Bharat Jodo: ಯೇಸು ಮಾತ್ರ ನಿಜವಾದ ದೇವರು: ವಿವಾದಿತ ಪಾದ್ರಿಯನ್ನು ಭೇಟಿಯಾದ ರಾಹುಲ್ ಗಾಂಧಿ: ಬಿಜೆಪಿ, ಕೈ ಸಮರ!

Rahul Gandhi Meeting with George Ponnaiah: ಕಾಂಗ್ರೆಸ್‌ನ 'ಭಾರತ್ ಜೋಡೋ ಯಾತ್ರೆ'ಯಲ್ಲಿರುವ ರಾಹುಲ್ ಗಾಂಧಿ ಸೆಪ್ಟೆಂಬರ್ 10 ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ವಿವಾದಿತ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಪೊನ್ನಯ್ಯ ಅವರನ್ನು ಭೇಟಿಯಾಗಿದ್ದಾರೆ. ಸಭೆಯ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಚೋದನಕಾರಿ ಹೇಳಿಕೆಗಳಿಗೆ ಹೆಸರಾದ ಪಾಸ್ಟರ್ ಪೊನ್ನಯ್ಯ ಅವರು ರಾಹುಲ್ ಗಾಂಧಿಗೆ ಯೇಸು ಮಾತ್ರ ನಿಜವಾದ ದೇವರು ಎಂದು ಹೇಳಿದ್ದಾರೆ.

ವಿವಾದಿತ ಪಾದ್ರಿಯನ್ನು ಭೇಟಿಯಾದ ರಾಹುಲ್ ಗಾಂಧಿ

ವಿವಾದಿತ ಪಾದ್ರಿಯನ್ನು ಭೇಟಿಯಾದ ರಾಹುಲ್ ಗಾಂಧಿ

  • Share this:
ಚೆನ್ನೈ(ಸೆ.10): ಕಾಂಗ್ರೆಸ್‌ನ 150 ದಿನಗಳ 'ಭಾರತ್ ಜೋಡೋ ಯಾತ್ರೆ' (Bharat Jodo Yatra) ಯಲ್ಲಿರುವ ರಾಹುಲ್ ಗಾಂಧಿ (Rahul Gandhi) ಸೆಪ್ಟೆಂಬರ್ 10 ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ವಿವಾದಿತ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಪೊನ್ನಯ್ಯ (Catholic Priest George Ponnaiah) ಅವರನ್ನು ಭೇಟಿಯಾದರು. ಈ ಸಭೆಯ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಚೋದನಕಾರಿ ಹೇಳಿಕೆಗಳಿಗೆ ಹೆಸರಾದ ಪಾಸ್ಟರ್ ಪೊನ್ನಯ್ಯ ಅವರು ರಾಹುಲ್ ಗಾಂಧಿಗೆ ಜೀಸಸ್ ಕ್ರೈಸ್ಟ್ ಮಾತ್ರ ನಿಜವಾದ ದೇವರು, ಶಕ್ತಿ ದೇವಿ ಅಥವಾ ದೇವತೆಗಳು ದೇವರಲ್ಲ ಎಂದು ವಿವರಿಸುತ್ತಿರುವುದು ಕಂಡುಬಂದಿದೆ.

ವೈರಲ್ ವಿಡಿಯೋದಲ್ಲಿ, ವಿವಾದಾತ್ಮಕ ಪಾದ್ರಿ ಜಾರ್ಜ್ ಪೊನ್ನಯ್ಯ ಅವರು ರಾಹುಲ್ ಗಾಂಧಿಯವರ ಮುಂದೆ ಯೇಸು ಕ್ರಿಸ್ತನನ್ನು ನಿಜವಾದ ದೇವರು ಎಂದು ಹೇಳುತ್ತಿದ್ದಾರೆ ಮತ್ತು ಹಿಂದೂ ದೇವರು ಮತ್ತು ದೇವತೆಗಳನ್ನು ನಿಜವಾದ ದೇವರು ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ಪಾದ್ರಿ ಬಳಿ ಯೇಸು ಕ್ರಿಸ್ತನು ದೇವರ ರೂಪವೇ? ಅದು ನಿಜವೆ? ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಪಾದ್ರಿ ಜಾರ್ಜ್ ಪೊನ್ನಯ್ಯ ಅವರು ಈ ವಿಡಿಯೋದಲ್ಲಿ ರಾಹುಲ್ ಗಾಂಧಿಗೆ ವಿವರಿಸಿದ್ದು, ಜೀಸಸ್ ಕ್ರೈಸ್ಟ್ ನಿಜವಾದ ದೇವರು, ಶಕ್ತಿ ದೇವಿ ಅಥವಾ ದೇವತೆಗಳು ದೇವರಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ಅವಧಿಗೂ ಮುನ್ನವೇ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ?

ಇದಕ್ಕೂ ಮುನ್ನ ಜಾರ್ಜ್ ಪೊನ್ನಯ್ಯ ಅವರು ತಮ್ಮ ಹಲವು ವಿವಾದಾತ್ಮಕ ಹೇಳಿಕೆಗಳಿಂದ ಸದ್ದು ಮಾಡಿದ್ದರು ಎಂಬುದನ್ನು ಉಲ್ಲೇಖನೀಯ. ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಅವರನ್ನು ಮಧುರೈನಲ್ಲಿ ಬಂಧಿಸಲಾಗಿತ್ತು. ರಾಹುಲ್ ಗಾಂಧಿ ಅವರು ಜಾರ್ಜ್ ಪೊನ್ನಯ್ಯ ಅವರನ್ನು ಚರ್ಚ್‌ನಲ್ಲಿ ಭೇಟಿಯಾದರು. ರಾಹುಲ್ ಗಾಂಧಿ 150 ದಿನಗಳ ಭಾರತ ಜೋಡೋ ಯಾತ್ರೆಯಲ್ಲಿದ್ದಾರೆ. ಹೀಗಿರುವಾಗ ಸದ್ಯ ಪಾದ್ರಿ ಭೇಟಿ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಗದ್ದಲಕ್ಕೆ ಕಾರಣವಾಗಿದೆ.


ವಿಡಿಯೋ ನೆಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಿಜೆಪಿ ಕಿಡಿ

ರಾಹುಲ್ ಗಾಂಧಿ ಅವರು ಪಾದ್ರಿಯನ್ನು ಭೇಟಿ ಮಾಡಿ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ ವಿಡಿಯೋ ತುಣುಕಿನ ಕುರಿತು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ರಾಹುಲ್ ಗಾಂಧಿಯವರ ದ್ವೇಷ ಪ್ರಚಾರ ಎಂದು ಬಿಜೆಪಿ ವಕ್ತಾರ ಶಹಜತ್ ಪೂನಾವಾಲಾ ಹೇಳಿದ್ದಾರೆ. ಇಂದು ಜಾರ್ಜ್ ಪೊನ್ನಯ್ಯನಂಥ ವ್ಯಕ್ತಿಯನ್ನು ಭಾರತ್ ಜೋಡೋ ಯಾತ್ರೆಯ ಪೋಸ್ಟರ್ ಬಾಯ್ ಮಾಡಿ, ಹಿಂದೂಗಳಿಗೆ ಸವಾಲು ಹಾಕಿದ, ಬೆದರಿಕೆ ಹಾಕಿದ ಮತ್ತು ಭಾರತ ಮಾತೆಯ ಬಗ್ಗೆ ಅನುಚಿತವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಸುದೀರ್ಘ ಇತಿಹಾಸವನ್ನು ಹೊಂದಿದೆ.

ಇದನ್ನೂ ಓದಿ: Rahul Gandhi: ರೈತರ ಸಾಲ ಮನ್ನಾ, ಉಚಿತ ವಿದ್ಯುತ್, 500 ರೂಪಾಯಿಗೆ ಗ್ಯಾಸ್! ಮತದಾರರಿಗೆ ರಾಹುಲ್ ಗಾಂಧಿ ಭರವಸೆ

ಕಾಂಗ್ರೆಸ್ ಸಮರ್ಥನೆ

ಇದೇ ವೇಳೆ ಕಾಂಗ್ರೆಸ್ ಈ ವಿಡಿಯೋವನ್ನು ಬಿಜೆಪಿಯ ಕಿಡಿಗೇಡಿತನ ಎಂದು ಬಣ್ಣಿಸಿದೆ. ರಾಹುಲ್ ಗಾಂಧಿ ಮತ್ತು ತಮಿಳು ಪಾದ್ರಿ ಜಾರ್ಜ್ ಪೊನ್ನಯ್ಯ ಅವರ ವೈರಲ್ ವೀಡಿಯೊ ಬಗ್ಗೆ ಮಾತನಾಡಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ ಬಿಜೆಪಿಯ ಹೇಟ್ ಫ್ಯಾಕ್ಟರಿ ಕಳಪೆ ಟ್ವೀಟ್ ಅನ್ನು ವೈರಲ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಆಡಿಯೋದಲ್ಲಿ ದಾಖಲಾಗಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಬಿಜೆಪಿಯ ಕೆಟ್ಟ ಮನಸ್ಥಿತಿ, ಭಾರತ್ ಜೋಡೋ ಯಾತ್ರೆಯ ಯಶಸ್ವೀ ಆರಂಭ ಹಾಗೂ ಜನರಿಂದ ಸಿಗುತ್ತಿರುವ ಬೆಂಬಲ ಕಂಡು ನಿರಾಶೆಗೊಂಡಿದ್ದಾರೆ ಎಂದಿದ್ದಾರೆ.
Published by:Precilla Olivia Dias
First published: