Hemant Soren: ಜಾರ್ಖಂಡ ಸಿಎಂ ಹೇಮಂತ್ ಸೊರೆನ್ ಕುರ್ಚಿ ಭದ್ರ; ಬಹುಮತ ಸಾಬೀತು

Jharkhand Politics: 81 ಶಾಸಕರ ಜಾರ್ಖಂಡ ವಿಧಾನಸಭೆಯಲ್ಲಿ48 ಶಾಸಕರು ಮುಖ್ಯಮಂತ್ರಿ ಹೇಮಂತ್ ಸೊರೆನ್ ಪರವಾಗಿ ಮತ ಚಲಾಯಿಸಿದ್ದಾರೆ.

ಹೇಮಂತ್ ಸೊರೆನ್

ಹೇಮಂತ್ ಸೊರೆನ್

  • Share this:
    ರಾಂಚಿ: ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ (Jharkhand CM Hemant Soren) ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು (Confidence Motion) ಮಾಡಿದ್ದಾರೆ. 81 ಶಾಸಕರ ಜಾರ್ಖಂಡ ವಿಧಾನಸಭೆಯಲ್ಲಿ(Jharkhand Assembly) 48 ಶಾಸಕರು ಮುಖ್ಯಮಂತ್ರಿ ಹೇಮಂತ್ ಸೊರೆನ್ ಪರವಾಗಿ ಮತ ಚಲಾಯಿಸಿದ್ದಾರೆ. ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ನೇತೃತ್ವದ ಒಕ್ಕೂಟವು ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪದ ನಡುವೆ ಈ ವಿಶ್ವಾಸಮತ ಯಾಚನೆ ನಡೆದಿತ್ತು. ವಿಶೇಷ ಒಂದು ದಿನದ ಅಧಿವೇಶನದ ಕಲಾಪಗಳ ಉದ್ದಕ್ಕೂ ಪ್ರತಿಭಟಿಸಿದ ಪ್ರತಿಪಕ್ಷ ಬಿಜೆಪಿ, ಮತದಾನಕ್ಕೂ ಮುನ್ನವೇ ಸದನದಿಂದ ಹೊರನಡೆದಿದೆ. ಇತ್ತ  ಭ್ರಷ್ಟಾಚಾರದ ಆರೋಪದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಜಾರ್ಖಂಡ ವಿಧಾನಸಭೆಯಲ್ಲಿ ನಡೆಸಿದ ಬಹುಮತ ಪರೀಕ್ಷೆಯಲ್ಲಿ ಜಯಗಳಿಸಿದ್ದಾರೆ. 

    ಮತದಾನದ ಮೊದಲು ಮಾತನಾಡಿದ ಹೇಮಂತ್ ಸೊರೆನ್, ಚುನಾವಣೆಯಲ್ಲಿ ಗೆಲ್ಲಲು ಗಲಭೆಗಳನ್ನು ಉತ್ತೇಜಿಸುವ ಮೂಲಕ ಬಿಜೆಪಿ ದೇಶದಲ್ಲಿ ಅಂತರ್ಯುದ್ಧದಂತಹ ಪರಿಸ್ಥಿತಿಯನ್ನು ತರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

    ವಿಧಾನಸಭೆಯಲ್ಲೇ ಹರಿಹಾಯ್ದ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್
    ಇನ್ನೂ ಮುಂದುವರೆದು ಬಿಜೆಪಿ ವಿರುದ್ಧ ಹರಿಹಾಯ್ದ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ಪ್ರತಿಪಕ್ಷಗಳು ಪ್ರಜಾಪ್ರಭುತ್ವವನ್ನು ನಾಶ ಮಾಡಿದೆ. ಬಿಜೆಪಿ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ನಾವು ಸದನದಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಆರೋಪ ಮಾಡಿದ್ದಾರೆ.

    ಗಣಿ ಗುತ್ತಿಗೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಮ್ಮ ಪತ್ನಿ ಕಲ್ಪನಾ ಸೊರೆನ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಬಹುದು ಎನ್ನಲಾಗಿತ್ತು.

    ಇದನ್ನೂ ಓದಿ: Crime News: ಕದ್ದುಮುಚ್ಚಿ ಸಿಗರೇಟ್ ಸೇದ್ತಿದ್ದ ಹೈಸ್ಕೂಲ್ ವಿದ್ಯಾರ್ಥಿಗಳು! ನೋಡಿದ 6 ನೇ ಕ್ಲಾಸ್ ವಿದ್ಯಾರ್ಥಿಗೆ ಧಮ್ಕಿ

    ಜಾರ್ಖಂಡ್ ಗಣಿ ಗುತ್ತಿಗೆ ಪ್ರಕರಣದಲ್ಲಿ ಸಿಎಂ ಹೇಮಂತ್ ಸೊರೇನ್ ಅವರ ಸದಸ್ಯತ್ವ ರದ್ದತಿ ಕುರಿತು ತೀವ್ರತರದ ಬೆಳವಣಿಗೆಗಳು ನಡೆದಿದ್ದವು.

    ಏನಿದು ಗಣಿ ಹಗರಣ ಆರೋಪ?
    ಮಾಹಿತಿ ಹಕ್ಕು (ಆರ್‌ಟಿಐ) ಕೆಲಸ ಮಾಡಿದ ಶಿವಶಂಕರ್ ಶರ್ಮಾ ಅವರು ಗಣಿ ಹಗರಣವನ್ನು ಸಿಬಿಐ ಮತ್ತು ಇಡಿ ತನಿಖೆಗೆ ಒತ್ತಾಯಿಸಿ ಎರಡು ಪಿಐಎಲ್‌ಗಳನ್ನು ಸಲ್ಲಿಸಿದ್ದರು. ಹೇಮಂತ್ ಸೊರೆನ್ ತನ್ನ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಸ್ಟೋನ್ ಕ್ವಾರಿ ಮೈನ್ಸ್ ತಮ್ಮ ಹೆಸರಿಗೆ ಹಂಚಿಕೆ ಮಾಡಿಕೊಂಡಿದ್ದಾರೆ. ಶೆಲ್ ಕಂಪನಿಯಲ್ಲಿ ಹೂಡಿಕೆ ಮಾಡಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದರು.

    ಜಾರ್ಖಂಡ್‌ ರಾಜಕೀಯದಲ್ಲಿ ಎದ್ದಿತ್ತು ಬಿರುಗಾಳಿ!
    ಜಾರ್ಖಂಡ್‌ನಲ್ಲಿ ಸರ್ಕಾರ ನಡೆಸುತ್ತಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ಕೂಡ ಹೇಮಂತ್ ಸೊರೆನ್ ಬದಲಿಗೆ ಯಾರನ್ನು ಆಯ್ಕೆ ಮಾಡುವುದು ಎಂಬ ಬಗ್ಗೆ ಚರ್ಚೆ ನಡೆಸಿತ್ತು. ಸಿಎಂ ಹುದ್ದೆ ಸೊರೆನ್ ಕುಟುಂಬದ ಸದಸ್ಯರಲ್ಲೇ ಉಳಿದುಕೊಳ್ಳಬಹುದೆನ್ನಲಾಗಿತ್ತು. ಅದೇ ಸಮಯದಲ್ಲಿ, ಹೇಮಂತ್ ಅವರು ತಮ್ಮ ಪತ್ನಿ ಕಲ್ಪನಾ ಸೊರೆನ್ ಅವರ ಹೆಸರನ್ನು ಪರ್ಯಾಯವಾಗಿ ಮುಂದಿಡಬಹುದು ಎಂದು ಬಿಜೆಪಿ ಕೆಲವು ದಿನಗಳ ಹಿಂದೆ ಹೇಳಿಕೊಂಡಿತ್ತು.

    ಇದನ್ನೂ ಓದಿ: Shiva Temple: ಈ ಶಿವ ದೇಗುಲಕ್ಕೆ ಅಣ್ಣ-ತಂಗಿ ಒಟ್ಟಿಗೆ ಹೋಗುವಂತಿಲ್ಲ!

    ಆದರೆ ಕಲ್ಪನಾ ಅವರನ್ನು ಮುಖ್ಯಮಂತ್ರಿ ಮಾಡಿದರೆ ಪಕ್ಷದ ಹಿರಿಯ ನಾಯಕರು ಬಂಡಾಯವೆಬ್ಬಿಸಬಹುದು. ಅಷ್ಟೇ ಅಲ್ಲ, ಅವರ ಸೊಸೆ ಸೀತಾ ಸೊರೆನ್ ಕೂಡ ಬಂಡಾಯ ಏಳುವ ಸಾಧ್ಯತೆ ಇದೆ. ಇದೇ ವೇಳೆ ಕಲ್ಪನಾ ಸೊರೆನ್ ಹೆಸರಲ್ಲಿ ನೋಂದಾಯಿತ ಜಮೀನು ಖರೀದಿ ವಿಚಾರವನ್ನು ಪ್ರತಿಪಕ್ಷಗಳು ಎತ್ತುವ ಮೂಲಕ ಕಲ್ಪನಾ ಸಂಕಷ್ಟವನ್ನು ಹೆಚ್ಚಿಸಬಹುದು ಎಂದು ಹೇಳಲಾಗಿತ್ತು. ಆದರೆ ಇದೀಗ ಜಾರ್ಖಂಡ ಮುಖ್ಯಮಂತ್ರಿ ಹೇಮಂತ ಸೊರೆನ್ ಬಹುಮತ ಸಾಬೀತು ಮಾಡಿದ್ದು ಜಯದ ನಗು ಬೀರಿದ್ದಾರೆ.
    Published by:guruganesh bhat
    First published: