ಜೈಷ್ ಉಗ್ರ ಸಂಘಟನೆಯಿಂದ ದಾಳಿ ಬೆದರಿಕೆ; ಸಂಕಷ್ಟದಲ್ಲಿ ದೇಶದ ಹಲವು ಮುಖ್ಯಮಂತ್ರಿಗಳು?

ಈ ಬಗ್ಗೆ ಕೆಲ ಪತ್ರಗಳು ಉತ್ತರ ಪ್ರದೇಶ ಪೊಲೀಸರಿಗೆ ಲಭ್ಯವಾಗಿದೆ. ಜೆಇಎಂ ಉಗ್ರ ಸಂಘಟನೆ ಇದನ್ನು ಬರೆದಿದ್ದು, ಯೋಗಿ ಆದಿತ್ಯನಾಥ್​ ಮೊದಲಾದವರಿಗೆ ಜೀವ ಬೆದರಿಕೆವೊಡ್ಡಲಾಗಿದೆ.

Rajesh Duggumane | news18
Updated:April 25, 2019, 10:33 AM IST
ಜೈಷ್ ಉಗ್ರ ಸಂಘಟನೆಯಿಂದ ದಾಳಿ ಬೆದರಿಕೆ; ಸಂಕಷ್ಟದಲ್ಲಿ ದೇಶದ ಹಲವು ಮುಖ್ಯಮಂತ್ರಿಗಳು?
ಯೋಗಿ ಆದಿತ್ಯನಾಥ್​
Rajesh Duggumane | news18
Updated: April 25, 2019, 10:33 AM IST
ನವದೆಹಲಿ (ಏ.25): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ​ ಸೇರಿ ದೇಶದ ಅನೇಕ ಮುಖ್ಯಮಂತ್ರಿಗಳಿಗೆ ಪಾಕಿಸ್ತಾನ ಮೂಲದ ಜೈಷ್​-ಇ-ಮೊಹ್ಮದ್​ ಉಗ್ರ ಸಂಘಟನೆ ಜೀವ ಬೆದರಿಕೆವೊಡ್ಡಿದೆ. ಈ ವಿಚಾರವನ್ನು ಉತ್ತರ ಪ್ರದೇಶ ಪೊಲೀಸರು ಖಚಿತಪಡಿಸಿದ್ದಾರೆ.

ಈ ಬಗ್ಗೆ ಕೆಲ ಪತ್ರಗಳು ಉತ್ತರ ಪ್ರದೇಶ ಪೊಲೀಸರಿಗೆ ಲಭ್ಯವಾಗಿದೆ. ಜೆಇಎಂ ಉಗ್ರ ಸಂಘಟನೆ ಇದನ್ನು ಬರೆದಿದ್ದು, ಯೋಗಿ ಆದಿತ್ಯನಾಥ್​, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಆರ್​ಎಸ್​ಎಸ್​ ಮುಖ್ಯಮಸ್ಥ ಮೋಹನ್​ ಭಾಗ್ವತ್​ ಅವರಿಗೆ ಜೀವ ಬೆದರಿಕೆವೊಡ್ಡಲಾಗಿದೆ.

ಇನ್ನು ದೇಶದ ಅನೇಕ ಕಡೆಗಳಲ್ಲಿ ದಾಳಿ ನಡೆಸುವ ಎಚ್ಚರಿಕೆಯನ್ನು ಪತ್ರದಲ್ಲಿ ನೀಡಲಾಗಿದೆ. “ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ಸ್ಥಳ ಹಾಗೂ ಕೆಲ ರೈಲ್ವೆ ನಿಲ್ದಾಣದಲ್ಲಿ ನಾವು ಬಾಂಬ್​ ಸ್ಫೋಟ ಮಾಡುತ್ತೇವೆ,” ಎಂದು ಎಚ್ಚರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಾದ್ಯಂತ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ವಾರಣಾಸಿಯಿಂದ ಮೋದಿ ಮತ್ತೆ ಕಣಕ್ಕೆ; : ಏ. 26ಕ್ಕೆ ನಾಮಪತ್ರ ಸಲ್ಲಿಕೆ; ಇಂದು ಬೃಹತ್ ರೋಡ್‌ ಶೋ

ಯಾವುದೋ ಕಿಡಿಗೇಡಿಗಳು ಇದನ್ನು ಬರೆದಿರಬಹುದು ಎನ್ನುವ ಶಂಕೆ ಕೂಡ ಮೂಡಿದೆ. ಆದರೆ, ಇತ್ತೀಚೆಗೆ ಶ್ರೀಲಂಕಾದಲ್ಲಿ ಸರಣಿ ಬಾಂಬ್​ ಸ್ಫೋಟ ಸಂಭವಿಸಿತ್ತು. ಹಾಗಾಗಿ, ಈ ವಿಚಾರವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

First published:April 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626