ಅಮೆಜಾನ್ ಸಿಇಒ ಜೆಫ್ ಬೆಜೋಸ್ ತಮ್ಮ ಹುದ್ದೆಯನ್ನು ತ್ಯಜಿಸುವುದಾಗಿ ಹೇಳಿದ್ದಾರೆ. ಈ ವರ್ಷದ ಕೊನೆಯಲ್ಲಿ ತಮ್ಮ ಹುದ್ದೆಯಿಂದ ಕೆಲಗಿಳಿಯುವುದಾಗಿ ತಿಳಿಸಿದ್ದಾರೆ. ಆನ್ಲೈನ್ ಇ-ಕಾಮರ್ಸ್ ದೈತ್ಯ ಅಮೆಜಾನ್ ತ್ರೈಮಾಸಿಕ ಲಾಭ ಮತ್ತು ಅದಾಯ ಎರಡರಲ್ಲೂ ಏರಿಕೆ ಕಂಡು ಬಂದ ಬೆನ್ನಲ್ಲೇ ಜೆಫ್ ಬೆಜೋಸ್ ಈ ಹೇಳಿಕೆಯನ್ನು ನೀಡಿದ್ದಾರೆ.
ಇನ್ನು ಜೇಫ್ ಬೆಜೋಸ್ ಬದಲಾಗಿ ಅಮೆಜಾನ್ ವೆಬ್ ಸರ್ವೀಸಸ್ ಮುಖ್ಯಸ್ಥರಾಗಿರುವ ಆ್ಯಂಡಿ ಜೆಸ್ಸಿ ಮೂರನೇ ತ್ರೈಮಾಸಿಕದಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲ್ಲಿದ್ದಾರೆ ಎಂದು ಕಂಪನಿ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ Jeff Bezo, ‘ಅಮೆಜಾನ್ ಇಂದು ಏನಾಗಿದೆಯೋ ಅದಕ್ಕೆ ಅದರ ಆವಿಷ್ಕಾರ ಕಾರಣ. ಇದೀಗ ನಾನು ಅಮೆಜಾನ್ ಸೃಜನಶೀಲತೆಯ ಉತ್ತುಂಗವನ್ನು ಬಯಸುತ್ತಿದ್ದೇನೆ. ಹಾಗಾಗಿ ಪರಿವರ್ತನೆಗೆ ನನಗಿದು ಸೂಕ್ತ ಸಮಯವಾಗಿದೆ’ ಎಂದು ಹೇಳಿದ್ದಾರೆ.
ರಜೆ ಕಾಲದ ತ್ರೈಮಾಸಿಕದಲ್ಲಿ ಕಂಪನಿ ಆದಾಯವು 7.2 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಶೇ.44ರಷ್ಟು ಜಿಗಿ 125.6 ಬಿಲಿಯನ್ ಡಾಲರ್ಗಳಿಗೆ ಏರಿಕೆ ಕಂಡಿದೆ. ಈ ಬೆನ್ನಲ್ಲೇ ಜೆಫ್ ಬೆಜೋಸ್ ವರ್ಷಾಂತ್ಯದಲ್ಲಿ ಹುದ್ದೆ ತ್ಯಜಿಸಲಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಜೆಸ್ಸಿ ಅವರು 1997ರಲ್ಲಿ ಮಾರ್ಕೆಂಟಿಗ್ ಮ್ಯಾನೇಜರ್ ಆಗಿ ಸಂಸ್ಥೆಗೆ ಸೇರಿಕೊಂಡಿದ್ದರು. 2003ರ ವೇಳೆಗೆ ಕಂಪನಿಯ ಅತ್ಯಂತ ಲಾಭದಾಯಕ ವಿಭಾಗ ವೆಬ್ ವಿಭಾಗ ಎಡಬ್ಲ್ಯೂಎಸ್ ಸ್ಥಾಪಿಸಿದರು. ಇದೀಗ ಮೂರನೇ ತ್ರೈಮಾಸಿಕದಲ್ಲಿ ಸಿಇಒ ಆಗಿ ಆ್ಯಂಡಿ ಜೆಸ್ಸಿ ಅಧಿಕಾರ ವಹಿಸಿಕೊಳ್ಳಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ