂದೇಶ ಕಳುಹಿಸಬಹುದು ಮತ್ತು ಉತ್ತರ ಪಡೆಯಬಹುದು. ಮೃತ ದಿನಗೂಲಿ ಕಾರ್ಮಿಕನ ಮಗ ಮತ್ತು ಶ್ರೀವತ್ಸ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಭರತ್ ತುರಿ, "ನಮ್ಮಂತಹ ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಆದರೆ ನಾಗರಿಕ ಸೇವೆಗಳ ಪರೀಕ್ಷೆ ಎದುರಿಸುವ ಕನಸು ಕಾಣಲು, ಧೈರ್ಯದಿಂದ ಮುನ್ನುಗ್ಗಲು ವಿಕಾಸ್ ಸರ್ ಒಬ್ಬ ದೈವಿಕ ಶಕ್ತಿ ರೀತಿಯಲ್ಲಿ ಗೋಚರಿಸುತ್ತಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದರು.
ಶ್ರೀವಾಸ್ತವ ಇನ್ನೊಬ್ಬ ವಿದ್ಯಾರ್ಥಿನಿ ಪ್ರೀತಿ ಕುಮಾರಿಯ ಪ್ರಕಾರ, ಒಬ್ಬ ಆಕಾಂಕ್ಷಿಯು ಶ್ರೀವಾಸ್ತವ ಗುರುಗಳಂತಹ ಪೊಲೀಸ್ ಅಧಿಕಾರಿಯ ತರಗತಿಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದರೆ, ಅವರಿಗೆ ಬೇರೆ ಯಾವುದೇ ಕೋಚಿಂಗ್ ಕ್ಲಾಸ್ ಅಗತ್ಯವಿಲ್ಲ ಎಂದು ಬೋಧನೆ ಮಾಡುವ ರೀತಿಯನ್ನು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ