ನವದೆಹಲಿ (ಮೇ 19): ಉತ್ತರ ಪ್ರದೇಶದ ಔರಯ್ಯ ಜಿಲ್ಲೆಯಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಜಾರ್ಖಂಡ್ನ 26 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದರು. ಆ ಕಾರ್ಮಿಕರ ಶವಗಳನ್ನು ಟಾರ್ಪಲ್ನಲ್ಲಿ ಸುತ್ತಿ, ಅದೇ ಟ್ರಕ್ನಲ್ಲಿ ವಲಸೆ ಕಾರ್ಮಿಕರನ್ನುಕೂರಿಸಿ ಕಳುಹಿಸಲಾಗಿತ್ತು. ಈ ನಡವಳಿಕೆಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಿಂದ ನಮ್ಮ ರಾಜ್ಯದ ವಲಸೆ ಕಾರ್ಮಿಕರ ಮೃತದೇಹಗಳನ್ನು ತೆರೆದ ಟ್ರಕ್ನಲ್ಲಿ ಪ್ಲಾಸ್ಟಿಕ್ ಮತ್ತು ಟಾರ್ಪಲ್ಗಳಲ್ಲಿ ಸುತ್ತಿ ಕಳುಹಿಸಿದ ದೃಶ್ಯ ಕಂಡು ನನಗೆ ಆಘಾತವಾಯಿತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದವರನ್ನು ಕೂಡ ಅದೇ ಟ್ರಕ್ನಲ್ಲಿ ಹಾಕಿ ಕಳುಹಿಸಲಾಗಿದೆ. ಈ ರೀತಿ ಅಮಾನವೀಯ ವರ್ತನೆಯನ್ನು ಕಂಡು ಬೇಸರವಾಗಿದೆ. ಉತ್ತರ ಪ್ರದೇಶದ ಸರ್ಕಾರ ಇಂತಹ ಘಟನೆ ಪುನರಾವರ್ತಿತವಾಗದಂತೆ ಎಚ್ಚರ ವಹಿಸಬೇಕು ಎಂದು ಸಿಎಂ ಹೇಮಂತ್ ಸೊರೇನ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೊರೋನಾ ಎಫೆಕ್ಟ್; ಕೇಂದ್ರ ಸರ್ಕಾರಿ ನೌಕರರಿಗೂ ಇನ್ನುಮುಂದೆ 3 ಶಿಫ್ಟ್ನಲ್ಲಿ ಕೆಲಸ
ಉತ್ತರ ಪ್ರದೇಶದ ಔರಯ್ಯ ಎಂಬ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಅಪಘಾತದಲ್ಲಿ 26 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದರು. 30ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದರು. ಪಂಜಾಬ್ ಮತ್ತು ರಾಜಸ್ಥಾನದ ಕಡೆಯಿಂದ ಬರುತ್ತಿದ್ದ ಟ್ರಕ್ಗಳ ನಡುವೆ ಡಿಕ್ಕಿ ಉಂಟಾಗಿ ಈ ಅಪಘಾತ ಸಂಭವಿಸಿತ್ತು. ಮೃತಪಟ್ಟವರಲ್ಲಿ 11 ಜನರು ಜಾರ್ಖಂಡ್ನವರು ಮತ್ತು 15 ಜನರು ಪಶ್ಚಿಮ ಬಂಗಾಳದವರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ