• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mackenzie Scott: ಎರಡನೇ ಪತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಜೆಫ್ ಬೆಜೋಸ್ ಮಾಜಿ ಪತ್ನಿ ಮೆಕೆಂಜಿ ಸ್ಕಾಟ್

Mackenzie Scott: ಎರಡನೇ ಪತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಜೆಫ್ ಬೆಜೋಸ್ ಮಾಜಿ ಪತ್ನಿ ಮೆಕೆಂಜಿ ಸ್ಕಾಟ್

ಮೆಕೆಂಜಿ ಸ್ಕಾಟ್

ಮೆಕೆಂಜಿ ಸ್ಕಾಟ್

ಮೆಕೆಂಜಿ ಸ್ಕಾಟ್ ಅವರು ಅಮೆಜಾನ್‌ ಸಂಸ್ಥಾಪಕ ಜೆಫ್ ಬೆಜೋಸ್‌ನಿಂದ 2019ರಲ್ಲಿ ವಿಚ್ಛೇದನ ಪಡೆದ ನಂತರ ಆದ ವಿವಾಹ ಸಂಬಂಧವನ್ನೂ ಸಹ ಮುರಿದುಕೊಳ್ಳಲು ನಿರ್ಧರಿಸಿದ್ದಾರೆ. ಹೌದು, ಪತಿ ಡಾನ್ ಜ್ಯುವೆಟ್‌ರಿಂದ ಬೇರೆಯಾಗಲು ಸ್ಕಾಟ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

  • Share this:

ವಿಶ್ವದ ಶ್ರೀಮಂತ ಮತ್ತು ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರಾದ ಮೆಕೆಂಜಿ ಸ್ಕಾಟ್ (Mackenzie Scott)ಅವರು ಅಮೆಜಾನ್‌ ಸಂಸ್ಥಾಪಕ ಜೆಫ್ ಬೆಜೋಸ್‌ನಿಂದ (Jeff Bezos) 2019ರಲ್ಲಿ ವಿಚ್ಛೇದನ ಪಡೆದ ನಂತರ ಆದ ವಿವಾಹ ಸಂಬಂಧವನ್ನೂ ಸಹ ಮುರಿದುಕೊಳ್ಳಲು ನಿರ್ಧರಿಸಿದ್ದಾರೆ. ಹೌದು, ಪತಿ ಡಾನ್ ಜ್ಯುವೆಟ್‌ರಿಂದ (Dan Jewett) ಬೇರೆಯಾಗಲು ಸ್ಕಾಟ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. "ನಮ್ಮ ಮದುವೆ ಬಂಧವನ್ನು ವಿಸರ್ಜಿಸಲು ನಾವು ನ್ಯಾಯಾಲಯವನ್ನು ಕೇಳುತ್ತೇವೆ" ಎಂದು ಮೆಕೆಂಜಿ ಸ್ಕಾಟ್ ಸೋಮವಾರ ವಾಷಿಂಗ್ಟನ್ (Washington) ರಾಜ್ಯದ ಕಿಂಗ್ ಕೌಂಟಿ ಸುಪೀರಿಯರ್ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ. ರಿಯಲ್ ಎಸ್ಟೇಟ್ ಮತ್ತು ಇತರ ವೈಯಕ್ತಿಕ ಆಸ್ತಿಯನ್ನು ಹೇಗೆ ವಿಭಜಿಸುವುದು ಎಂಬುದರ ಕುರಿತು ದಂಪತಿಗಳು (Couples) ಒಪ್ಪಂದವನ್ನು ಹೊಂದಿದ್ದಾರೆ ಎಂದು ವರದಿಗಳು ಹೇಳಿವೆ.


ಎರಡನೇ ಪತಿ ಜೊತೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಜೆಫ್ ಬೆಜೋಸ್‌ ಮಾಜಿ ಪತ್ನಿ
­­ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ $28.9 ಶತಕೋಟಿ ಮೌಲ್ಯ ಹೊಂದಿರುವ ಸ್ಕಾಟ್, ಜೆಫ್ ಬೆಜೋಸ್ ಜೊತೆ ಬೇರ್ಪಟ್ಟ ಮೂರು ವರ್ಷಗಳ ನಂತರ ಸ್ಕಾಟ್ ತನ್ನ ಎರಡನೇ ಪತಿ ಜೆವೆಟ್‌ನಿಂದ ವಿಚ್ಛೇದನವನ್ನು ಕೋರಿದ್ದಾಳೆ.ಗಿವಿಂಗ್ ಪ್ಲೆಡ್ಜ್‌ ಪುಟದ ಮೂಲಕ ಕಳೆದ ವರ್ಷ ಜೆವೆಟ್‌ನೊಂದಿಗೆ ತನ್ನ ಮದುವೆಯನ್ನು ಸ್ಕಾಟ್ ಘೋಷಿಸಿದ್ದಳು. ಪ್ರಕಟಣೆಯಲ್ಲಿ, ದಂಪತಿಗಳು ತಮ್ಮ ಜೀವಿತಾವಧಿಯಲ್ಲಿ ಅಥವಾ ಅವರ ಇಚ್ಛೆಯ ಬಹುಪಾಲು ಹಣವನ್ನು ಲೋಕೋಪಯೋಗಿ ಕಾರ್ಯಕ್ಕೆ ನೀಡುವುದಾಗಿ ಭರವಸೆ ನೀಡಿದ್ದರು.


ಹಲವು ದಾಖಲೆಗಳಲ್ಲಿ ಜ್ಯುವೆಟ್ ಹೆಸರು ಕಿತ್ತು ಹಾಕಿದ ಮೆಕೆಂಜಿ
ಪ್ರಸ್ತುತ ಸ್ಕಾಟ್ ಅವರ ಬ್ಲಾಗ್ ಪೋಸ್ಟ್‌ನಲ್ಲಿ ಜ್ಯುವೆಟ್ ಅವರ ಹೆಸರನ್ನು ತೆಗೆದುಹಾಕಲಾಗಿದೆ. ಅಲ್ಲದೇ ಆತ ನೀಡಿದ್ದ ದೇಣಿಗೆಯ ಉಲ್ಲೇಖಗಳ ಮಾಹಿತಿಯನ್ನು ಅಳಿಸಲಾಗಿದೆ. ಮೆಕೆಂಜಿ ಸ್ಕಾಟ್ ಅವರ ಸಹವರ್ತಿ ಅತಿ ಶ್ರೀಮಂತ ವ್ಯಕ್ತಿಗಳ ಗುಂಪಿನಿಂದ ಡಾನ್ ಜೆವೆಟ್ ಹೆಸರನ್ನು ತೆಗೆದುಹಾಕಲಾಗಿದೆ. ನ್ಯೂಯಾರ್ಕ್ ಟೈಮ್ಸ್ ದಂಪತಿಗಳ ವಿಚ್ಛೇದನದ ದಾಖಲಾತಿಯನ್ನು ಮೊದಲೇ ವರದಿ ಮಾಡಿತ್ತು.


ಇದನ್ನೂ ಓದಿ: Caste Certificate: ವಿದ್ಯಾರ್ಥಿಗಳಿಗೆ 'ಶಾಪ'ವಾದ ಜಾತಿ ಪ್ರಮಾಣಪತ್ರ: ಸರ್ಟಿಫಿಕೇಟ್ ಇಲ್ಲದೆ ಪರದಾಟ!


ಮ್ಯಾಕೆಂಜಿ ಸ್ಕಾಟ್ ಮತ್ತು ಡ್ಯಾನ್ ಜ್ಯುವೆಟ್ 2021 ರಲ್ಲಿ ವಿವಾಹವಾದರು. ಮ್ಯಾಕೆಂಜಿ ಸ್ಕಾಟ್‌ನೊಂದಿಗಿನ ವಿವಾಹದ ಮೊದಲು ಡ್ಯಾನ್ ಜ್ಯುವೆಟ್ ಸಿಯಾಟಲ್‌ನ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು ಆದರೆ ಮ್ಯಾಕೆಂಜಿ ಸ್ಕಾಟ್‌ನೊಂದಿಗಿನ ಅವರ ಉನ್ನತ ವಿವಾಹದ ನಂತರ ಕೆಲವು ಅಡ್ಡಿ-ಆತಂಕಗಳನ್ನು ಎದುರಿಸಿದ ಬಳಿಕ ಕೆಲಸ ತೊರೆದರು.


ಜೆಫ್‌ ಬೆಜೋಸ್‌ನಿಂದ ಡಿವೋರ್ಸ್
23 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ ಮೆಕೆಂಜಿ ಸ್ಕಾಟ್, ಅಮೆಜಾನ್‌ ಸಂಸ್ಥಾಪಕ ಜೆಫ್ ಬೆಜೋಸ್‌ ರಿಂದ ಡಿವೋರ್ಸ್‌ ಪಡೆದಿದ್ದರು. ಪತ್ನಿ ಮ್ಯಕೆನ್ಜಿ ಭರ್ಜರಿ 2.50 ಲಕ್ಷ ಕೋಟಿ ರೂ. ಜೀವನಾಂಶ ನೀಡಿದ್ದರು. ಇದು ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಚ್ಛೇದನ ಎಂಬ ದಾಖಲೆಗೆ ಪಾತ್ರವಾಗಿದೆ.


ಬೆಜೋಸ್‌ನಿಂದ ವಿಚ್ಛೇದನದ ನಂತರ $36 ಶತಕೋಟಿ ಸಂಪತ್ತಿನ ಒಡೆಯರಾಗಿದ್ದ ಮೆಕೆಂಜಿ ವಿಚ್ಛೇದನದಾ ನಂತರ ವಿಶ್ವದ ಮೂರನೇ ಶ್ರೀಮಂತ ಮಹಿಳೆಯಾಗಿದ್ದರು. ಇ-ಕಾಮರ್ಸ್ ಕಂಪನಿ ಅಮೆಜಾನ್ ನ ಶೇಕಡಾ 4ರಷ್ಟು ಪಾಲು ಹೊಂದಿದ್ದರು. ಆಕೆ ಪಾಲಿನ ಷೇರಿನ ಮೌಲ್ಯ 36.5 ಬಿಲಿಯನ್ ಡಾಲರ್ ನಷ್ಟಿದ್ದು (ಸುಮಾರು 2.52 ಲಕ್ಷ ಕೋಟಿ ರೂಪಾಯಿ). 75% ಷೇರುಗಳನ್ನು ನೀಡುತ್ತಿದ್ದಾರೆ. ಟ್ವೀಟ್ ಮಾಡುವ ಮೂಲಕ 2019ರ ಜನವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಜೆಫ್ ದಂಪತಿ ಹೇಳಿದ್ದರು.


ಇದನ್ನೂ ಓದಿ:  Canada Citizens: ಭಾರತದ ಈ ರಾಜ್ಯಗಳಿಗೆ ಹೋಗದಂತೆ ತನ್ನ ನಾಗರಿಕರಿಗೆ ಕೆನಡಾ ಸಲಹೆ! ಕಾರಣ ಏನು ಗೊತ್ತಾ?


ಜೆಫ್ ಬೆಜೋಸ್‌ಗೆ ವಿಚ್ಛೇದನ ನೀಡಿದ ನಂತರ ಮೆಕೆಂಜಿ ಸ್ಕಾಟ್ ತನ್ನ ಸಂಪತ್ತಿನ ಭಾಗಗಳನ್ನು ದತ್ತಿ ಕಾರ್ಯಗಳಿಗೆ ದಾನ ಮಾಡಲು ಪ್ರಾರಂಭಿಸಿದಳು. ಮೂರು ವರ್ಷಗಳಲ್ಲಿ ಅವರು $12bn ಗಿಂತ ಹೆಚ್ಚು ದೇಣಿಗೆ ನೀಡಿದ್ದಾರೆ. ಇತ್ತೀಚೆಗಷ್ಟೆ ಮೆಕೆಂಜಿ ಹೂಸ್ಟನ್ ಮೂಲದ ಎಪಿಸ್ಕೋಪಲ್ ಹೆಲ್ತ್ ಫೌಂಡೇಶನ್‌ಗೆ $20 ಮಿಲಿಯನ್ ಅನುದಾನದ ಜೊತೆಗೆ ಹೆಲ್ತ್ ಫಾರ್ವರ್ಡ್ ಫೌಂಡೇಶನ್‌ಗೆ $15 ಮಿಲಿಯನ್ ನೀಡಿದ್ದಾರೆ ಎಂದು ವರದಿಯಾಗಿದೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು