ED Raid: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಆಪ್ತನ ಮನೆ ಮೇಲೆ ಇಡಿ ದಾಳಿ, ಎರಡು ಎಕೆ-47 ರೈಫಲ್ ಪತ್ತೆ

ಜಾರ್ಖಂಡ್‌ನಲ್ಲಿ ಪ್ರೇಮ್ ಪ್ರಕಾಶ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಅತ್ಯಾಧುನಿಕ ಎಕೆ 47 ರೈಫಲ್‌ ವಶಪಡಿಸಿಕೊಂಡಿದ್ದಾರೆ. ಪ್ರಮುಖ ಟೆಂಡರ್ ಮತ್ತು ವರ್ಗಾವಣೆ ಮತ್ತು ಐಎಎಸ್ ಐಪಿಎಸ್ ಹುದ್ದೆಗಳಲ್ಲಿ ಅವರ ಕೈವಾಡವಿದೆ ಎಂದು ಹೇಳಲಾಗಿತ್ತು. ಇಡಿ ಈಗಾಗಲೇ ಸಮನ್ಸ್ ಜಾರಿ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜಾರ್ಖಂಡ್ ಮುಖ್ಯಮಂತ್ರಿ (Jharkhand CM) ಹೇಮಂತ್ ಸೊರೆನ್ (Hemant Soren) ಅವರ ಆಪ್ತ ಪ್ರೇಮ್ ಪ್ರಕಾಶ್ (Prem Prakash) ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ (Raid) ನಡೆಸಿದೆ. ರಾಜಧಾನಿ ರಾಂಚಿಯ ಹರ್ಮು, ಡೊರಾಂಡಾ, ಅಶೋಕ್ ನಗರ ಸೇರಿದಂತೆ 11 ಸ್ಥಳಗಳಲ್ಲಿ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಇಡಿ ಅಧಿಕಾರಿಗಳು ಎರಡು ಅತ್ಯಾಧುನಿಕ ಎಕೆ-47 ರೈಫಲ್‌ ಗಳನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ಗಣಿಗಾರಿಕೆ ಮತ್ತು ಸುಲಿಗೆ ಪ್ರಕರಣ ಆರೋಪದ ಆಧಾರದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿಂದೆ ಪ್ರೇಮ್ ಪ್ರಕಾಶ್ ಅವರ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

    ಜಾರ್ಖಂಡ್‌ನಲ್ಲಿ ಈಗ ಪ್ರೇಮ್ ಪ್ರಕಾಶ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಅತ್ಯಾಧುನಿಕ ಎಕೆ-47 ರೈಫಲ್‌ ವಶಪಡಿಸಿಕೊಂಡಿದ್ದಾರೆ. ಪ್ರಮುಖ ಟೆಂಡರ್ ಮತ್ತು ವರ್ಗಾವಣೆ ಮತ್ತು ಐಎಎಸ್ -ಐಪಿಎಸ್ ಹುದ್ದೆಗಳಲ್ಲಿ ಅವರ ಕೈವಾಡವಿದೆ ಎಂದು ಹೇಳಲಾಗಿತ್ತು.

    ಜಾರ್ಖಂಡ್ ಮುಖ್ಯಮಂತ್ರಿ ಆಪ್ತ ಪ್ರೇಮ್ ಪ್ರಕಾಶ್ ನಿವಾಸದ ಮೇಲೆ ಇಡಿ ದಾಳಿ

    ಇಡಿ ಈಗಾಗಲೇ ಸಮನ್ಸ್ ಜಾರಿ ಮಾಡಿದೆ. ವಿಚಾರಣೆ ನಡೆಸಿದೆ. ಈ ವೇಳೆ ಪೊಲೀಸ್ ಠಾಣೆ ಪ್ರಭಾರಿ ಅರಗೂರ ವಿನೋದ್ ಕುಮಾರ್ ಹೇಳಿಕೆ ಮುನ್ನೆಲೆಗೆ ಬಂದಿದೆ. ಇನ್ನು ಜಾರ್ಖಂಡ್‌ನಲ್ಲಿ ಪ್ರೇಮ್ ಪ್ರಕಾಶ್ ನಿವಾಸದಲ್ಲಿ ರೈಫಲ್ ದೊರೆತಿದ್ದು ಆತಂಕ ಮೂಡಿಸಿದೆ.

    ಇದನ್ನೂ ಓದಿ: ಗುರುಗ್ರಾಮದ ಮಾಲ್​ಗೆ ನುಗ್ಗಿದ ಸಿಬಿಐ ತಂಡ, ತೇಜಸ್ವಿಗೆ ನಡುಕ? ಬಿಹಾರ ವಿಶ್ವಾಸಮತದಂದೇ ಸಂಕಷ್ಟ!

    ಎರಡು ಎಕೆ-47ಗಳು ರಾಂಚಿ ಜಿಲ್ಲಾ ಪೊಲೀಸರದ್ದು ಎಂದು ಪೊಲೀಸ್ ಠಾಣೆ ಪ್ರಭಾರಿ ಅರಗೂರ ವಿನೋದ್ ಕುಮಾರ್ ಹೇಳಿದ್ದಾರೆ. ಆದರೆ ಅದು ಯಾರದ್ದು ಎಂಬುದು ದೃಢಪಟ್ಟಿಲ್ಲ. ಈ ಬಗ್ಗೆ ಪ್ರೇಮ್ ಪ್ರಕಾಶ್ ಕಾವಲುಗಾರರು ಬಂದ ಮೇಲೆ ತಿಳಿಯಲಿದೆ ಎಂದಿದ್ದಾರೆ.

    ಜಾರ್ಖಂಡ್‌ನ 20 ಸ್ಥಳಗಳಲ್ಲಿ ಇಡಿ ದಾಳಿ

    ಇಂದು ಬೆಳಗ್ಗೆಯಿಂದ ಜಾರ್ಖಂಡ್‌ನ 20 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರೇಮ್ ಪ್ರಕಾಶ್ ಅವರ ಸಂಪರ್ಕ ಸ್ಥಳಗಳಲ್ಲಿ ಇಡಿ ದಾಳಿ ನಡೆಯುತ್ತಿವೆ. ಇಡಿ ತಂಡವು ರಾಂಚಿಯ ಹರ್ಮು ಪ್ರದೇಶ ತಲುಪಿದೆ. ಮತ್ತು ಸಿಆರ್‌ ಪಿಎಫ್ ಇಲ್ಲಿ ಮುನ್ನಡೆ ಸಾಧಿಸಿದೆ.

    ಪ್ರೇಮ್ ಪ್ರಕಾಶ್ ಅವರ ಕಚೇರಿ ಬಹಳ ದಿನಗಳಿಂದ ಬಂದ್ ಆಗಿತ್ತು. ರಾಂಚಿಯ 11 ಸ್ಥಳಗಳಲ್ಲಿ ದಾಳಿ ನಡೆದಿದೆ. ಜಾರ್ಖಂಡ್‌ನ 17 ಸ್ಥಳಗಳಲ್ಲಿ ದಾಳಿ ನಡೆದಿಎ. ಈ ದಾಳಿಗಳು ಅಕ್ರಮ ಗಣಿಗಾರಿಕೆ ಆರೋಪದ ಆಧಾರದ ಮೇರೆಗೆ ನಡೆದಿವೆ ಎಂದು ಹೇಳಲಾಗಿದೆ.

    ಬಿಹಾರದಲ್ಲೂ ಸಿಬಿಐ ದಾಳಿ

    ಈ ಹಿಂದೆ, ಬಿಹಾರದಲ್ಲಿ ಬಹುಮತ ಪರೀಕ್ಷೆಗೆ ಮುನ್ನ, ದೊಡ್ಡ ಸುದ್ದಿ ಮುನ್ನೆಲೆಗೆ ಬಂದಿತ್ತು. ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಆರ್‌ಜೆಡಿಯ ಹಲವು ದೊಡ್ಡ ನಾಯಕರ ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ಈ ದಾಳಿ ಇನ್ನೂ ಮುಂದುವರೆದಿದೆ. ಜಮೀನಿಗೆ ಸಂಬಂಧಿಸಿದಂತೆ 25 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ.

    ದೆಹಲಿ,ಗುರುಗ್ರಾಮ್, ಪಾಟ್ನಾ, ಕತಿಹಾರ್ ಮತ್ತು ಮಧುಬನಿಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗುರುಗ್ರಾಮ್‌ನಲ್ಲಿ ಅರ್ಬನ್ ಕ್ಯೂಬ್ 71 ಮಾಲ್ ಇದೆ. ಇದನ್ನು ತೇಜಸ್ವಿ ಯಾದವ್ ಮತ್ತು ಅವರ ಆಪ್ತರಿಗೆ ಸೇರಿದ್ದು ಎನ್ನಲಾಗಿದೆ. ಇಲ್ಲಿಯೂ ಇಡಿ ದಾಳಿ ನಡೆದಿದೆ.

    ಇದನ್ನೂ ಓದಿ: ಬಂಧನ ಭೀತಿಯಲ್ಲಿ ಮಾಜಿ ಬಿಗ್​ ಬಾಸ್​ ಸ್ಪರ್ಧಿ ಸಪ್ನಾ, ಅರೆಸ್ಟ್​ ವಾರೆಂಟ್​ ಜಾರಿ!

    ಎಂಎಲ್ ಸಿ ಸುನೀಲ್ ಸಿಂಗ್ ಮನೆ ಮೇಲೆ ಸಿಬಿಐ ದಾಳಿ

    ಇಂದು ಬೆಳಗ್ಗೆ 7 ಗಂಟೆಗೆ ಪಾಟ್ನಾದಲ್ಲಿರುವ ಆರ್ ಜೆಡಿ ಎಂಎಲ್ ಸಿ ಸುನೀಲ್ ಸಿಂಗ್ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಸುನೀಲ್ ಸಿಂಗ್ ಅವರು ಲಾಲು ಯಾದವ್ ಅವರಿಗೆ ಆಪ್ತರು. ಸುನೀಲ್ ಮೇಲಿನ ದಾಳಿಯ ನಂತರ ಅವರ ಬೆಂಬಲಿಗರು ಧರಣಿ ಕುಳಿತಿದ್ದಾರೆ. ಈ ಹಠಾತ್ ದಾಳಿ ಹಿಂದೆ ಬಿಜೆಪಿ ಕೈವಾಡವಿದೆ. ಬಿಜೆಪಿಯ ಆಜ್ಞೆಯ ಮೇರೆಗೆ ದಾಳಿ ನಡೆಯುತ್ತಿದೆ ಎಂದಿದ್ದಾರೆ.
    Published by:renukadariyannavar
    First published: