ಬಹುದೊಡ್ಡ ಸುದ್ದಿಯೊಂದು ಅಮೆಜಾನ್ ಅಂಗಳದಿಂದ ಹೊರಬಿದ್ದಿದೆ. ಜಗತ್ತಿನ ಬಹುದೊಡ್ಡ ಇ-ಕಾಮರ್ಸ್ ದೈತ್ಯ ಕಂಪನಿಯ ಸಿಇಒ ಹುದ್ದೆಯ ಬದಲಾವಣೆ ನಡೆಯಲಿದೆ. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಜೆಫ್ ಬೆಜೋಸ್ ತಮ್ಮ ಅಧಿಕಾರದಿಂದ ಕೆಳಕ್ಕೆ ಇಳಿಯಲಿದ್ದಾರೆ. ಜುಲೈ ತಿಂಗಳಿನಲ್ಲಿ ಬೆಜೋಸ್ ತಮ್ಮ ಅಧಿಕಾರವನ್ನು ತಮ್ಮ ಮುಂದಿನವರಿಗೆ ಹಸ್ತಾಂತರ ಮಾಡಲಿದ್ದಾರೆ.
ಜುಲೈ 5 ರಂದು ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅಮೆಜಾನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಬೆಜೋಸ್ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಆಂಡಿ ಜಾಸ್ಸಿ ಅವರಿಗೆ ಬೆಜೋಸ್ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ವಾಸ್ತವಿಕವಾಗಿ ನಡೆಯುತ್ತಿರುವ ಅಮೆಜಾನ್‌ನ ವಾರ್ಷಿಕ ಷೇರುದಾರರ ಸಭೆಯಲ್ಲಿ ಬೆಜೋಸ್ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
ನಾವು ಆ ದಿನಾಂಕವನ್ನು ಆರಿಸಿಕೊಂಡಿದ್ದೇವೆ. ಏಕೆಂದರೆ ಅದು ನನಗೆ ಭಾವನಾತ್ಮಕವಾಗಿದೆ. 1994 ರಲ್ಲಿ ಅಮೆಜಾನ್ ಅನ್ನು ಹುಟ್ಟು ಹಾಕಿದ ದಿನ, ನಿಖರವಾಗಿ 27 ವರ್ಷಗಳ ಹಿಂದೆ ಎಂದು ಬೆಜೋಸ್ ಸಭೆಯಲ್ಲಿ ಹೇಳಿದರು.
ಇದನ್ನೂ ಓದಿ:Coronavirus India Updates: ದೇಶದಲ್ಲಿ ಮತ್ತೆ ಏರಿಕೆಯಾಗುತ್ತಿರುವ ಕೊರೋನಾ ಪಾಸಿಟಿವ್ ಪ್ರಕರಣಗಳು
30 ವರ್ಷಗಳ ಕಾಲ ಕಂಪನಿಗೆ ಸೇವೆ ಸಲ್ಲಿಸಿದ ನಂತರ ಫೆಬ್ರವರಿಯಲ್ಲಿ ಜೆಫ್ ಬೆಜೋಸ್ ಅಮೆಜೋನ್ ಉನ್ನತ ಹುದ್ದೆಯಿಂದ ಕೆಳಗಿಳಿಯುವುದಾಗಿ ಇ-ಕಾಮರ್ಸ್ ದೈತ್ಯ ಘೋಷಿಸಿತ್ತು.
ಅಮೆಜಾನ್ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಾಹಕ ಅಧ್ಯಕ್ಷರ ಪಾತ್ರವನ್ನು ಜೆಫ್ ಬೆಜೋಸ್ ವಹಿಸಿಕೊಳ್ಳಲಿದ್ದು, ಅವರು ತಮ್ಮ ಇತರ ಯೋಜನೆಗಳತ್ತ ಗಮನ ಹರಿಸಲು ಚಿಂತನೆ ನಡೆಸಿದ್ದಾರೆ. ಇವುಗಳಲ್ಲಿ ಬೆಜೋಸ್ ಅರ್ಥ್ ಫಂಡ್, ಅವರ ಬ್ಲೂ ಒರಿಜಿನ್ ಆಕಾಶ ನೌಕೆ ಕಂಪನಿ, ದಿ ವಾಷಿಂಗ್ಟನ್ ಪೋಸ್ಟ್ ಮತ್ತು ಅಮೆಜಾನ್ ಡೇ 1 ಫಂಡ್ ಸೇರಿವೆ. ಎರಡು ದಶಕಗಳಿಂದ ಬೆಜೋಸ್‌ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ಅಮೆಜಾನ್ ವೆಬ್ ಸರ್ವೀಸಸ್ ಮುಖ್ಯಸ್ಥ ಆಂಡಿ ಜಾಸ್ಸಿ ಅವರನ್ನು ಬೆಜೋಸ್ ಬದಲಿಗೆ ಕಾರ್ಯ ನಿರ್ವಹಣೆ ಮಾಡಲಾಗುತ್ತದೆ.
ಮೇಕ್ ಡೊನಾಲ್ಡ್ಸ್ ಮತ್ತು ನೆಟ್ ಫ್ಲಿಕ್ಸ್ ಸೆರಿದಂತೆ ಸರ್ಕಾರಗಳು ಮತ್ತು ಕಂಪನಿಗಳಿಗೆ AWS ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸಂಗ್ರಹಣೆಯನ್ನು ಒದಗಿಸುವುದರಿಂದ ಅಮೆಜಾನ್ ವ್ಯವಹಾರದ ಪ್ರಮುಖ ಕ್ಷೇತ್ರಗಳಲ್ಲಿ ಲಾಭದ ಹಾದಿಯಲ್ಲಿದೆ. ಇದು ಕಂಪನಿಯ ವೇಗವಾಗಿ ಬೆಳೆಯುತ್ತಿರುವ ಮತ್ತು ಪ್ರಮುಖ ವ್ಯವಹಾರಗಳಲ್ಲಿ ಒಂದಾಗಿದೆ. ಆಂಡಿ ಜಾಸ್ಸಿ ಈ ಲಾಭದ ಪ್ರಮುಖ ಕಾರಣೀಕರ್ತರಲ್ಲಿ ಒಬ್ಬರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ