ಮುಂಬೈನಲ್ಲಿ ಹನಿಟ್ರ್ಯಾಪ್ ಮಾಡಿ ಚಿನ್ನದ ವ್ಯಾಪಾರಿಯನ್ನು ವಂಚಿಸಿದ್ದ ಮಹಿಳೆಯರು ಅಂದರ್!

ಸಾಂರ್ಭಿಕ ಚಿತ್ರ

ಸಾಂರ್ಭಿಕ ಚಿತ್ರ

ಹಣ ದೋಚಿದ ಬಳಿಕ ಆನ್ಲೈನ್ನಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಹಣ ನೀಡದಿದ್ದರೆ ರಜ್ಪೂತ್ ಕುಟುಂಬಕ್ಕೆ ವಿಡಿಯೋ ಶೇರ್ ಮಾಡುವುದಾಗಿ ಹೇಳಿ 4,500 ರೂ. ಪಡೆದಿದ್ದಾಳೆ. ಬಳಿಕ ಎರಡು ದಿನದಿಂದ ಆರೋಪಿಯ ದುರ್ಗಾಸಿಂಗ್ ಅವರಿಗೆ ಪದೇ ಪದೇ ಕರೆಸಿಕೊಂಡು ಹೆಚ್ಚಿನ ಹಣ ತರುವಂತೆ ಒತ್ತಾಯಿಸಿದರು.

ಮುಂದೆ ಓದಿ ...
 • Share this:

  ಮುಂಬೈ(ಫೆ.09): ಆನ್​ಲೈನ್​​ ಮೂಲಕ ಹಲವು ವ್ಯವಹಾರಗಳು ಹೆಚ್ಚಾದಂತೆ ವಂಚನೆಯ ಪ್ರಕರಣಗಳು ಕೇಳಿಬರುತ್ತಿವೆ. ಹಣದ ಆಸೆಗೆ ದೂರದಿಂದ ಮತ್ತೊಬ್ಬರನ್ನು ವಂಚಿಸಿ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಇದೇ ರೀತಿ ಮುಂಬೈನ ಚಿನ್ನದ ಆಭರಣದ ವ್ಯಾಪಾರಿಯನ್ನು ಹನಿಟ್ರ್ಯಾಪ್ ಮೂಲಕ ಹಣ ಸುಲಿಗೆ ಮಾಡಿದ ಆರೋಪದ ಹಿನ್ನಲೆ ಇಬ್ಬರು ಮಹಿಳೆಯರು ಇದೀಗ ಮುಂಬೈ ಪೊಲೀಸರ ಅತಿಥಿಯಾಗಿದ್ದಾರೆ.


  ಆಭರಣ ವ್ಯಾಪಾರಿ ದುರ್ಗಾಸಿಂಗ್ ರಜಪೂತ್ ಬಳಿಗೆ ಪ್ರಕರಣದ ಮುಖ್ಯ ಆರೋಪಿ ಪ್ರಜಕ್ತ ಪಾಟೀಲ್ ತನ್ನ ಚಿನ್ನಾಭರಣವನ್ನು ಅಡಮಾನ ಇಡಲು ದುರ್ಗಾಸಿಂಗ್ ಅವರ ಆಭರಣದ ಶೋ ರೂಂಗೆ ಬಂದಾಗ ಪರಿಚಿತರಾಗಿದ್ದರು. ಈ ವೇಳೆ ಇಬ್ಬರು ಆತ್ಮೀಯರಾಗಿದ್ದ ಇವರು, ಫೆ.3ರಂದು ದುರ್ಗಾಸಿಂಗ್ ಅವರನ್ನು ಪ್ರಜಕ್ತ ತಮ್ಮ ಮನೆಗೆ ಆಹ್ವಾನಿಸಿದ್ದಳು.


  ಮನೆಗೆ ಬಂದ ಬಳಿಕ ಇಬ್ಬರು ದೈಹಿಕವಾಗಿ ಸೇರಿದ್ದಾರೆ. ಇಬ್ಬರು ಸೇರಿದ ವಿಡಿಯೋವನ್ನು ರೆಕಾರ್ಡ್ ಮಾಡಿದ್ದ ಪ್ರಜಕ್ತ, ವಿಡಿಯೋವನ್ನು ದುರ್ಗಾಸಿಂಗ್ ಅವರಿಗೆ ತೋರಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಳು. ಬಳಿಕ ದುರ್ಗಾಸಿಂಗ್ ಅವರ ಬಳಿ ಬಲವಂತವಾಗಿ ಹಣ ಮತ್ತು ಆತನು ಧರಿಸಿದ್ದ ಆಭರಣಗಳನ್ನು ಕಿತ್ತುಕೊಂಡಿದ್ದಳು.


  ಮಸ್ಕಿ ಉಪಚುನಾವಣೆ: ಕಾಂಗ್ರೆಸ್​-ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ: ಜೆಡಿಎಸ್ ಎಲೆಕ್ಷನ್​ನಿಂದ​​ ದೂರ ಉಳಿಯುವ ಸಾಧ್ಯತೆ


  ಖಾಸಗಿ ವಿಡಿಯೋ ಮಾಡಿ ಅಪ್ಲೋಡ್ ಮಾಡುವ ಬೆದರಿಕೆ!


  ಹಣ ದೋಚಿದ ಬಳಿಕ ಆನ್ಲೈನ್ನಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಹಣ ನೀಡದಿದ್ದರೆ ರಜ್ಪೂತ್ ಕುಟುಂಬಕ್ಕೆ ವಿಡಿಯೋ ಶೇರ್ ಮಾಡುವುದಾಗಿ ಹೇಳಿ 4,500 ರೂ. ಪಡೆದಿದ್ದಾಳೆ. ಬಳಿಕ ಎರಡು ದಿನದಿಂದ ಆರೋಪಿಯ ದುರ್ಗಾಸಿಂಗ್ ಅವರಿಗೆ ಪದೇ ಪದೇ ಕರೆಸಿಕೊಂಡು ಹೆಚ್ಚಿನ ಹಣ ತರುವಂತೆ ಒತ್ತಾಯಿಸಿದರು.


  ಶನಿವಾರದಂದು ದುರ್ಗಾಸಿಂಗ್ ಅವರು ವಲಿವ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 394, 364 (ಎ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪ್ರಜಕ್ತ ಸೇರಿ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಸಾಥ್ ನೀಡಿದ ವ್ಯಕ್ತಿಯೂ ತಪ್ಪಿಸಿಕೊಂಡಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  Published by:Latha CG
  First published: