Reservation: ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿ ಶೇ 77ರಷ್ಟು ಹೆಚ್ಚಳ; ಹೇಮಂತ್ ಸೊರೆನ್ ನಿರ್ಧಾರ

ಮುಖ್ಯಮಂತ್ರಿ ಹೇಮಂತ್ ಸೊರೆನ್ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿ ಎದುರಿಸಿದ ರಾಜಕೀಯ ಬಿಕ್ಕಟ್ಟಿನ ಕೆಲವೇ ದಿನಗಳಲ್ಲಿ ಉದ್ಯೋಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆ. 

ಹೇಮಂತ್ ಸೊರೆನ್

ಹೇಮಂತ್ ಸೊರೆನ್

  • Share this:
ರಾಂಚಿ: ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳು, ಒಬಿಸಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳ (SC ST Reservation) ಸದಸ್ಯರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಶೇ 77 ರಷ್ಟು ಮೀಸಲಾತಿ ನೀಡುವ(Jharkhand govt raises Reservations) ಪ್ರಸ್ತಾವನೆಗೆ ಜಾರ್ಖಂಡ್ ಸರ್ಕಾರ (Jharkhand Government) ಬುಧವಾರ ಒಪ್ಪಿಗೆ ನೀಡಿದೆ.  ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Jharkhand CM Hemant Soren) ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಬಿಸಿ ಮೀಸಲಾತಿಯನ್ನು ಈಗಿರುವ ಶೇ.14ರಿಂದ ಶೇ.27ಕ್ಕೆ ಹೆಚ್ಚಿಸಿದೆ. ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿ ಎದುರಿಸಿದ ರಾಜಕೀಯ ಬಿಕ್ಕಟ್ಟಿನ ಕೆಲವೇ ದಿನಗಳಲ್ಲಿ ಉದ್ಯೋಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆ. 

SC, ST, ಹಿಂದುಳಿದ ವರ್ಗಗಳು, ಇತರ ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 77 ಪ್ರತಿಶತ ಮೀಸಲಾತಿಗಾಗಿ 2001 ರ ಹುದ್ದೆಗಳು ಮತ್ತು ಸೇವೆಗಳ ಖಾಲಿ ಹುದ್ದೆಗಳ ಜಾರ್ಖಂಡ್ ಮೀಸಲಾತಿ ಕಾಯ್ದೆ, 2001 ರ ತಿದ್ದುಪಡಿಗಾಗಿ ಮೀಸಲಾತಿ ಮಸೂದೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಈ ಮಾಹಿತಿಯನ್ನು ಜಾರ್ಖಂಡ್  ಕ್ಯಾಬಿನೆಟ್ ಕಾರ್ಯದರ್ಶಿ ವಂದನಾ ದಾಡೆಲ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಈಗ ಇರುವ ಉದ್ಯೋಗ ಮೀಸಲಾತಿ ಪ್ರಮಾಣ ಎಷ್ಟು?
ಪ್ರಸ್ತಾವಿತ ಉದ್ಯೋಗ ಮೀಸಲಾತಿ ನೀತಿಯಲ್ಲಿ SC ಸಮುದಾಯದ ಸ್ಥಳೀಯ ಜನರು 12%, ST 28%, ಅತ್ಯಂತ ಹಿಂದುಳಿದ ವರ್ಗ 15%, OBC 12%, ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಇತರ ಮೀಸಲಾತಿ ವರ್ಗಗಳನ್ನು ಹೊರತುಪಡಿಸಿ 10% ಕೋಟಾವನ್ನು ಹೊಂದಿದೆ.

ಎಲ್ಲಾ ರಾಜಕೀಯ ಪಕ್ಷಗಳ ಭರವಸೆ
ಪ್ರಸ್ತುತ ಜಾರ್ಖಂಡ್‌ನಲ್ಲಿ ಎಸ್‌ಟಿ ಸಮುದಾಯಗಳಿಗೆ ಶೇ.26ರಷ್ಟು ಮೀಸಲಾತಿ ಇದ್ದರೆ, ಎಸ್‌ಸಿಗಳಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಪ್ರಸ್ತುತ ಜಾರ್ಖಂಡ್ ರಾಜ್ಯದಲ್ಲಿ 14 ಪ್ರತಿಶತ ಕೋಟಾವನ್ನು ಒಬಿಸಿ ಸಮುದಾಯಕ್ಕೆ ನೀಡಲಾಗಿದೆ. ಅಲ್ಲದೇ ಈ ಪ್ರಮಾಣವನ್ನು ಹೆಚ್ಚಿಸುವುದು 2019 ರಲ್ಲಿ ಎಲ್ಲಾ ಮುಖ್ಯವಾಹಿನಿಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ನೀಡಿದ್ದ ಭರವಸೆಯಾಗಿತ್ತು. 

ಬಹುಮತ ಸಾಬೀತುಪಡಿಸಿದ್ದ ಹೇಮಂತ್ ಸೊರೆನ್
ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್  ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಿದ್ದಾರೆ. 81 ಶಾಸಕರ ಜಾರ್ಖಂಡ ವಿಧಾನಸಭೆಯಲ್ಲಿ 48 ಶಾಸಕರು ಮುಖ್ಯಮಂತ್ರಿ ಹೇಮಂತ್ ಸೊರೆನ್ ಪರವಾಗಿ ಮತ ಚಲಾಯಿಸಿದ್ದರು. ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಒಕ್ಕೂಟವು ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪದ ನಡುವೆ ಈ ವಿಶ್ವಾಸಮತ ಯಾಚನೆ ನಡೆದಿತ್ತು. ವಿಶೇಷ ಒಂದು ದಿನದ ಅಧಿವೇಶನದ ಕಲಾಪಗಳ ಉದ್ದಕ್ಕೂ ಪ್ರತಿಭಟಿಸಿದ ಪ್ರತಿಪಕ್ಷ ಬಿಜೆಪಿ, ಮತದಾನಕ್ಕೂ ಮುನ್ನವೇ ಸದನದಿಂದ ಹೊರನಡೆದಿದೆ. ಇತ್ತ ಭ್ರಷ್ಟಾಚಾರದ ಆರೋಪದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಜಾರ್ಖಂಡ ವಿಧಾನಸಭೆಯಲ್ಲಿ ನಡೆಸಿದ ಬಹುಮತ ಪರೀಕ್ಷೆಯಲ್ಲಿ ಜಯಗಳಿಸಿದ್ದರು.

ಇದನ್ನೂ ಓದಿ: UP Dalit Sisters Death: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಸಹೋದರಿಯರ ಮೃತದೇಹ ಪತ್ತೆ; ಊರಿಗೆ ಊರೇ ತಲ್ಲಣ

ಮತದಾನದ ಮೊದಲು ಮಾತನಾಡಿದ ಹೇಮಂತ್ ಸೊರೆನ್, ಚುನಾವಣೆಯಲ್ಲಿ ಗೆಲ್ಲಲು ಗಲಭೆಗಳನ್ನು ಉತ್ತೇಜಿಸುವ ಮೂಲಕ ಬಿಜೆಪಿ ದೇಶದಲ್ಲಿ ಅಂತರ್ಯುದ್ಧದಂತಹ ಪರಿಸ್ಥಿತಿಯನ್ನು ತರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

ವಿಧಾನಸಭೆಯಲ್ಲೇ ಹರಿಹಾಯ್ದ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್
ಇನ್ನೂ ಮುಂದುವರೆದು ಬಿಜೆಪಿ ವಿರುದ್ಧ ಹರಿಹಾಯ್ದ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ಪ್ರತಿಪಕ್ಷಗಳು ಪ್ರಜಾಪ್ರಭುತ್ವವನ್ನು ನಾಶ ಮಾಡಿದೆ. ಬಿಜೆಪಿ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ನಾವು ಸದನದಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಆರೋಪ ಮಾಡಿದ್ದರು.

ಇದನ್ನೂ ಓದಿ: Volodymyr Zelensky: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಾರು ಅಪಘಾತ

ಗಣಿ ಗುತ್ತಿಗೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಮ್ಮ ಪತ್ನಿ ಕಲ್ಪನಾ ಸೊರೆನ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಬಹುದು ಎನ್ನಲಾಗಿತ್ತು.
Published by:ಗುರುಗಣೇಶ ಡಬ್ಗುಳಿ
First published: