ಚುನಾವಣೆ ಹೊತ್ತಲ್ಲೇ ಜಾರ್ಖಂಡ್ ಬಿಜೆಪಿಗೆ ಶಾಕ್; ಪ್ರವೀಣ್ ಪ್ರಭಾಕರ್ ರಾಜೀನಾಮೆ; ಆತ್ಮಾವಲೋಕನಕ್ಕೆ ಸಲಹೆ ನೀಡಿ ಪಕ್ಷ ಬಿಟ್ಟ ನಾಯಕ

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಬಗ್ಗೆ ಈಗಲೂ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿರುವ ಪ್ರವೀಣ್ ಪ್ರಭಾಕರ್ ಅವರು ಜಾರ್ಖಂಡ್ ಘಟಕದ ಬಿಜೆಪಿಯ ವ್ಯವಹಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

Vijayasarthy SN | news18
Updated:December 2, 2019, 1:54 PM IST
ಚುನಾವಣೆ ಹೊತ್ತಲ್ಲೇ ಜಾರ್ಖಂಡ್ ಬಿಜೆಪಿಗೆ ಶಾಕ್; ಪ್ರವೀಣ್ ಪ್ರಭಾಕರ್ ರಾಜೀನಾಮೆ; ಆತ್ಮಾವಲೋಕನಕ್ಕೆ ಸಲಹೆ ನೀಡಿ ಪಕ್ಷ ಬಿಟ್ಟ ನಾಯಕ
ಪ್ರಾತಿನಿಧಿಕ ಚಿತ್ರ
  • News18
  • Last Updated: December 2, 2019, 1:54 PM IST
  • Share this:
ನವದೆಹಲಿ(ಡಿ. 02): ಜಾರ್ಖಂಡ್​ನಲ್ಲಿ ಬಿಜೆಪಿಯ ಪ್ರಮುಖ ಟ್ರಂಪ್ ಕಾರ್ಡ್​ಗಳಲ್ಲಿ ಒಂದಾಗಿದ್ದ ಹಿರಿಯ ನಾಯಕ ಪ್ರವೀಣ್ ಪ್ರಭಾಕರ್ ಅವರು ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಜಾರ್ಖಂಡ್​ನಲ್ಲಿ ಚುನಾವಣೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಪ್ರವೀಣ್ ರಾಜೀನಾಮೆ ಕೊಟ್ಟಿರುವುದು ಬಿಜೆಪಿಗೆ ಆಘಾತಕಾರಿ ಎನಿಸಿದೆ. ರಾಜ್ಯ ಬಿಜೆಪಿ ನಾಯಕರ ನಡವಳಿಕೆ ಮತ್ತು ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಹಂಚಿಕೆ ಬಗ್ಗೆ ಅಸಮಾಧಾನದಿಂದ ಅವರು ಪಕ್ಷ ತೊರೆದಿರುವುದು ತಿಳಿದುಬಂದಿದೆ. ಕಾನ್ರಾಡ್ ಕೆ. ಸಾಂಗ್ಮ ಸಂಸ್ಥಾಪಿತ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್​ಪಿಪಿ) ಪಾಳಯ ಸೇರಿಕೊಂಡಿದ್ದಾರೆ. ಎನ್​ಪಿಪಿ ಪಕ್ಷದ ಟಿಕೆಟ್​ನಿಂದಲೇ ನಾಳ ಕ್ಷೇತ್ರದಿಂದ ಪ್ರವೀಣ್ ಪ್ರಭಾಕರ್ ಸ್ಪರ್ಧಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಬಗ್ಗೆ ಈಗಲೂ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿರುವ ಪ್ರವೀಣ್ ಪ್ರಭಾಕರ್ ಅವರು ಜಾರ್ಖಂಡ್ ಘಟಕದ ಬಿಜೆಪಿಯ ವ್ಯವಹಾರದ ವಿರುದ್ಧ ಬೇಸರ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಬೆಳಗೆದ್ದು ಬಂಗಾಳದ ಸಿಎಂ ದೀದಿ ಪೋಟೋ ನೋಡಿದರೆ ವಿಚಿತ್ರ ಶಕ್ತಿ ಸಿಗುತ್ತೆ; ಟೀಕೆಗೊಳಗಾಯ್ತು ಅಧಿಕಾರಿಯ ಈ ಹೇಳಿಕೆ

ಬಿಜೆಪಿ ವಿರುದ್ಧ ನನಗೆ ವೈಯಕ್ತಿಕವಾಗಿ ವೈಮನಸ್ಸು ಇಲ್ಲ. ನರೇಂದ್ರ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುತ್ತಿದೆ. ಆದರೆ, ಜಾರ್ಖಂಡ್​ನಲ್ಲಿ ಜನರ ಆಶೋತ್ತರಗಳಿಗೆ ಧಕ್ಕೆಯಾಗುತ್ತಿದೆ. ಜಾರ್ಖಂಡ್ ಬಿಜೆಪಿಯಲ್ಲಿ ಆತ್ಮವಿಮರ್ಶೆ ನಡೆಯಬೇಕಿದೆ. ಜಾರ್ಖಂಡ್ ಅಭಿವೃದ್ಧಿಗೋಸ್ಕರ ನಾನು ಪ್ರತ್ಯೇಕ ರಾಜ್ಯದ ರಚನೆಯ ಹೋರಾಟಕ್ಕೆ ಜೀವನ ಮುಡಿಪಾಗಿಟ್ಟಿದ್ದೆ. ಈಗ ಜಾರ್ಖಂಡ್ ಅಭಿವೃದ್ಧಿಯ ದೃಷ್ಟಿಯಿಂದಲೇ ಬಿಜೆಪಿ ತೊರೆದು ಎನ್​ಪಿಪಿ ಸೇರಿದ್ದೇನೆ ಎಂದು ಪ್ರವೀಣ್ ಪ್ರಭಾಕರ್ ಹೇಳಿದ್ದಾರೆ.

ಜಾರ್ಖಂಡ್ ಪ್ರತ್ಯೇಕ ರಾಜ್ಯ ರಚನೆಯ ಹೋರಾಟಗಳಲ್ಲಿ ಪ್ರವೀಣ್ ಪ್ರಭಾಕರ್ ಮುಂಚೂಣಿಯಲ್ಲಿದ್ದವರು. ಅಖಿಲ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ (ಎಜೆಎಸ್​ಯು) ಸಂಘಟನೆಯ ಸಂಸ್ಥಾಪಕ ಸದಸ್ಯರಾಗಿರುವ ಅವರು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಪಕ್ಷದ ಸ್ಟಾರ್​ಗಳಲ್ಲಿ ಒಬ್ಬರಾಗಿದ್ದ ಅವರು ವಕ್ತಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ನನ್ನ ಮಗ ಅತ್ಯಾಚಾರಿ ಆತನನ್ನು ಗುಂಡಿಟ್ಟು ಕೊಲ್ಲಿ; ತೆಲಂಗಾಣ ಪಶುವೈದ್ಯೆಯ ಕೊಲೆ ಆರೋಪಿ ತಾಯಿಯ ಆಕ್ರೋಶ

ಇನ್ನು, ಪ್ರವೀಣ್ ಸೇರ್ಪಡೆಯಾಗಿರುವ ಎನ್​ಪಿಪಿ ಪಕ್ಷವನ್ನು ಸ್ಥಾಪಿಸಿದ್ದು ಮೇಘಾಲಯ ಸಿಎಂ ಕಾನ್ರಾಡ್ ಕೆ. ಸಾಂಗ್ಮ. ಮಾಜಿ ಲೋಕಸಭಾ ಸ್ಪೀಕರ್ ಪಿ.ಎ. ಸಾಂಗ್ಮಾ 2013ರಲ್ಲಿ ಸ್ಥಾಪಿಸಿದ್ದ ಎನ್​ಪಿಪಿ ಪಕ್ಷಕ್ಕೆ ಚುನಾವಣಾ ಆಯೋಗ ರಾಷ್ಟ್ರೀಯ ಪಕ್ಷದ ಮಾನ್ಯತೆ ಕೊಟ್ಟಿದೆ.ಮೇಘಾಲಯದ ಆಚೆ ದೇಶಾದ್ಯಂತ ಪಕ್ಷವನ್ನು ವಿಸ್ತರಿಸುವುದು ತಮ್ಮ ತಂದೆಯ ಕನಸಾಗಿತ್ತು. ಪ್ರವೀಣ್ ಪ್ರಭಾಕರ್ ಆಗಮನದಿಂದ ಜಾರ್ಖಂಡ್ ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗೆ ಪುಷ್ಟಿ ನೀಡಿದಂತಾಗುತ್ತದೆ ಎಂದು ಕಾನ್ರಾಡ್ ಸಾಂಗ್ಮ ಹೇಳಿದ್ದಾರೆ.

81 ಸದಸ್ಯ ಬಲದ ಜಾರ್ಖಂಡ್ ರಾಜ್ಯದಲ್ಲಿ ಬಿಜೆಪಿ ಮತ್ತು ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟದ ಮೈತ್ರಿ ಸರ್ಕಾರ ಆಡಳಿತದಲ್ಲಿತ್ತು. ಈಗ ಐದು ಹಂತಗಳ ವಿಧಾನಸಭಾ ಚುನಾವಣೆ ಪ್ರಾರಂಭವಾಗಿದೆ. ನ. 30ರಂದು ಮೊದಲ ಹಂತದ ಚುನಾವಣೆ ಆಗಿದೆ. ಡಿ. 7, 12, 16 ಮತ್ತು 20ರಂದು ಉಳಿದ ನಾಲ್ಕು ಹಂತಗಳ ಚುನಾವಣೆಯಾಗಲಿದೆ. ಡಿ. 23ರಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟಗೊಳ್ಳುತ್ತದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 2, 2019, 1:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading