ಜೆಇಇ ಪರೀಕ್ಷೆಯಲ್ಲಿ ತನ್ನ ಬದಲಿಗೆ ಮತ್ತೋರ್ವನನ್ನು ಬರೆಸಿ ಶೇ.99.8 ರಷ್ಟು ಅಂಕ ಪಡೆದ ಅಭ್ಯರ್ಥಿ ಪೊಲೀಸರ ಅತಿಥಿ

ಘಟನೆಯಲ್ಲಿ ಅಭ್ಯರ್ಥಿ ಮತ್ತು ಆತನ ತಂದೆಯಲ್ಲದೆ ಬಂಧಿಸಲ್ಪಟ್ಟ ಮೂವರ ಪಾತ್ರವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ದೂರವಾಣಿ ಕರೆಯಲ್ಲಿ ಮಾತನಾಡುತ್ತಾ ಅಭ್ಯರ್ಥಿಯು ಈ ವಂಚನೆಯನ್ನು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಗುವಾಹಟಿ (ಅಕ್ಟೋಬರ್​ 29); ದೇಶದಾದ್ಯಂತ ಇಂಜಿನಿಯರಿಂಗ್ ಕೋರ್ಸ್​ಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಕೇಂದ್ರ ಸರ್ಕಾರ ಮಹತ್ವದ ಜೆಇಇ ಪರೀಕ್ಷೆಗಳನ್ನು ನಡೆಸಿತ್ತು. ಆದರೆ, ಅಸ್ಸಾಂನಲ್ಲಿ ಓರ್ವ ವಿದ್ಯಾರ್ಥಿ ತನ್ನ ಬದಲಿಗೆ ಬೇರೊಬ್ಬನಿಂದ ಪರೀಕ್ಷೆ ಬರೆಯಿಸಿ ಶೇ.99.8 ರಷ್ಟು ಅಂಕಗಳನ್ನು ಪಡೆದಿದ್ದಾನೆ. ಆದರೆ, ತನಿಖೆಯಿಂದ ಸತ್ಯ ಬಯಲಾಗಿದ್ದು ಇದೀಗ ಆತ ಪೊಲೀಸ್​ ಅತಿಥಿಯಾಗಿದ್ದಾನೆ. ಅಲ್ಲದೆ, ಪ್ರಕರಣದ ಸಂಬಂಧ ಆತನ ವೈದ್ಯ ತಂದೆ ಹಾಗೂ ಮೂವರು ಸಹಚರರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಕಳೆದ ಸೆಪ್ಟೆಂಬರ್ 5 ರಂದು ಜೆಇಇ ಪರೀಕ್ಷೆ ನಡೆದಿತ್ತು. ಆದರೆ, ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿರಲಿಲ್ಲ. ಆದರೆ, ಗುವಾಹಟಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಆತನ ಪರವಾಗಿ ಬೇರೊಬ್ಬ ಪರೀಕ್ಷೆ ಬರೆದಿದ್ದ. ಈ ಸಂಬಂಧ ಪೊಲೀಸರಿಗೆ ಅನಾಮಿಕರಿಂದ ಅಕ್ಟೋಬರ್​ 23 ರಂದು ದೂರು ನೀಡಲಾಗಿತ್ತು. ಈ ದೂರಿನ ಅನ್ವಯ ತನಿಖೆ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  ಬಂಧಿತ ಆರೋಪಿ ವಿದ್ಯಾರ್ಥಿಯನ್ನು ಮಿತ್ರದೇವ್ ಶರ್ಮಾ ಎಂದು ಗುರುತಿಸಲ್ಪಟ್ಟಿದೆ. ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆದ ಜೆಇಇ-ಮೇನ್ಸ್‌ನಲ್ಲಿ ಅಭ್ಯರ್ಥಿ ಶೇ.99.8 ಅಂಕಗಳನ್ನು ಗಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಹೀಗಾಗಿ ಪ್ರಕರಣದ ತನಿಖೆ ನಡೆಸಲು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದರು ಪರಿಣಾಮ ಐವರನ್ನು ಬಂಧಿಸಲಾಗಿದೆ.

  ಘಟನೆಯಲ್ಲಿ ಅಭ್ಯರ್ಥಿ ಮತ್ತು ಆತನ ತಂದೆಯಲ್ಲದೆ ಬಂಧಿಸಲ್ಪಟ್ಟ ಮೂವರ ಪಾತ್ರವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ದೂರವಾಣಿ ಕರೆಯಲ್ಲಿ ಮಾತನಾಡುತ್ತಾ ಅಭ್ಯರ್ಥಿಯು ಈ ವಂಚನೆಯನ್ನು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

  ಇದನ್ನೂ ಓದಿ : ಕೋವಿಡ್​ ಭೀತಿಯ ಹೊರತಾಗಿಯೂ ಮೊದಲ ಹಂತದ ಬಿಹಾರ ಚುನಾವಣೆಯಲ್ಲಿ ಶೇ.53.54 ರಷ್ಟು ಮತ ದಾಖಲು

  ಪರೀಕ್ಷೆಯ ದಿನದಂದು ಅಭ್ಯರ್ಥಿಯು ಬೊರ್ಜಾರ್ ಪ್ರದೇಶದ ನಿಗದಿತ ಕೇಂದ್ರಕ್ಕೆ ಪ್ರವೇಶಿಸಿದ್ದಾನೆ. ಆದರೆ, ಇನ್ವಿಜಿಲೇಟರ್ ಸಹಾಯದಿಂದ ಬಯೋಮೆಟ್ರಿಕ್ ಹಾಜರಾತಿಯನ್ನು ಪೂರ್ಣಗೊಳಿಸಿದ ನಂತರ ಮತ್ತೆ ಹೊರನಡೆದಿದ್ದಾನೆ. ತದನಂತರ ಈತನ ಬದಲಿಗೆ ಬೇರೊಬ್ಬ ವ್ಯಕ್ತಿ ಪರೀಕ್ಷಾ ಹಾಲ್​ಗೆ ಬಂದು ಪರೀಕ್ಷೆಯನ್ನು ಬರೆದಿದ್ದಾನೆ ಎಂದು ಹಿರಿಯ ಅಧಿಕಾರಿ ಶರ್ಮಾ ಆರೋಪಿಸಿದ್ದಾರೆ.

  ಗುವಾಹಟಿಯ ಖಾಸಗಿ ಕೋಚಿಂಗ್ ಸಂಸ್ಥೆ ಸಹ ಈ ಘಟನೆಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ. ದೇಶಾದ್ಯಂತ ಪರೀಕ್ಷೆ ನಡೆಸಿದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯನ್ನು ಪೊಲೀಸರು ಸಂಪರ್ಕಿಸಿದ್ದಾರೆ ಮತ್ತು ತನಿಖೆಯಲ್ಲಿ ಸಹಾಯ ಮಾಡಲು ಜೆಇಇ ಮೇನ್ಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಕೋರಿದ್ದಾರೆ ಎಂದು ತಿಳಿದುಬಂದಿದೆ.
  Published by:MAshok Kumar
  First published: