ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿಗೆ ಒಪ್ಪಿಗೆ ನೀಡಿದ ಬಿಜೆಪಿ? ಅಮಿತ್​ ಶಾ ಭೇಟಿ ಮಾಡಿದ ಜೆಡಿಯು ನಾಯಕರು

ಇದು ವಿವಿಧ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಸರ್ಕಾರವು ತನ್ನ ಅಭಿವೃದ್ಧಿ ನೀತಿಗಳನ್ನು, ಯೋಜನೆಗಳನ್ನು ರೂಪಿಸುವಲ್ಲಿ ಇದು ಸಹಾಯ ಮಾಡುತ್ತದೆ,  1931 ರಲ್ಲಿ ಬ್ರಿಟೀಷರು ಮಾಡಿದ ಜಾತಿ ಆಧಾರಿತ ಜನಗಣತಿಯೇ ನಮ್ಮಲ್ಲಿ ನಡೆದ ಕೊನೆಯ ಗಣತಿ.

ಅಮಿತ್​ ಶಾ

ಅಮಿತ್​ ಶಾ

 • Share this:
  ಜಾತಿ ಆಧಾರಿತ ಜನಗಣತಿಯ ತನ್ನ ಕಾರ್ಯಸೂಚಿಯನ್ನು ಮುಂದಿಟ್ಟುಕೊಂಡು, ಪಕ್ಷದ ನೂತನ ಅಧ್ಯಕ್ಷ ಲಾಲನ್ ಸಿಂಗ್ ನೇತೃತ್ವದ ಜನತಾದಳ (ಯುನೈಟೆಡ್) ಸಂಸದರ ನಿಯೋಗವು ಗೃಹ ಸಚಿವ ಅಮಿತ್ ಶಾ ಅವರನ್ನು ಈ ಬೇಡಿಕೆಯೊಂದಿಗೆ ಸೋಮವಾರ ಭೇಟಿ ಮಾಡಿತು. ಜೆಡಿಯು ಜಾತಿ ಆಧಾರಿತ ಜನಗಣತಿಯನ್ನು ಬೆಂಬಲಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು, ಈ ಜನಗಣತಿಯ ಹಿಂದೆ ಸಾಕಷ್ಟು ವ್ಯಾಪಕವಾದ ಆಲೋಚನೆ ಇಟ್ಟುಕೊಂಡು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವ ಬಿಜೆಪಿ, ಮುಂಬರುವ ವಿಧಾನ ಸಭಾ ಚುನಾವಣೆ ಮೇಲೆ ಈ ಮೂಲಕ ಕಣ್ಣಿಟ್ಟಿದೆ. ಶನಿವಾರ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಸಿಂಗ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು.

  ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, 2019 ರ ಮತ್ತು 2020 ರಲ್ಲಿ ಜಾತಿ ಗಣತಿ ವರದಿಯನ್ನು ಬಿಹಾರ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ ಮತ್ತು ಕೇಂದ್ರ ಸರ್ಕಾರವು ಈಗ ತನ್ನ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು. ಈ ವಿಷಯವನ್ನು ಚರ್ಚಿಸಲಾಗುವುದು ಎಂದು ಶಾ ಅವರಿಗೆ ಭರವಸೆ ನೀಡಿ ಕಳುಹಿಸಿದರು ಎಂದು ಹೇಳಿದ್ದಾರೆ.

  ಕೆಲವು ಬಿಹಾರದ ಬಿಜೆಪಿ ನಾಯಕರು ಮೀಸಲಾತಿ ವಿರುದ್ದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ, ಅವರ ನಿಲುವಿನ ಬಗ್ಗೆ ನನಗೆ ತಿಳಿದಿಲ್ಲವೆಂದು ಹೇಳಿದರು.  ಆದರೆ ಕೇಸರಿ ಪಕ್ಷವು ವಿಧಾನಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಬೆಂಬಲಿಸಿದೆ. ಜೆಡಿಯು ಸಂಸದರ ನಿಯೋಗವು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಬೇಕು ಎಂದು ಸಮಯ ಕೇಳಲಾಗಿತ್ತು ಆದರೆ ಕೊನೆಯದಾಗಿ ನೀವು ಅಮಿತ್​​ ಶಾ ಭೆಟಿ ಮಾಡಿ ಎಂದು ಬುಲಾವ್​ ಬಂದ ಕಾರಣ ಗೃಹ ಸಚಿವರನ್ನು ಭೇಟಿಯಾಗಿ ತಮ್ಮ ದೀರ್ಘ ಕಾಲದ ಬೇಡಿಕೆಯನ್ನು ಮಂಡಿಸಿದ್ದಾರೆ.

  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು  ಮತ್ತು ಬಿಜೆಪಿ ಮಿತ್ರ ಪಕ್ಷಗಳಾಗಿದ್ದರೂ, ಎರಡು ಪಕ್ಷಗಳು ಹಲವು ಸಮಸ್ಯೆಗಳು ಹಾಗೂ ಹಲವಾರು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಜಾತಿ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಗುಂಪುಗಳು ತಮ್ಮ ಸಮುದಾಯದ ಸದಸ್ಯರ ಸಂಖ್ಯೆಯನ್ನು ಬೇಕಂತಲೆ ಹೆಚ್ಚು ಮಾಡಿ ಹೇಳಿ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬುದು ನೂತನ ಜೆಡಿಯು ಅಧ್ಯಕ್ಷರ ಮಾತು.  ಜಾತಿ ರಾಜಕಾರಣ ಮಾಡುತ್ತಿರುವ ಎಲ್ಲಾ ನಾಯಕರ ಅಂಕಿ ಅಂಶ ತೆಗೆದುಕೊಂಡರೆ ನಮ್ಮ ದೇಶದ ಜನಸಂಖ್ಯೆ ಈಗ ಇರುವುದಕ್ಕಿಂತ ಮೂರು ಪಟ್ಟು ಹೆಚ್ಚಾಗುತ್ತದೆ, ಆದ ಕಾರಣ ಜಾತಿ ಆಧಾರಿತ ಜನ ಗಣತಿ ಅತಿ ಮುಖ್ಯ ಎಂದಿದ್ದಾರೆ.

  ಇದನ್ನೂ ಓದಿ: ನಡ್ಡ ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

  ಇದು ವಿವಿಧ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಸರ್ಕಾರವು ತನ್ನ ಅಭಿವೃದ್ಧಿ ನೀತಿಗಳನ್ನು, ಯೋಜನೆಗಳನ್ನು ರೂಪಿಸುವಲ್ಲಿ ಇದು ಸಹಾಯ ಮಾಡುತ್ತದೆ,  1931 ರಲ್ಲಿ ಬ್ರಿಟೀಷರು ಮಾಡಿದ ಜಾತಿ ಆಧಾರಿತ ಜನಗಣತಿಯೇ ನಮ್ಮಲ್ಲಿ ನಡೆದ ಕೊನೆಯ ಗಣತಿ ಎಂದು ಹೇಳಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: