Guinness World Record: ಕೇರಳದ ಆಭರಣ ವ್ಯಾಪಾರಿಯಿಂದ ವಿಶ್ವದಾಖಲೆ! 24,679 ವಜ್ರಗಳನ್ನು ಹೊಂದಿರುವ ಉಂಗುರ ವಿನ್ಯಾಸ

ಪ್ರಪಂಚದಾದ್ಯಂತ ಜನರು ಅಥವಾ ಜನರ ಗುಂಪುಗಳು ರಚಿಸಿದ ವಿವಿಧ ದಾಖಲೆಗಳ ಕುರಿತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಿಯಮಿತವಾಗಿ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಲೆ ಇರುತ್ತದೆ. ಇತ್ತಿಚೀಗೆ ಅದು ಹಂಚಿಕೊಂಡ ಒಂದು ಮಾಹಿತಿ ಪ್ರಕಾರ ಕೇರಳ ಮೂಲದ ಎಸ್‌ಡಬ್ಲ್ಯೂಎ ಡೈಮಂಡ್ಸ್ ಒಂದು ಹೊಸ ಅದ್ಭುತ ದಾಖಲೆಯನ್ನು ಸೃಷ್ಟಿಸಿರುವುದನ್ನು ಹೇಳಿದೆ.

24,679 ವಜ್ರಗಳನ್ನು ಹೊಂದಿರುವ ಉಂಗುರ

24,679 ವಜ್ರಗಳನ್ನು ಹೊಂದಿರುವ ಉಂಗುರ

  • Share this:
ಜಗತ್ತಿನಲ್ಲಿ ದಿನದಿನಕ್ಕೂ ಹೊಸ ಹೊಸ ವಿಷಯಗಳು ನಡೆಯುತ್ತಲೆ ಇರುತ್ತವೆ. ಅದರಲ್ಲಿ ಈ ಫ್ಯಾಶನ್‌ಗೆ (Fashion) ಸಂಬಂಧಪಟ್ಟಂತೆ ದಿನಕ್ಕೊಂದರಂತೆ ಟ್ರೆಂಡ್‌ಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಅದರಲ್ಲೂ ಈ ಆಭರಣಗಳ (Jewellery) ವಿಷಯಕ್ಕೆ ಬಂದರಂತೂ ಮುಗೀತು ಕತೆ. ಇತ್ತಿಚೀಗೆ ಆಭರಣ ಪ್ರಿಯರು ಜಾಸ್ತಿಯಾಗುತ್ತಿರುವ ಕಾರಣ ಕ್ಷಣಕ್ಕೊಂದು ಆಭರಣಗಳು ಹುಟ್ಟಿಕೊಳ್ಳುತ್ತಲೇ ಇವೆ. ಹಾಗೆಯೇ ಆಭರಣ ಸಂಸ್ಥೆಗಳು ನಮ್ಮ ಸಂಸ್ಥೆ ಇನ್ನು ಹೆಚ್ಚು ಹೆಸರು ಮಾಡಬೇಕು ಎಂದು ವಿಶಿಷ್ಟತೆಯಿಂದ ಕೂಡಿರುವ ಆಭರಣಗಳನ್ನು ತಯಾರಿಸುವ ಖಯಾಲಿ ಹೆಚ್ಚಾಗಿದೆ. ಪ್ರಪಂಚದಾದ್ಯಂತ ಜನರು ಅಥವಾ ಜನರ (People) ಗುಂಪುಗಳು ರಚಿಸಿದ ವಿವಿಧ ದಾಖಲೆಗಳ ಕುರಿತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (Guinness World Records) ನಿಯಮಿತವಾಗಿ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಲೆ ಇರುತ್ತದೆ.

ಇತ್ತೀಚೆಗೆ ಅದು ಹಂಚಿಕೊಂಡ ಒಂದು ಮಾಹಿತಿ ಪ್ರಕಾರ ಕೇರಳ ಮೂಲದ ಎಸ್‌ಡಬ್ಲ್ಯೂಎ ಡೈಮಂಡ್ಸ್ ಒಂದು ಹೊಸ ಅದ್ಭುತ ದಾಖಲೆಯನ್ನು ಸೃಷ್ಟಿಸಿರುವುದನ್ನು ತಿಳಿಸಿದೆ.

ಹೆಚ್ಚು ವಜ್ರಗಳನ್ನು ಹೊಂದಿರುವ ಉಂಗುರ
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್​ನ ಒಂದು ಬ್ಲಾಗ್‌ನಲ್ಲಿ 'ಹೆಚ್ಚು ವಜ್ರಗಳನ್ನು ಹೊಂದಿರುವ ಉಂಗುರʼ ವು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಎಂದು ಹೆಸರು ಪಡೆದ ವಿಶ್ವ ದಾಖಲೆಗಳ ಪಟ್ಟಿಯಲ್ಲಿ ಹೇಗೆ ಸ್ಥಾನವನ್ನು ಪಡೆಯಿತು ಎಂಬುದನ್ನು ವಿವರಿಸಿದೆ. ಕೇರಳದ ಕರಥೋಡ್‌ನಲ್ಲಿ ಮೇ 5 ರಂದು ಆಭರಣ ವ್ಯಾಪಾರಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

24,679 ನೈಸರ್ಗಿಕ ವಜ್ರಗಳ ಬಳಕೆ
ಅಮಿ' ಎಂಬ ಅಣಬೆ ಆಕಾರದ ಉಂಗುರವನ್ನು ತಯಾರಿಸಲು 24,679 ನೈಸರ್ಗಿಕ ವಜ್ರಗಳನ್ನು ಬಳಸಲಾಗಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಬ್ಲಾಗ್ ವರದಿ ಮಾಡಿದೆ. ಮಶ್ರೂಮ್ ಅಥವಾ ಅಣಬೆ ಎಂದು ಕರೆಯುವ ಇದು 'ಅಮರತ್ವ' ಮತ್ತು 'ದೀರ್ಘಾಯುಷ್ಯ'ವನ್ನು ಪ್ರತಿನಿಧಿಸಿದರೆ, ಅಮಿ ಎಂಬ ಅರ್ಥಕ್ಕೆ ಸಂಸ್ಕೃತದಲ್ಲಿ ಅಮರತ್ವ ಎಂಬುದಾಗಿದೆ. "ರೆಕಾರ್ಡ್ ಬ್ರೇಕಿಂಗ್ ಉಂಗುರವನ್ನು ಅವರ ಬ್ರ್ಯಾಂಡ್ ಎಂದರೆ ತಮ್ಮ ಆಭರಣ ಸಂಸ್ಥೆಯು ಎಲ್ಲರ ಗಮನ ಸೆಳೆಯಲು ಆಭರಣ ವ್ಯಾಪಾರಿಯು ಈ ಆಭರಣವನ್ನು ತಯಾರಿಸಿದ್ದಾರೆ.

ಈ ಉಂಗುರ ತಯಾರಿಸಿದ್ದು ಹೇಗೆ
ಈ ಉಂಗುರವನ್ನು ಹೇಗೆ ತಯಾರಿಸಲಾಗಿದೆ ಎಂಬುದನ್ನು ಬ್ಲಾಗ್ ವಿವರಿಸುತ್ತದೆ. ಮೊದಲಿಗೆ, 41 ವಿಶಿಷ್ಟವಾದ ಅಣಬೆ ದಳಗಳನ್ನು ಹೊಂದಿರುವ ಉಂಗುರದ ಮೂಲ ಮಾದರಿಯನ್ನು ಪ್ಲಾಸ್ಟಿಕ್ ಅಚ್ಚು ಬಳಸಿ ವಿನ್ಯಾಸಗೊಳಿಸಲಾಗಿದೆ ಮತ್ತು ನಂತರ 3D ಮುದ್ರಣದ ಮೂಲಕ ಡಿಜಿಟಲ್ ಮೂಲವನ್ನು ಮರುಸೃಷ್ಟಿಸಲಾಗಿದೆ. ಅದರ ನಂತರ, ಆ ಉಂಗುರದ ಅಚ್ಚಿಗೆ ದ್ರವ ಚಿನ್ನವನ್ನು ತುಂಬಲಾಗಿದೆ. ಉಂಗುರದ ಬೇಸ್‌ ತುಂಬಿದ ನಂತರ, ಅಣಬೆ ಆಕಾರದ ದಳಗಳ ಪ್ರತಿ ಬದಿಯಲ್ಲಿ ವಜ್ರಗಳನ್ನು ಪ್ರತ್ಯೇಕವಾಗಿ ಕೈಯಿಂದ ಇರಿಸಲಾಗಿದೆ.

ಇದನ್ನೂ ಓದಿ: Chess Olympiad: ಚೆಸ್ ಒಲಿಂಪಿಯಾಡ್ ಸಂಭ್ರಮ! ನೇಪಿಯರ್ ಬ್ರಿಡ್ಜ್​ ರೋಡ್ ಲುಕ್ ವೈರಲ್

ಕೊನೆಯದಾಗಿ, ಆಭರಣದ ತುಣುಕನ್ನು ಪೂರ್ಣಗೊಳಿಸಲು ಅಲಂಕೃತ ಅಣಬೆಯ ಆಕಾರವನ್ನು ವೃತ್ತಾಕಾರದ ಬ್ಯಾಂಡ್‌ನಲ್ಲಿ ಇರಿಸಲಾಗಿದೆ. ಈ ಉಂಗುರದ ವಿಶಿಷ್ಟತೆ ಏನೆಂದರೆ ಇದು ಭಾಗಶಃ ವಜ್ರಗಳಿಂದ ತುಂಬಿದೆ.

ಹಾಗಿದ್ರೆ ಈ ಉಂಗುರದ ಬೆಲೆ ಎಷ್ಟಿರಬಹುದು
SWA ಡೈಮಂಡ್ಸ್ ಪ್ರಕಾರ, ಸಿದ್ಧಪಡಿಸಿದ ಉಂಗುರವು 340 ಗ್ರಾಂ ತೂಗುತ್ತದೆ ಮತ್ತು $95,243 ಆಗಿದ್ದು, ಭಾರತದ ರೂಪಾಯಿಗಳಲ್ಲಿ ಅಂದಾಜು ರೂ. 76,08,787.07 ಆಗಿದೆ. " ನೀವು ಬಯಸಿದ ರೀತಿಯಲ್ಲಿ ನಿಮ್ಮ ಕನಸುಗಳನ್ನು ಸಾಧಿಸಿ, ಅವುಗಳೊಂದಿಗೆ ಬದುಕುವುದಕ್ಕಿಂತ ಹೆಚ್ಚಿನ ಸಂತೋಷ ಮತ್ತೊಂದು ಇಲ್ಲ. ನಾವು ಹೊಸ ಗಿನ್ನೆಸ್ ವಿಶ್ವ ದಾಖಲೆಯ ಶೀರ್ಷಿಕೆಯನ್ನು ಗಳಿಸಿದ್ದೇವೆ ಎಂದು ತಿಳಿದ ನಂತರ ನಮ್ಮ ತಂಡವು ಮಾನಸಿಕ ತೃಪ್ತಿಯನ್ನು ಹೊಂದಿದೆ" ಎಂದು SWA ಡೈಮಂಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಗಫೂರ್ ಅನಾದಿಯಾನ್ ಗಿನ್ನೆಸ್ ವರ್ಲ್ಡ್‌ ರೆಕಾರ್ಡ್‌ ಗೆ ತಿಳಿಸಿದರು.

ಇದನ್ನೂ ಓದಿ:  Kareena In Traffic Light: ಟ್ರಾಫಿಕ್ ಲೈಟ್​ನಲ್ಲಿ ಕರೀನಾ! ಬಾಲಿವುಡ್ ಚೆಲುವೆಗೆ ವಾಹನ ಸವಾರರು ಫಿದಾ

ನೋಡಿದ್ರಿರಲ್ಲ, ಈ ಹೊಸ ಉಂಗುರದ ವಿನ್ಯಾಸ. ನಿಮಗೆ ಇಷ್ಟ ಆಗಿದ್ದರೆ ಕೂಡಲೇ ಆ ಆಭರಣ ಸಂಸ್ಥೆಯನ್ನು ಸಂಪರ್ಕಿಸಿ, ಅದನ್ನು ಕೊಂಡುಕೊಳ್ಳಿ, ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ ಉಂಗುರ ಧರಿಸಿದ್ದೇನೆ ಎಂಬ ಹೆಮ್ಮೆ ನಿಮ್ಮದಾಗಿಸಿಕೊಳ್ಳಿ.
Published by:Ashwini Prabhu
First published: