ಎನ್​​ಡಿಎ ಜೊತೆಗಿನ ಜೆಡಿಯು ಸಂಬಂಧ ಮೊಟಕು; ಬಿಹಾರ ಬಿಟ್ಟು ಉಳಿದ ಕಡೆ ಇಲ್ಲ ಮೈತ್ರಿ

ಮೋದಿ ಸಂಪುಟದಲ್ಲಿ ಸಿಕ್ಕ ಒಂದು ಸ್ಥಾನದ ಆಫರ್ ಅನ್ನು ತಿರಸ್ಕರಿಸಿದ್ದ ಜೆಡಿಯು ಪಕ್ಷ ಇದೀಗ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ.

Vijayasarthy SN | news18
Updated:June 10, 2019, 12:10 PM IST
ಎನ್​​ಡಿಎ ಜೊತೆಗಿನ ಜೆಡಿಯು ಸಂಬಂಧ ಮೊಟಕು; ಬಿಹಾರ ಬಿಟ್ಟು ಉಳಿದ ಕಡೆ ಇಲ್ಲ ಮೈತ್ರಿ
ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್
  • News18
  • Last Updated: June 10, 2019, 12:10 PM IST
  • Share this:
ಪಾಟ್ನಾ(ಜೂನ್ 09): ಎನ್​ಡಿಎ-2 ಸರ್ಕಾರದ ಸಂಪುಟ ರಚನೆ ವಿಚಾರದಲ್ಲಿ ಅಸಮಾಧಾನಗೊಂಡಿದ್ದ ಜೆಡಿಯು ಮುಖ್ಯಸ್ಥ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್​ಡಿಎ ಮೈತ್ರಿಕೂಟದೊಂದಿಗಿನ ತಮ್ಮ ಸಂಬಂಧವನ್ನು ಸೀಮಿತಗೊಳಿಸಲು ಮುಂದಾಗಿದ್ಧಾರೆ. ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನವೇ ಸರಕಾರದಿಂದ ಹೊರಬಂದಿದ್ದ ನಿತೀಶ್ ಕುಮಾರ್ ಇದೀಗ ಬಿಹಾರ ಬಿಟ್ಟು ದೇಶದ ಉಳಿದ ಭಾಗದಲ್ಲಿ ಎನ್​ಡಿಎ ಮೈತ್ರಿಕೂಟದಿಂದಲೇ ಹೊರಬೀಳಲು ನಿರ್ಧರಿಸಿದ್ದಾರೆ. ಮುಂಬರಲಿರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷ ಏಕಾಂಗಿಯಾಗಿ ಹೋರಾಡಲಿದೆ.

“ಬಿಹಾರದ ಆಚೆ ಜೆಡಿಯು ಎನ್​ಡಿಎಯ ಭಾಗವಾಗಿರುವುದಿಲ್ಲ. ದೆಹಲಿ, ಹರ್ಯಾಣ, ಜಾರ್ಖಂಡ್ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳ ಚುನಾವಣೆಯಲ್ಲಿ ನಮ್ಮೆಲ್ಲಾ ಸಾಮರ್ಥ್ಯದೊಂದಿಗೆ ಸ್ಪರ್ಧೆ ಮಾಡುತ್ತೇವೆ” ಎಂದು ಜೆಡಿಯು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಹೇಳಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆಯಿಂದ ನಿಮ್ಮನ್ನು ಸೋಲಿಸಲಾಗದು: ಶ್ರೀಲಂಕಾಗೆ ನರೇಂದ್ರ ಮೋದಿ ಅಭಯ

ಸಂಯುಕ್ತ ಜನತಾ ದಳವನ್ನು ರಾಷ್ಟ್ರೀಯ ಪಕ್ಷವಾಗಿ ಮಾಡುವ ಗುರಿ ಇದೆ. ಬಿಹಾರ ಮತ್ತು ಅರುಣಾಚಲ ಪ್ರದೇಶದಲ್ಲಿ ಜೆಡಿಯು ಅಧಿಕೃತ ಪಕ್ಷವಾಗಿದೆ. 2020ರಷ್ಟರಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯುವುದು ನಮ್ಮ ಗುರಿ ಎಂದು ತ್ಯಾಗಿ ತಿಳಿಸಿದ್ದಾರೆ.

ಆದರೆ, ಜೆಡಿಯು ಪಕ್ಷದ ಈ ನಿರ್ಧಾರದಿಂದ ಕೇಂದ್ರ ಹಾಗೂ ಬಿಹಾರದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಯಾವ ಸಮಸ್ಯೆಯೂ ಇರುವುದಿಲ್ಲ. ಕೇಂದ್ರ ಸರ್ಕಾರದಿಂದ ಹೊರಬಿದ್ದರೂ ಕೇಂದ್ರದ ಎನ್​ಡಿಎ ಮೈತ್ರಿಕೂಟದ ಭಾಗವಾಗಿ ಜೆಡಿಯು ಮುಂದುವರಿಯಲಿದೆ. ಬಿಹಾರ ರಾಜ್ಯದಲ್ಲಿ ಜೆಡಿಯು-ಬಿಜೆಪಿ-ಎಲ್​ಜೆಪಿ ಪಕ್ಷಗಳ ಎನ್​ಡಿಎ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದೆ. ಇದೂ ಕೂಡ ಹಾಗೆಯೇ ಮುಂದುವರಿಯಲಿದೆ. ಮುಂದಿನ ವರ್ಷ ನಡೆಯುವ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಎನ್​ಡಿಎ ಮೈತ್ರಿಕೂಟದ ಭಾಗವಾಗಿಯೇ ಜೆಡಿಯು, ಬಿಜೆಪಿ ಪಕ್ಷಗಳು ಸ್ಪರ್ಧೆ ಮಾಡಲಿವೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮುಗಿಯದ ಹಿಂಸಾಚಾರ; ಟಿಎಂಸಿ-ಬಿಜೆಪಿ ನಡುವೆ ಮತ್ತೆ ಘರ್ಷಣೆ, ಮೂವರು ಬಲಿ

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಬಿಜೆಪಿಯೇತರ ಎನ್​ಡಿಎ ಪಕ್ಷಗಳಿಗೆ ಕೇವಲ ಒಂದೊಂದೇ ಸ್ಥಾನದ ಅವಕಾಶ ಕೊಡಲಾಗಿತ್ತು. ಬಿಹಾರದಲ್ಲಿ 16 ಸಂಸದರನ್ನು ಹೊಂದಿರುವ ಜೆಡಿಯು ಪಕ್ಷವು ಮೋದಿ ಸರ್ಕಾರದ ಈ ಆಫರನ್ನು ತಿರಸ್ಕರಿಸಿ, ಸಂಪುಟದಿಂದಲೇ ಹೊರಗುಳಿಯಲು ನಿರ್ಧರಿಸಿದ್ದರು.ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:June 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ