ಚಳಿ, ಮಳೆ, ಗಾಳಿ, ಬಿಸಿಲು, ಹಗುಲು-ರಾತ್ರಿ ಎನ್ನದೇ ದೇಶದ ಸುರಕ್ಷತೆಗಾಗಿ ಜೀವನ ಮೂಡಿಪಿಟ್ಟಿರುತ್ತಾರೆ ನಮ್ಮ ಭಾರತೀಯ ಯೋಧರು (Soldiers). ಗಡಿಯಲ್ಲಿ ನಿಂತುಕೊಂಡು ಶತ್ರು ರಾಷ್ಟ್ರಗಳು ಒಳ ನುಸುಳದಂತೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನಮಗಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹ ವೀರ ಯೋಧರಿಗೆ ಪುಣೆಯ (Pune) ಆಭರಣ (Jewelry) ಕಂಪನಿ ಹೊಸ ಯೋಜನೆಯೊಂದನ್ನು ಘೋಷಿಸಿದೆ. ಬೆಳ್ಳಿ, ಬಂಗಾರ, ವಜ್ರ, ಬೇರೆ ಬೇರೆ ರಾಜ್ಯಗಳ ಮಣ್ಣನ್ನು ಬಳಸಿ ತಯಾರಿಸಿದ ಉಂಗುರವನ್ನು ಯೋಧರಿಗೆ ಉಡುಗೊರೆಯಾಗಿ ನೀಡಲಿದೆ. ಆ ಉಂಗುರಕ್ಕೆ ಬದ್ಧತಾ ಉಂಗುರ (Commitment Ring) ಎಂದು ಹೆಸರು ಇಟ್ಟಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ (Independence) ದೊರಕಿ 75 ವರ್ಷಗಳು ಆಗುತ್ತಿರುವ ಹಿನ್ನೆಲೆ ಈ ಯೋಜನೆ ಘೋಷಿಸಲಾಗಿದೆ.
ಏಕ್ ಇಂಡಿಯಾ ಮಿಷನ್ ಯೋಜನೆ
ಪುಣೆಯ ಆಭರಣ ಕಂಪನಿಯಾದ ಬೋನಿಸಾ, ನಮ್ಮ ಭಾರತೀಯ ಯೋಧರಿಗಾಗಿ ಏಕ್ ಇಂಡಿಯಾ ಮಿಷನ್ ಎಂಬ ಹೊಸ ಯೋಜನೆಯನ್ನು ಘೋಷಿಸಿದೆ. ದೇಶ ಕಾಯೋ ಸೈನಿಕರಿಗೆ ಕಮಿಟ್‍ಮೆಂಟ್ ರಿಂಗ್ ಅಂದ್ರೆ ಬದ್ಧತಾ ಉಂಗುರವನ್ನು ನೀಡಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷವಾದ ಹಿನ್ನೆಲೆ ಈ ಯೋಜನೆಯನ್ನು ಬೋನಿಸಾ ಕಂಪನಿ ಜಾರಿ ಮಾಡಿದೆ.
ಬದ್ಧತಾ ಉಂಗುರುದ ವಿಶೇಷತೆ ಏನು?
ಬದ್ಧತಾ ಉಂಗುರವನ್ನು ಬೆಳ್ಳಿ, ಬಂಗಾರ, ವಜ್ರ, ನಮ್ಮ ದೇಶದ ಬೇರೆ, ಬೇರೆ ರಾಜ್ಯಗಳ ಮಣ್ಣನ್ನು ಬಳಸಿ ತಯಾರಿಸಲಾಗುತ್ತೆ. ಬೆಳ್ಳೆಯು ಶಾಂತಿಯ ಸಂಕೇತವಾಗಿದೆ. ಬಂಗಾರ ಭಾರತದ ಸಂಕೇತ, ದೇಶದ ಎಲ್ಲಾ ರಾಜ್ಯದ ಮಣ್ಣು ಏಕತೆಯ ಸಂಕೇತ. ದೇಶದಲ್ಲಿ ನಾವೆಲ್ಲರೂ ವಜ್ರ ಇದ್ದಂತೆ ಎಂದು ವಜ್ರವನ್ನೂ ಸಹ ಉಂಗುರಕ್ಕೆ ಹಾಕಲಾಗಿದೆ. ಉಂಗುರವನ್ನು ಬೆಳ್ಳಿಯಲ್ಲಿ ಮಾಡಲಾಗಿದೆ. ಅದರ ಮೇಲೆ ಭಾರತ ಎಂದು ಬರೆಯಲಾಗಿದೆ.
ಇದನ್ನೂ ಓದಿ: AIFD Recruitment: ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ 54 ಸಾವಿರ ರೂ ವೇತನ
ಎಷ್ಟು ಯೋಧರಿಗೆ ಸಿಗಲಿದೆ ಗಿಫ್ಟ್?
ಪುಣೆಯ ಬೋನಿಸಾ ಕಂಪನಿ ಯೋಧರಿಗಾಗಿ ಕಮಿಟ್‍ಮೆಂಟ್ ರಿಂಗ್ ಗಿಫ್ಟ್ ಘೋಷಿಸಿದೆ. ಈ ವರ್ಷ 7,500 ಯೋಧರಿಗೆ ಈ ಉಡುಗೊರೆ ಸಿಗಲಿದೆ. ನಿನ್ನೆ ಯೋಜನೆಯ ಅಂಗವಾಗಿ ಖಾಡ್ಕಿಯ ಪ್ಯಾರಾಪ್ಲೆಜಿಕ್ ರಿಹ್ಯಾಬಿಲಿಟೇಷನ್ ಕೇಂದ್ರದ 88 ಹಿರಿಯ ಸೈನಿಕರಿಗೆ ಬೋನಿಸಾ ಕಂಪನಿ ಈ ಉಡುಗೊರೆ ನೀಡಿದೆ.
ಬೋನಿಸಾ ಕಂಪನಿಯ ಪಾಲುದಾರ ಸಂಕೇತ್ ಬಿಯಾನಿ ಹೇಳಿದ್ದೇನು?
ಬೋನಿಸಾ ಕಂಪನಿಯು ಉಂಗುರದ ಉಡುಗೊರೆಗೆ ಬದ್ಧತಾ ಉಂಗುರ ಎಂದು ಹೆಸರಿಟ್ಟಿದೆ. ಬದ್ಧತೆ ಕೇವಲ ಗಂಡ-ಹೆಂಡತಿ ಅಥವಾ ಇತರ ಸಂಬಂಧಗಳಿಗೆ ಸೀಮಿತವಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಬದ್ಧತೆ ನಮ್ಮ ದೇಶಕ್ಕೂ ಇದೆ ಆದ ಕಾರಣ ನಾವು ಈ ಬದ್ಧತಾ ರಿಂಗ್ ನೀಡುತ್ತಿದ್ದೇವೆ. ಉಂಗುರವನ್ನು ಬೆಳ್ಳಿಯಲ್ಲಿ ಮಾಡಲಾಗಿದೆ. ಅದರ ಮೇಲೆ ಭಾರತ ಎಂದು ಬರೆಯಲಾಗಿದೆ ಎಂದು ಸಂಕೇತ್ ಬಿಯಾನಿ ಹೇಳಿದ್ದಾರೆ.
ಇದನ್ನೂ ಓದಿ: Indian Army: ಗಡಿ ದಾಟಿ ಭಾರತಕ್ಕೆ ಬಂದ 3 ವರ್ಷದ ಪಾಕಿಸ್ತಾನಿ ಬಾಲಕ! ಮಾನವೀಯತೆ ಮೆರೆದ ಭಾರತೀಯ ಸೇನೆ
ಕಂಪನಿಯ ಉಡುಗೊರೆ ಅಭಿಯಾನದಲ್ಲಿ ನೀವು ಭಾಗಿಯಾಗಬಹುದು.
ಕಂಪನಿಯ ಈ ಬದ್ಧತಾ ಉಂಗುರ ಅಭಿಯಾನದಲ್ಲಿ ದಾನಿಗಳು ಭಾಗಿಯಾಗಬಹುದು ಎಂದು ಬೋನಿಸಾ ಕಂಪನಿಯ ಪಾಲುದಾರ ಸಂಕೇತ್ ಬಿಯಾನಿ ಹೇಳಿದ್ದಾರೆ. ಯಾರಾದರೂ ನಮ್ಮ ಸೈನಿಕರಿಗೆ ಈ ಉಂಗುರವನ್ನು ಉಡುಗೊರೆಯಾಗಿ ನೀಡಬಹುದು ಮತ್ತು ನಮ್ಮ ವೆಬ್‍ಸೈಟ್ www.Indiaek.Com ಗೆ ಭೇಟಿ ನೀಡುವ ಮೂಲಕ ಈ ಚಳುವಳಿಯ ಭಾಗವಾಗಬಹುದು ಅಥವಾ ನಮ್ಮ Bonisabysanbal ಇನ್‍ಸ್ಟಾಗ್ರಾಂ ಖಾತೆಗೆ ಭೇಟಿ ನೀಡಬಹುದು. ಅಲ್ಲದೆ, ಜನರ ಕೊಡುಗೆಗಳ ಸಹಾಯದಿಂದ ನಾವು ಅದನ್ನು ಉಡುಗೊರೆಯಾಗಿ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದು ಸಂಕೇತ್ ಬಿಯಾನಿ ಹೇಳಿದ್ದಾರೆ.
ನಿಮಗೂ ಯೋಧರಿಗೆ ಉಂಗುವನ್ನು ಉಡುಗೊರೆ ನೀಡಬೇಕು ಅನ್ನಿಸಿದ್ರೆ ಕಂಪನಿ ಜೊತೆ ಕೈ ಜೋಡಿಸಬಹುದು. ನಿಮ್ಮ ಸಹಾಯವನ್ನು ಕಂಪನಿ ಯೋಧರಿಗೆ ತಲುಪಿಸುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ