ಹುಣಸೂರಿನಿಂದ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ; ಬಂಡಾಯ ಶಮನಕ್ಕೆ ಎಚ್​ಡಿಕೆ ಕಸರತ್ತು

ಹಣ ಇಲ್ಲ ಅಂತ ಟಿಕೆಟ್ ಕೊಡಲಿಲ್ವಾ ಎಂದು ಗಣೇಶ್ ನಿವಾಸಕ್ಕೆ ಬಂದಿದ್ದ ಎಚ್​ಡಿಕೆಗೆ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಗಣೇಶ್ ಗೌಡನನ್ನು ರಾಜಕೀಯ ಬೆಳಸುವ ಜವಾಬ್ದಾರಿ ನನಗೆ ಬಿಡಿ ಎಂದು ಎಚ್​ಡಿಕೆ ಕಾರ್ಯಕರ್ತರಿಗೆ ಸಮಾಧಾನ ಪಡಿಸಿದರು.

HR Ramesh | news18-kannada
Updated:November 16, 2019, 3:23 PM IST
ಹುಣಸೂರಿನಿಂದ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ; ಬಂಡಾಯ ಶಮನಕ್ಕೆ ಎಚ್​ಡಿಕೆ ಕಸರತ್ತು
ಜೆಡಿಎಸ್ ಅಭ್ಯರ್ಥಿ ಸೋಮಶೇಖರ್
  • Share this:
ಹುಣಸೂರು: ಹುಣಸೂರು ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸೋಮಶೇಖರ್ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ರೇವಣ್ಣ, ಸಾ.ರಾ.ಮಹೇಶ್ ಹಾಗೂ ಶಾಸಕರಾದ ಅಶ್ವಿನ್ ಕುಮಾರ್ ಹಾಗೂ ಎಂ.ಮಹದೇವ್ ಅವರು  ಅಭ್ಯರ್ಥಿಯ ಜೊತೆಗಿದ್ದರು. ಬಳಿಕ ನೂರಾರು ಕಾರ್ಯಕರ್ತರ ಜೊತೆ ಆಗಮಿಸಿದ ಸೋಮಶೇಖರ್ ನಾಮಪತ್ರ ಸಲ್ಲಿಸಿದರು.

ಸೋಮಶೇಖರ್​ಗೆ ಟಿಕೆಟ್ ನೀಡಿರುವುದಕ್ಕೆ ಜೆಡಿಎಸ್​ನಲ್ಲಿ ಬಂಡಾಯದ ಕಾವು ಹೆಚ್ಚಾಗಿದ್ದು, ಅಸಮಾಧಾನ ಶಮನಕ್ಕೆ‌ ಎಚ್.ಡಿ.ಕುಮಾರಸ್ವಾಮಿ ಕಸರತ್ತು ನಡೆಸಿದ್ದಾರೆ. ಜೆಡಿಎಸ್ ಮುಖಂಡ ಗಣೇಶ್ ಅವರಿಗೆ ಟಿಕೆಟ್ ನೀಡದೇ ಇರುವುದಕ್ಕೆ ಅವರ ಬೆಂಬಲಿಗರು ಕುಮಾರಸ್ವಾಮಿ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ಹಣ ಇಲ್ಲ ಅಂತ ಟಿಕೆಟ್ ಕೊಡಲಿಲ್ವಾ ಎಂದು ಗಣೇಶ್ ನಿವಾಸಕ್ಕೆ ಬಂದಿದ್ದ ಎಚ್​ಡಿಕೆಗೆ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಗಣೇಶ್ ಗೌಡನನ್ನು ರಾಜಕೀಯ ಬೆಳಸುವ ಜವಾಬ್ದಾರಿ ನನಗೆ ಬಿಡಿ ಎಂದು ಎಚ್​ಡಿಕೆ ಕಾರ್ಯಕರ್ತರಿಗೆ ಸಮಾಧಾನ ಪಡಿಸಿದರು.

ಇದನ್ನು ಓದಿ: ಪ್ರಚಾರದ ಅಖಾಡಕ್ಕೆ ಇಳಿದ ಅನರ್ಹ ಶಾಸಕ ವಿಶ್ವನಾಥ್​; ಹುಣಸೂರನ್ನು ಹೊಸ ಜಿಲ್ಲೆಯನ್ನಾಗಿ ಮಾಡುವುದಾಗಿ ಶಪಥ

First published: November 16, 2019, 3:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading