Basant Soren: ಒಳಉಡುಪು ಖರೀದಿಸಲು ದೆಹಲಿಗೆ ಬಂದಿದ್ದೆ ಎಂದ ಶಾಸಕ; ವ್ಯಾಪಕ ಟೀಕೆ

MLA Basant Soren Viral Video: ನನ್ನ ಒಳಉಡುಪುಗಳು ಖಾಲಿಯಾಗಿತ್ತು. ಅದಕ್ಕೆ ದೆಹಲಿಗೆ ಬಂದಿದ್ದೆ ಎಂದಿದ್ದಾರೆ ಈ ಶಾಸಕ. ಅವರ ಮಾತು ವ್ಯಾಪಕ ಟೀಕೆಗೆ ಕಾರಣವಾಗಿದ್ದು ಬಿರುಗಾಳಿಯನ್ನೇ ಎಬ್ಬಿಸಿದೆ.

ಬಸಂತ್ ಸೊರೆನ್

ಬಸಂತ್ ಸೊರೆನ್

  • Share this:
    ರಾಂಚಿ: ಜಾರ್ಖಂಡದಲ್ಲಿ ಬಿರುಸಿನ ರಾಜಕೀಯ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಹೇಮಂತ್ ಸೋರೆ (Jharkhand CM Hemant Soren) ಅವರ ಸಹೋದರ ಮತ್ತು ಶಾಸಕ ಬಸಂತ್ ಸೊರೆನ್ (Basant Soren) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಮಾತು ವ್ಯಾಪಕ ಟೀಕೆಗೆ ಕಾರಣವಾಗಿದ್ದು ಬಿರುಗಾಳಿಯನ್ನೇ ಎಬ್ಬಿಸಿದೆ. ನನ್ನ ಒಳಉಡುಪುಗಳು ಖಾಲಿಯಾಗಿದ್ದು, ದೆಹಲಿಗೆ (Basant Soren Delhi Visit) ಒಳ ಉಡುಪುಗಳನ್ನು ಖರೀದಿ ಮಾಡಲು ಎಂದೇ ಬಂದಿದ್ದೇನೆ ಎಂದು ಅವರು ಸುದ್ದಿಗಾರರಿಗೆ ಹೇಳಿದ್ದಾರೆ.  ಈ ವಿಡಿಯೋ ಸದ್ಯ ವ್ಯಾಪಕ ವೈರಲ್ ಆಗಿದ್ದು ಟೀಕೆಗೆ ಗುರಿಯಾಗಿದೆ. 


    ದೆಹಲಿ ಪ್ರವಾಸದಿಂದ ಹಿಂತಿರುಗಿದ ಶಾಸಕ ಬಸಂತ್ ಸೊರೆನ್ ಇತ್ತೀಚಿಗೆ ಅತ್ಯಾಚಾರಕ್ಕೆ ಒಳಗಾದ ಸಂತೃಸ್ತ ಯುವತಿಯರ ಕುಟುಂಬಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಜಾರ್ಖಂಡದಲ್ಲಿ ರಾಜಕೀಯ ಬಿರುಗಾಳಿ
    ಜಾರ್ಖಂಡ​ ರಾಜ್ಯದಲ್ಲಿ ಉಂಟಾಗಿದ್ದ ರಾಜಕೀಯ ಅಶಾಂತಿಯ ಕುರಿತೂ ಸಹ ಸುದ್ದಿಗಾರರು ಅವರನ್ನು ಪ್ರಶ್ನಿಸಿದಾಗ ರಾಜಕೀಯ ಅಶಾಂತಿ ಉಂಟಾಗಿದ್ದು ಹೌದು. ಆದರೆ ಇದೀಗ ಎಲ್ಲ ಶಾಂತಿಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

    ಇತ್ತೀಚಿಗೆ ನಡೆದ ಭಾರೀ ರಾಜಕೀಯ ಬೆಳವಣಿಗೆಯಲ್ಲಿ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಿದ್ದಾರೆ. 81 ಶಾಸಕರ ಜಾರ್ಖಂಡ ವಿಧಾನಸಭೆಯಲ್ಲಿ 48 ಶಾಸಕರು ಮುಖ್ಯಮಂತ್ರಿ ಹೇಮಂತ್ ಸೊರೆನ್ ಪರವಾಗಿ ಮತ ಚಲಾಯಿಸಿದ್ದಾರೆ. ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ನೇತೃತ್ವದ ಒಕ್ಕೂಟವು ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪದ ನಡುವೆ ಈ ವಿಶ್ವಾಸಮತ ಯಾಚನೆ ನಡೆದಿತ್ತು.

    ಇದನ್ನೂ ಓದಿ: Giridih Jain Temple: 500 ಕೋಟಿ ಹಣ, 10 ವರ್ಷದಿಂದ ಕೆಲಸ! ಇನ್ನೂ ಮುಗಿದಿಲ್ಲ ಈ ದೇಗುಲದ ನಿರ್ಮಾಣ!

    ವಿಶೇಷ ಒಂದು ದಿನದ ಅಧಿವೇಶನದ ಕಲಾಪಗಳ ಉದ್ದಕ್ಕೂ ಪ್ರತಿಭಟಿಸಿದ ಪ್ರತಿಪಕ್ಷ ಬಿಜೆಪಿ, ಮತದಾನಕ್ಕೂ ಮುನ್ನವೇ ಸದನದಿಂದ ಹೊರನಡೆದಿದೆ. ಇತ್ತ ಭ್ರಷ್ಟಾಚಾರದ ಆರೋಪದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಜಾರ್ಖಂಡ ವಿಧಾನಸಭೆಯಲ್ಲಿ ನಡೆಸಿದ ಬಹುಮತ ಪರೀಕ್ಷೆಯಲ್ಲಿ ಜಯಗಳಿಸಿದ್ದಾರೆ.

    ಬಿಜೆಪಿಯಿಂದ ಅಂತರ್ಯುದ್ಧ ಎಂದು ಆರೋಪ
    ಮತದಾನದ ಮೊದಲು ಮಾತನಾಡಿದ ಹೇಮಂತ್ ಸೊರೆನ್, ಚುನಾವಣೆಯಲ್ಲಿ ಗೆಲ್ಲಲು ಗಲಭೆಗಳನ್ನು ಉತ್ತೇಜಿಸುವ ಮೂಲಕ ಬಿಜೆಪಿ ದೇಶದಲ್ಲಿ ಅಂತರ್ಯುದ್ಧದಂತಹ ಪರಿಸ್ಥಿತಿಯನ್ನು ತರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

    ಇದನ್ನೂ ಓದಿ: Hemant Soren Disqualification: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್​ಗೆ ಅನರ್ಹತೆ ಭೀತಿ!

    ಜಾರ್ಖಂಡ್ ಗಣಿ ಗುತ್ತಿಗೆ ಪ್ರಕರಣದಲ್ಲಿ ಸಿಎಂ ಹೇಮಂತ್ ಸೊರೇನ್ ಅವರ ಸದಸ್ಯತ್ವ ರದ್ದತಿ ಕುರಿತು ತೀವ್ರತರದ ಬೆಳವಣಿಗೆಗಳು ನಡೆದಿದ್ದವು.

    ಏನಿದು ಗಣಿ ಹಗರಣ ಆರೋಪ?
    ಮಾಹಿತಿ ಹಕ್ಕು (ಆರ್‌ಟಿಐ) ಕೆಲಸ ಮಾಡಿದ ಶಿವಶಂಕರ್ ಶರ್ಮಾ ಅವರು ಗಣಿ ಹಗರಣವನ್ನು ಸಿಬಿಐ ಮತ್ತು ಇಡಿ ತನಿಖೆಗೆ ಒತ್ತಾಯಿಸಿ ಎರಡು ಪಿಐಎಲ್‌ಗಳನ್ನು ಸಲ್ಲಿಸಿದ್ದರು. ಹೇಮಂತ್ ಸೊರೆನ್ ತನ್ನ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಸ್ಟೋನ್ ಕ್ವಾರಿ ಮೈನ್ಸ್ ತಮ್ಮ ಹೆಸರಿಗೆ ಹಂಚಿಕೆ ಮಾಡಿಕೊಂಡಿದ್ದಾರೆ. ಶೆಲ್ ಕಂಪನಿಯಲ್ಲಿ ಹೂಡಿಕೆ ಮಾಡಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದರು.
    Published by:guruganesh bhat
    First published: