Viral: ಒಡೆಯನ ಅಂತ್ಯಸಂಸ್ಕಾರಕ್ಕೆ ಬಂದ ಕರು, ಹಣೆಗೆ ಮುತ್ತಿಕ್ಕಿ ಕಣ್ಣೀರಿನ ವಿದಾಯ: ಭಾವುಕರಾದ ಜನ!

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಡೆದ ಮನುಷ್ಯ ಮತ್ತು ಪ್ರಾಣಿಯ ಪ್ರೀತಿಯ ವಿಶಿಷ್ಟ ಘಟನೆಯು ಭಾರೀ ಸದ್ದು ಮಾಡುತ್ತಿದೆ. ಹಜಾರಿಬಾಗ್‌ನ ಚೌತಿ ಗ್ರಾಮದಲ್ಲಿ, ಕರುವೊಂದು ತನ್ನ ಮಾಲೀಕನ ಸಾವಿನ ಬಳಿಕ ಆತನ ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ತಲುಪಿದೆ. ಅಷ್ಟೇ ಅಲ್ಲ ಚಿತೆ ಮೇಲೆ ಇಟ್ಟಿದ್ದ ಮೃತದೇಹಕ್ಕೆ ಬೇರೆಯವರೊಂದಿಗೆ ಪ್ರದಕ್ಷಿಣೆ ಹಾಕಿ ಬಾಯಿಯಲ್ಲಿ ಕಟ್ಟಿಗೆಯನ್ನು ತಂದು ಚಿತೆಯ ಮೇಲೆ ಇಟ್ಟಿದೆ.

ಒಡೆಯನ ಅಂತ್ಯಸಂಸ್ಕಾರಕ್ಕೆ ಬಂದ ಕರು, ಹಣೆಗೆ ಮುತ್ತಿಕ್ಕಿ ಕಣ್ಣೀರಿನ ವಿದಾಯ

ಒಡೆಯನ ಅಂತ್ಯಸಂಸ್ಕಾರಕ್ಕೆ ಬಂದ ಕರು, ಹಣೆಗೆ ಮುತ್ತಿಕ್ಕಿ ಕಣ್ಣೀರಿನ ವಿದಾಯ

  • Share this:
ರಾಂಚಿ(ಸೆ.12): ಪ್ರಾಣಿಗಳು (Animal) ಮತ್ತು ಮನುಷ್ಯರ ನಡುವಿನ ಪ್ರೀತಿ ಅನೇಕ ಪ್ರಕರಣಗಳು ಸದ್ದು ಮಾಡುತ್ತಲೇ ಇರುತ್ತವೆ. ಆದರೀಗ ಬೆಳಕಿಗೆ ಬಂದ ಪ್ರಕರಣ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಹೌದು ಈ ಪ್ರಕರಣವು ಹಜಾರಿಬಾಗ್ (Hazaribagh) ಜಿಲ್ಲೆಯದ್ದಾಗಿದ್ದು, ವ್ಯಕ್ತಿಯೊಬ್ಬ ಸಾವನ್ನಪ್ಪಿದ ಬಳಿಕ, ಆತ ಸಾಕಿದ್ದ ಕರು ಅವನ ಮೃತದೇಹದ ಬಳಿಗೆ ತಲುಪಿದೆ. ಅಲ್ಲದೇ ಎಲ್ಲರಂತೆ ತಾನೂ ಮೃತ ದೇಹಕ್ಕೆ ಪ್ರದಕ್ಷಿಣೆ ಹಾಕಿ ತನ್ನ ಯಜಮಾನನ ಪಾದಗಳಿಗೆ ಮತ್ತು ಹಣೆಗೆ ಮುತ್ತಿಟ್ಟಿದೆ. ಈ ದೃಶ್ಯವನ್ನು ನೋಡಿದ ಜನರು ಭಾವುಕರಾಗಿದ್ದಾರೆ. ಜಾರ್ಖಂಡ್‌ನ (Jharkhand) ಹಜಾರಿಬಾಗ್‌ನಲ್ಲಿ ನಡೆದ ಮಾನವ ಮತ್ತು ಪ್ರಾಣಿ ಪ್ರೀತಿಯ ಈ ವಿಶಿಷ್ಟ ಘಟನೆ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ: ಆಮೆಯೊಂದಿಗೆ ಆ್ಯಪಲ್ ಹಂಚಿಕೊಂಡ ಚಿಂಪಾಂಜಿ! ಈ ಪ್ರಾಣಿಗಳ ಪ್ರೀತಿ ಈಗ ನೆಟ್ಟಿಗರ ಫೇವರೇಟ್

ಅಷ್ಟೇ ಅಲ್ಲ ಚಿತೆಯ ಮೇಲೆ ಇಟ್ಟಿದ್ದ ಮೃತದೇಹಕ್ಕೆ ಬೇರೆಯವರೊಂದಿಗೆ ಪ್ರದಕ್ಷಿಣೆ ಹಾಕಿ ಬಾಯಿಯಿಂದ ತಾನೂ ಕಟ್ಟಿಗೆಯನ್ನು ತಂದು ಚಿತೆಯ ಮೇಲೆ ಇಟ್ಟಿದೆ. ಪಾರ್ಥಿವ ಶರೀರ ಪಂಚಭೂತಗಳಲ್ಲಿ ವಿಲೀನವಾಗುವವರೆಗೂ ಅಲ್ಲಿಂದ ಕದಲಲಿಲ್ಲ ಎಂದು ಹೇಳಲಾಗುತ್ತಿದೆ. ಏಕಾಏಕಿ ಸ್ಮಶಾನದಲ್ಲಿ ಮೃತದೇಹದ ಬಳಿ ಕರು ಬರುತ್ತಿರುವುದನ್ನು ಕಂಡ ಜನರು ಅದನ್ನು ಓಡಿಸಲು ಯತ್ನಿಸಿದರಾದರೂ ಅದು ಮೃತದೇಹದ ಬಳಿ ಮತ್ತೆ ಮತ್ತೆ ಬರಲಾರಂಭಿಸಿತು. ಇದಾದ ಬಳಿಕ ಅಲ್ಲಿದ್ದ ಹಿರಿಯರ ಒತ್ತಾಯದ ಮೇರೆಗೆ ಮೃತದೇಹದ ಬಳಿ ಹೋಗಲು ಅವಕಾಶ ನೀಡಿದಾಗ ಮೃತದೇಹಕ್ಕೆ ಮುತ್ತಿಟ್ಟು ಅದು ಅಳಲಾರಂಭಿಸಿದೆ. ಇದಾಧ ಬಳಿಕ ಜನರು ಕರುವಿಗೆ ಸ್ನಾನ ಮಾಡಿಸಿ ಅಂತ್ಯಕ್ರಿಯೆಯ ವಿಧಿ ವಿಧಾನಗಳಲ್ಲಿ ತೊಡಗಿಸಿಕೊಂಡರು.ಮೂರು ತಿಂಗಳ ಹಿಂದೆ ಮೇವಲಾಲ್ ಕರುವನ್ನು ಮಾರಾಟ ಮಾಡಿದ್ದರು ಎಂಬುವುದು ಉಲ್ಲೇಖನೀಯ. ಹೌದು ಈ ಇಡೀ ವಿಷಯ ನಡೆದಿದ್ದು, ಮೇವಾವಾಲ್​ ಢಾಕೂರ್​ ಮೃತಪಟ್ಟ ಪಪ್ರೋ ಗ್ರಾಮದ್ದಾಗಿದೆ. ಮೇವಾವಾಲ್​ ಬಳಿ ಹಸುವೊಂದಿತ್ತು. ಇದು ಕರುವೊಂದನ್ನು ಹಾಕಿತ್ತು. ಆದರೆ ಮೇವವಾಲ್​ ಇದನ್ನು ಮೂರು ತಿಂಗಳ ಹಿಂದೆ ಬೇರೆ ಗ್ರಾಮದ ರೈತನಿಗೆ ಮಾರಾಟ ಮಾಡಿದ್ದರು. ಹೀಗಿದ್ದರೂ ಮೇವಲಾಲ್ ಠಾಕೂರ್ ಮೃತಪಟ್ಟಾಗ ಈ ಕರು ಗ್ರಾಮವನ್ನು ತಲುಪಿ ಅಳಲು ಪ್ರಾರಂಭಿಸಿತು. ಅಷ್ಟೇ ಅಲ್ಲ, ಮೃತದೇಹದ ಹಣೆ ಮತ್ತು ಪಾದಗಳಿಗೆ ಮುತ್ತಿಟ್ಟಿದೆ. ಇನ್ನು ಮೇವವಾಲ್​ ಮೃತದೇಹ ಪಂಚಭೂತಗಳಲ್ಲಿ ಲೀನವಾಗುವವರತೆಗೂ ಈ ಕರು ಅಲ್ಲಿಂದ ಕದಲಿಲ್ಲ. ಬಟ್ಟೆಯಿಂದ ಮುಚ್ಚಿದ ಮೃತದೇಹದಿಂದ ಬಟ್ಟೆ ತೆಗೆದು, ತಲೆಗೆ ಮುತ್ತಿಕ್ಕಿ, ನಂತರ ಪಾದಗಳ ಬಳಿ ತೆರಳಿ ಅಳುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮತಯಾಚನೆ ವೇಳೆ 'ದಾಸ'ನ ಪ್ರಾಣಿ ಪ್ರೀತಿ, ಗಡ್ಡಪ್ಪನಿಗೆ ಗೌರವ: ಹೇಗಿತ್ತು ಇಂದಿನ ದರ್ಶನ್​ರ ಮತಬೇಟೆ: ವಿಡಿಯೋ ನೋಡಿ

ಮಾಲೀಕನ ಸಾವಿನ ನಂತರ ಮೃತದೇಹದ ಬಳಿ ಸ್ಮಶಾನಕ್ಕೆ ಬಂದ ಕರುವನ್ನು ನೋಡಿದ ಜನರು ಮೊದಲು ಲಘುವಾಗಿ ಪರಿಗಣಿಸಿ ನಂತರ ದೊಣ್ಣೆಯಿಂದ ಹೊಡೆದು ಓಡಿಸಲು ಪ್ರಯತ್ನಿಸಿದರು. ಆದರೆ ಕರು ಮತ್ತೆ ಮತ್ತೆ ಮೃತ ದೇಹದ ಬಳಿ ಬರಲು ಆರಂಭಿಸಿದಾಗ ಎಲ್ಲರಿಗೂ ಅಚ್ಚರಿಯುಂಟಾಗಿದೆ. ಹಿರಿಯರ ಒತ್ತಾಯದ ಮೇರೆಗೆ ಕರುವಿಗೆ ಮೃತದೇಹದ ಬಳಿ ಹೋಗಲು ಅವಕಾಶ ನೀಡಿದಾಗ ಮಾಲೀಕನ ಮುಖಕ್ಕೆ ಹಾಕಿದ್ದ ಬಟ್ಟೆಯಿನ್ನು ಬಾಯಿಯಿಂದ ಸರಿಸಿ ಮುತ್ತಿಟ್ಟು ನಂತರ ಕಾಲಿಗೆ ಮುತ್ತಿಟ್ಟು ಕರು ಕಣ್ಣೀರು ಹಾಕಿದೆ. ಈ ದೃಶ್ಯವನ್ನು ಕಂಡು ಎಲ್ಲರ ಕಣ್ಣುಗಳು ತೇವಗೊಂಡಿವೆ. ಅಲ್ಲಿದ್ದವರೆಲ್ಲಾ ಸಂತಾನವಿಲ್ಲದೆ ಸತ್ತ ಮೇವಲಾಲನ ಮಗನೆಂದೇ ಈ ಕರುವನ್ನು ಪರಿಗಣಿಸಿ ಅಂತ್ಯಸಂಸ್ಕಾರ ವಿಧಿ ವಿಧಾನದಲ್ಲಿ ಭಾಗಿಯಾಗಿಸಿದರು. ಈ ಇಡೀ ಘಟನೆಯನ್ನು ಜನರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಸದ್ಯ ಇದು ವೈರಲ್ ಆಗಿದೆ.
Published by:Precilla Olivia Dias
First published: