ಕಾಶ್ಮೀರದಲ್ಲಿ(Jammu Kashmir) ಕಳೆದೊಂದು ವಾರದಿಂದ ಅಟ್ಟಹಾಸ ಮೆರೆಯುತ್ತಿರುವ ಉಗ್ರರು, ಇಂದೂ ತಮ್ಮ ಕ್ರೌರ್ಯವನ್ನ ಮುಂದುವರಿಸಿದ್ದಾರೆ. ಕಾಶ್ಮೀರದ ಪೂಂಚ್(Poonch) ಪ್ರದೇಶದಲ್ಲಿ ಭಯೋತ್ಪಾದಕರು(Militants) ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಅಧಿಕಾರಿ ಹಾಗೂ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಗುಡ್ಡ ಗಾಡು ಪ್ರದೇಶಕ್ಕೆ ಉಗ್ರರು ಪರಾರಿಯಾಗಿ ಅವಿತುಕೊಂಡಿದ್ದಾರೆ. ಘಟನೆ ನಡೆಸ ಸ್ಥಳ ಸುತ್ತುವರೆದಿರು ಯೋಧರು ಉಗ್ರರಿಗಾಗಿ ಬೇಟೆ ಮುಂದುವರಿಸಿದ್ದಾರೆ. ಭದ್ರತಾ ಪಡೆಗಳನ್ನ ಕಂಡು ರಣಹೇಡಿಗಳಂತೆ ಉಗ್ರರು ಗುಡ್ಡಗಾಡು ಪ್ರದೇಶಕ್ಕೆ ತೆರಳಿ ಅವಿತುಕೊಂಡು ಕುಳಿತಿದ್ದಾರೆ. ಇನ್ನೂ ನಿನ್ನೆ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದರು. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಂಜ್ಗಾಮ್ನಲ್ಲಿ ಈ ದಾಳಿ ನಡೆದಿತ್ತು. ಭದ್ರತಾ ಪಡೆ ಹಾಗೂ ಉಗ್ರರ ಎನ್ಕೌಂಟರ್ ವೇಳೆ, ಇಬ್ಬರು ಪೊಲೀಸರು ಗಾಯಗೊಂಡಿದ್ದರು .
ಬೆಳಗ್ಗೆ ಭದ್ರತಾ ಪಡೆ ಗುಂಡೇಟಿಗೆ ಇಬ್ಬರು ಉಗ್ರರು ಮಟಾಶ್!
ಇಂದು ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಾಜಿನ್ ಪ್ರದೇಶ್ ಗುಂಡಜಹನಿಗರ್ನಲ್ಲಿ ಉಗ್ರರು ಅವಿತಿರುವ ಮಾಹಿತಿ ಪಡೆದ ಭದ್ರತಾ ಪಡೆಗಳು ದಾಳಿ ನಡೆಸಿದ್ದರು, ಈ ವೇಳೆ ಇಬ್ಬರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಓರ್ವ ಉಗ್ರ,ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾನೆ. ಮತ್ತೊಂದು ಕಡೆ ಇದಕ್ಕೂ ಮುನ್ನ ಅನಂತ್ನಾಗ್ನ ವೆರಿನಾಗ್ ಪ್ರದೇಶದಲ್ಲಿ ಉಗ್ರರ ತಂಡ ದಾಳಿ ನಡೆಸಿತ್ತು. ಇಲ್ಲೂ ಕೂಡ ಓರ್ವ ಉಗ್ರನನ್ನ ಭದ್ರತಾ ಪಡೆ ಗುಂಡುಕ್ಕಿ ಕೊಂದಿದ್ದರು. ಒಂದು ಗನ್, ಹಾಗೂ ಗ್ರೇನೆಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಕಾಶ್ಮೀರದಲ್ಲಿ ಮತ್ತಷ್ಟು ಉಗ್ರರು ಅಡಗಿರುವ ಮಾಹಿತಿ ದೊರೆತಿದ್ದು, ಹಲವು ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಅಕ್ಟೋಬರ್ 5ರಿಂದ ಉಗ್ರರ ಕ್ರೌರ್ಯ ಕಾಶ್ಮೀರದಲ್ಲಿ ಹೆಚ್ಚಾಗಿದೆ. ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುವವರೆಗೂ ಕಾಶ್ಮೀರದಲ್ಲಿ ಈ ಮಟ್ಟದ ದಾಳಿಗಳು ನಡೆದಿರಲಿಲ್ಲ. ಕೆಲ ತಿಂಗಳುಗಳ ಕಾಲ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು. ಆಫ್ಘನ್ ತಾಲಿಬಾನಿ ರಕ್ಕಸರ ಕೈವಶವಾಗುತ್ತಿದ್ದಂತೆ. ಪಾಕಿಸ್ತಾನದಲ್ಲೂ ಉಗ್ರ ಕೃತ್ಯಗಳು ಹೆಚ್ಚಾಗಿದೆ. ಹೀಗಾಗಿ ಪಾಕಿಸ್ತಾನದಿಂದಲೇ ಉಗ್ರರು ಕಾಶ್ಮೀರಕ್ಕೆ ಎಂಟ್ರಿಕೊಟ್ಟಿದ್ದು, ಈ ರೀತಿಯ ದಾಳಿಗಳನ್ನ ನಡೆಸುತ್ತಿದ್ದಾರೆ ಅಂತ ಹೇಳಲಾಗುತ್ತಿದೆ.
ಇದನ್ನೂ ಓದಿ: Lakhimpur Kheri Violence: ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಲೇಟೆಸ್ಟ್ ಬೆಳವಣಿಗೆಗಳು ಇಲ್ಲಿವೆ!
6 ದಿನ, 10 ಅಟ್ಯಾಕ್, ಇಬ್ಬರು ಉಗ್ರರ ಹತ್ಯೆ
ಅಕ್ಟೋಬರ್ 5ರಿಂದ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಶ ಶುರುವಾಗಿದೆ, ಅ. 5ರಂದು ನಡೆದ ಉಗ್ರರ ದಾಳಿಯಲ್ಲಿ ಖ್ಯಾತ ಕಾಶ್ಮೀರಿ ಪಂಡಿತ್ ಉದ್ಯಮಿ ಮಖನ್ ಲಾಲ್ ಬಿಂದ್ರೂ ಬಲಿಯಾಗಿದ್ರು. ಅದೇ ದಿನ ಮತ್ತೆ ಎರಡು ಕಡೆ ಉಗ್ರರು ದಾಳಿ ನಡೆಸಿ, ಇಬ್ಬರು ನಾಗರಿಕರನ್ನ ಕೊಂದು ಹಾಕಿದ್ದರು. ಮತ್ತೆ ಅಕ್ಟೋಬರ್ 7ರಂದು ಶ್ರೀನಗರದ ಈಡ್ಗಾ ಸಂಗಮ್ ಪ್ರದೇಶದಲ್ಲಿರುವ ಶಾಲೆಯೊಂದರ ಮೇಲೆ ಉಗ್ರರು ಅಟ್ಯಾಕ್ ಮಾಡಿ ಮುಖ್ಯೋಪಾಧ್ಯಾಯ ಸತಿದಂರ್ ಕೌರ್ ಹಾಗೂ ಶಿಕ್ಷಕ ದೀಪಕ್ ಎಂಬುವವರನ್ನ ಗುಂಡಿಕ್ಕಿ ಕೊಂದಿದ್ದರು. ಮತ್ತೆ ನಿನ್ನೆ ಕುಲ್ಗಾಮ್ನಲ್ಲಿ ದಾಳಿ ನಡೆಸಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಇಂದು ಮತ್ತೆ ಕಾಶ್ಮೀರದ ಪೂಂಚ್ ಸೆಕ್ಟರ್ನಲ್ಲಿ ಉಗ್ರರು ದಾಳಿ ನಡೆಸಿದ್ದು, ನಾಲ್ವರು ಯೋಧರು ಹಾಗೂ ಒಬ್ಬ ಕಿರಿಯ ನಿಯೋಜಿತ ಅಧಿಕಾರಿಯನ್ನ ಕೊಂದಿದ್ದಾರೆ. ಕೂಡಲೇ ಸ್ಥಳಕ್ಕೆ ಮತ್ತಷ್ಟು ಭದ್ರತಾ ಪಡೆಗಳು ಆಗಮಿಸಿ, ಉಗ್ರರನ್ನು ಸುತ್ತುವರೆದಿದ್ದಾರೆ. ಇನ್ನು ಬೆಳಗ್ಗೆ ಅನಂತ್ನಾಗ್ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರನ್ನ ಗುಂಡಿಕ್ಕಿ ಕೊಲ್ಲಲಾಗಿದೆ. ಆದಷ್ಟು ಬೇಗ ಯೋಧರನ್ನ ಕೊಂದ, ಮತ್ತಷ್ಟು ರಕ್ಕಸರ ಹತ್ಯೆಯಾಗಲಿ ಅಂತ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ವರದಿ - ವಾಸುದೇವ್. ಎಂ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ