ತನ್ನ ರಾಸಲೀಲೆಯ ವರದಿ ಪ್ರಕಟಿಸಿದ ಮೀಡಿಯಾ ವಿರುದ್ಧ ತಿರುಗಿಬಿದ್ದ ಅಮೇಜಾನ್ ಸಂಸ್ಥಾಪಕ

ಜೆಫ್​​​ ತನ್ನ ಮಾಜಿ ಪತ್ನಿ ಮೆಕೆಂಜಿ ಬೆಜೋಸ್​​ಗೆ ಡಿವೋರ್ಸ್​​ ನೀಡಿದ ಬೆನ್ನಲ್ಲೇ ಅಮೇರಿಕಾ ಮೀಡಿಯಾ ಐಎನ್​​ಸಿ(AMI) ಒಂದು ವರದಿಯನ್ನು ಪ್ರಕಟಿಸಿತ್ತು. ಇದರಲ್ಲಿ ಜೆಫ್​​ ತನ್ನ ಪತ್ನಿಗೆ ವಿಚ್ಛೇದನ ನೀಡಲು ಲಾರೆನ್ ಜತೆಗಿನ ಪ್ರೇಮ ಮತ್ತು ರಹಸ್ಯ ಪ್ರಣವೇ ಕಾರಣ ಎಂದು ವರದಿಯಲ್ಲಿ ತಿಳಿಸಿತ್ತು.

Ganesh Nachikethu
Updated:February 9, 2019, 1:14 PM IST
ತನ್ನ ರಾಸಲೀಲೆಯ ವರದಿ ಪ್ರಕಟಿಸಿದ ಮೀಡಿಯಾ ವಿರುದ್ಧ ತಿರುಗಿಬಿದ್ದ ಅಮೇಜಾನ್ ಸಂಸ್ಥಾಪಕ
ಮ್ಯಾಕೆನ್ಜಿ ಹಾಗೂ ಜೆಫ್​
Ganesh Nachikethu
Updated: February 9, 2019, 1:14 PM IST
ನವದೆಹಲಿ(ಫೆ.08): ಅಮೇರಿಕನ್​​​ ಮೀಡಿಯಾ ಐಎನ್​​ಸಿ(AMI) ನನ್ನ ವಿವಾಹೇತರ ಸಂಬಂಧದ ಖಾಸಗಿ ಫೋಟೊ ಮತ್ತು ಸಂದೇಶಗಳನ್ನು ಪ್ರಕಟಿಸುವುದಾಗಿ ಬೆದರಿಕೆ ಹಾಕಿದೆ ಎಂದು ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಮತ್ತು ಅಮೇಜಾನ್​​ ಕಂಪನಿ ಸ್ಥಾಪಕ ಜೆಫ್​​​ ಬೆಜೋಸ್​​​​ ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗಷ್ಟೇ ತನ್ನ ದಾಪಂತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ಮೆಕೆಂಜಿ ಬೆಜೋಸ್​​​ಗೆ ಡಿವೋರ್ಸ್​​ ನೀಡಿದ್ದರು ಜೆಫ್​​​. ಈ ಬೆನ್ನಲ್ಲೇ ಜೆಫ್​​ ಅಮೇರಿಕಾದ ಪ್ರತಿಷ್ಠಿತ ಮೀಡಿಯಾ ಮೇಲೆ ಗಂಭೀರ ಆರೋಪ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಜೆಫ್​​​ ಮತ್ತು ಮೆಕೆಂಜಿ ಬೆಜೋಸ್​​ ದಾಪಂತ್ಯದಲ್ಲಿ ಬಿರುಕು ಮೂಡಿತ್ತು. ಈ ಬಗ್ಗೆ ಖುದ್ದು ಸ್ವತಃ ಜೆಫ್ ಮತ್ತು ಅವರ ಮಾಜಿ ಪತ್ನಿಯೇ ಜಂಟಿಯಾಗಿ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದು, ಡಿವೋರ್ಸ್​​ ಪಡೆದುಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದರು. ಅಲ್ಲದೇ ನಮ್ಮ ದಾಂಪತ್ಯ ಜೀವನದ ಬೆಳವಣಿಗೆ ಬಗ್ಗೆ ಜನರಿಗೆ ಮಾಹಿತಿ ಇರಲಿ.  ನಾನು ಜೆಫ್​​​ ಕಳೆದ 25 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದೇವೆ. ಈಗ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಗೆಳೆಯರಾಗಿರಲು ನಿರ್ಧರಿಸಿದ್ದೇವೆ. ಇಷ್ಟು ದಿನ ದಂಪತಿಗಳಾಗಿ ನಾವಿಬ್ಬರೂ ವೈವಾಹಿಕ ಜೀವನ ಸಂತೋಷದಿಂದ ಕಳೆದಿದ್ದೇವೆ ಎಂದು ತಿಳಿಸಿದ್ದರು ಮೆಕೆಂಜಿ ಬೆಜೋಸ್.

ಅಮೇಜಾನ್​​ ಕಂಪನಿಯ ಸಂಸ್ಥಾಪಕ ಜೆಫ್​​, ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ. ಜೆಫ್ ಒಟ್ಟು 137 ಬಿಲಿಯನ್ ಡಾಲರ್ (9,67,289 ಕೋಟಿ ರೂ.) ಮೌಲ್ಯದ ಸಂಪತ್ತು ಹೊಂದಿದ್ದಾರೆ. ಆರಂಭದಲ್ಲಿ ಅಮೇಜಾನ್​​ ಕಂಪನಿಯಲ್ಲಿಯೇ ಮೆಕೆಂಜಿ ಬೆಜೋಸ್​​​ ಉದ್ಯೋಗಿಯಾಗಿದ್ದರು. ನಂತರ 2014ರಲ್ಲಿ ಬೈಸ್ಟಾಂಡರ್ ರಿವೊಲ್ಯೂಶನ್ ಎಂಬ ಸಂಸ್ಥೆ ಆರಂಭಿಸಿ ಶ್ರಮಿಸಿತ್ತು ಈ ದಂಪತಿ.

ಇದನ್ನೂ ಓದಿ: ವಿಶ್ವದ ನಂ.1 ಶ್ರೀಮಂತ ಜೆಫ್​ ದಾಂಪತ್ಯದಲ್ಲಿ ಬಿರುಕು; 9.64 ಲಕ್ಷ ಕೋಟಿ ರೂ. ಆಸ್ತಿಯಲ್ಲಿ ಪತ್ನಿಗೆಷ್ಟು ಸಿಗಲಿಗೆ ಜೀವನಾಂಶ?

ಜೆಫ್​​​ ಮೇಲಿನ ಆರೋಪ:  ಜೆಫ್​​ ಈಗಾಗಲೇ ತಮ್ಮ ಪತ್ನಿ ಮೆಕೆಂಜಿ ಬೆಜೋಸ್ ಗೆ ವಿಚ್ಛೇದನ ನೀಡಿದ್ದಾರೆ. ಹಾಗೆಯೇ ಪತ್ನಿಗೆ ಜೆಫ್​ ಅವರು ನೀಡಿರುವ ಜೀವನಾಂಶ ಬರೋಬ್ಬರಿ 69 ಶತಕೋಟಿ ಡಾಲರ್​. ಜೆಫ್​ ಅವರು ತಮ್ಮ ಸ್ನೇಹಿತರ ಪತ್ನಿ ಜತೆ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿಯೇ ಮೆಕೆಂಜಿ ಜೆಫ್​​ಗೆ ವಿಚ್ಛೇದನ ನೀಡಲಾಗಿದೆ ಎನ್ನಲಾಗುತ್ತಿದೆ.

ಸ್ಯಾಂಚೆಝ್ ಜತೆಗೆ ಸಂಬಂಧ ಹೊಂದಿದ್ದ ಜೆಫ್:​​ ಲಾರೆನ್ ಸ್ಯಾಂಚೆಝ್ ಹಾಲಿವುಡ್​​ನ ಟ್ಯಾಲೆಂಟ್​ ಪ್ರತಿನಿಧಿ ಪ್ಯಾಟ್ರಿಕ್ ವೈಟ್ಸೆಲ್​ ಅವರ ಪತ್ನಿ. ಈ ಮಾಜಿ ದಂಪತಿಗಳು ಜೆಫ್‌ನ ಸ್ನೇಹಿತರಾಗಿದ್ದರು. ಬಳಿಕ ಜೆಫ್​​ ಜೊತೆಗಿನ ಸ್ಯಾಂಚೆಝ್ ಸ್ನೇಹ ಪ್ರಣಯಕ್ಕೆ ತಿರುಗಿತ್ತು. ಬಲ್ಲ ಮೂಲಗಳ ಪ್ರಕಾರ ಜೆಫ್ ಮತ್ತು​​ ಸ್ಯಾಂಚೆಝ್ ಡೇಟಿಂಗ್​​ ನಡೆಸುತ್ತಿದ್ದರು. ಇವರು 10 ವರ್ಷಗಳಿಂದ ಸ್ನೇಹಿತರಾಗಿದ್ದರು. ಅದಾದ ಬಳಿಕ ಎಷ್ಟೋ ಬಾರಿ ಬೆಜೊಸ್ ಮತ್ತು ಸ್ಯಾಂಚೆಝ್ ರಹಸ್ಯ ಪ್ರಣಯ ಹೊಂದಿದ್ದರು. ಜೆಫ್​​ ತನ್ನ ಪತ್ನಿಗೆ ವಿಚ್ಛೇದನ ನೀಡಲು ಲಾರೆನ್ ಜತೆಗಿನ ಪ್ರೇಮವೇ ಕಾರಣ ಎಂದು ಅಮೇರಿಕಾ ಮೀಡಿಯಾ ಐಎನ್​​ಸಿ(AMI) ವರದಿ ಮಾಡಿತ್ತು.

ಇದನ್ನೂ ಓದಿ: ಅಂದು ಕ್ಲೀನರ್​ ಆಗಿ ಕೆಲಸ ಮಾಡಿದ್ದ ವ್ಯಕ್ತಿ, ಇಂದು ವಿಶ್ವದ ನಂಬರ್-1 ಶ್ರೀಮಂತ..!
Loading...

ಮೀಡಿಯಾ ವಿರುದ್ಧ ಜೆಫ್​​: ಜೆಫ್​​​ ತನ್ನ ಮಾಜಿ ಪತ್ನಿ ಮೆಕೆಂಜಿ ಬೆಜೋಸ್​​ಗೆ ಡಿವೋರ್ಸ್​​ ನೀಡಿದ ಬೆನ್ನಲ್ಲೇ ಅಮೇರಿಕಾ ಮೀಡಿಯಾ ಐಎನ್​​ಸಿ(AMI) ಒಂದು ವರದಿಯನ್ನು ಪ್ರಕಟಿಸಿತ್ತು. ಇದರಲ್ಲಿ ಜೆಫ್​​ ತನ್ನ ಪತ್ನಿಗೆ ವಿಚ್ಛೇದನ ನೀಡಲು ಲಾರೆನ್ ಜತೆಗಿನ ಪ್ರೇಮ ಮತ್ತು ರಹಸ್ಯ ಪ್ರಣವೇ ಕಾರಣ ಎಂದು ವರದಿಯಲ್ಲಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅಮೇಜಾನ್​​ ಕಂಪನಿಯ ಸಂಸ್ಥಾಪಕ ಅದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಜತೆಗೆ ಅದೇ ಮೀಡಿಯಾ ತನ್ನ ಖಾಸಗಿತನವನ್ನು ಹರಾಜು ಹಾಕಿ ಸೊಂಟದ ಕೆಳಗಿನ ಪಟಗಳನ್ನು ಪ್ರಕಟಿಸುವುದಾಗಿ ಬೆದರಿಕೆ ಹಾಕಿದೆ ಎಂದು ಜೆಫ್​​​ ಗಂಭೀರ ಆರೋಪ ಎಸಗಿದ್ದಾರೆ. ಇನ್ನು ಜೆಫ್​​ ನ್ಯಾಯಕ್ಕಾಗಿ ನ್ಯಾಯಲದ ಮೊರೆ ಹೋಗಿದ್ದು, ತನಿಖೆ ನಡೆಯುತ್ತಿದ್ದೆ ಎಂದು ಹೇಳಲಾಗುತ್ತಿದೆ.

-----------------
ಜೆಡಿಎಸ್ ಹಗರಣಗಳು ಈಗ ಹೊರಬರುತ್ತಿವೆ: ಬಸವನಗೌಡ ಯತ್ನಾಳ್​
First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...