• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Jayalalithaa’s 73rd birth anniversary: ಜಯಲಲಿತಾ ಹುಟ್ಟುಹಬ್ಬದ ಅಂಗವಾಗಿ ಎಐಎಡಿಎಂಕೆ ಮತ್ತು ಶಶಿಕಲಾ ಬೆಂಬಲಿಗರಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ

Jayalalithaa’s 73rd birth anniversary: ಜಯಲಲಿತಾ ಹುಟ್ಟುಹಬ್ಬದ ಅಂಗವಾಗಿ ಎಐಎಡಿಎಂಕೆ ಮತ್ತು ಶಶಿಕಲಾ ಬೆಂಬಲಿಗರಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ

ಜಯಲಲಿತಾ ಅವರ ಜನ್ಮದಿನದ ಪ್ರಯುಕ್ತ ಎಐಎಡಿಎಂಕೆ ಪಕ್ಷವು ತನ್ನ ಕಾರ್ಯಕರ್ತರಿಗೆ ತಮ್ಮ ತಮ್ಮ ಮನೆಗಳಲ್ಲಿ ದೀಪ ಹಚ್ಚಿ, ಪಕ್ಷವನ್ನು ಕಾಪಾಡುವಂತೆ ಪ್ರತಿಜ್ಞೆ ಮಾಡುವಂತೆ ಮನವಿ ಮಾಡಿದೆ. ತಮಿಳುನಾಡು ಸಿಎಂ ಪಳನಿಸ್ವಾಮಿ ಹಾಗೂ ಡಿಸಿಎಂ ಪನ್ನೀರ್​ ಸೆಲ್ವಂ ತಮ್ಮ ಪಕ್ಷದ ಕಾರ್ಯಕರ್ತರಿಗೆ ಈ ಮನವಿ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಚೆನ್ನೈ(ಫೆ.24): ಇಂದು ತಮಿಳುನಾಡು ಮಾಜಿ ಸಿಎಂ ಜೆ. ಜಯಲಲಿತಾ ಅವರ 73ನೇ ಜನ್ಮದಿನದ ಅಂಗವಾಗಿ ಆಡಳಿತಾರೂಢ ಎಐಎಡಿಎಂಕೆ ಪಕ್ಷವು ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸದ್ಯ ತಮಿಳುನಾಡಿನ ಜನರ ಚಿತ್ತ ಎಐಎಡಿಎಂಕೆ ನಾಯಕ ಹಾಗೂ ಕ್ವಾರಂಟೈನ್​ ಅವಧಿ ಪೂರ್ಣಗೊಳಿಸಿರುವ ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಅವರತ್ತ ನೆಟ್ಟಿದೆ. ಚಿನ್ನಮ್ಮ ನ ತಂಡವೂ ಸಹ ಜಯಲಲಿತಾ ಅವರ ಜನ್ಮದಿನದ ಪ್ರಯುಕ್ತ ಬೃಹತ್ ಕಾರ್ಯಕ್ರಮ ನಡೆಸಲು ಪ್ಲಾನ್ ಮಾಡಿದೆ ಎಂದು ತಿಳಿದು ಬಂದಿದೆ.

ಮಲ್ಟಿಮೀಡಿಯಾ ವರದಿ ಪ್ರಕಾರ, ಶಶಿಕಲಾ ಅವರ ತಂಡವು ಜಯಲಲಿತಾ ಅವರ ಜನ್ಮದಿನದ ಅಂಗವಾಗಿ ಬೃಹತ್ ರೋಡ್​ ಶೋ ನಡೆಸಲು ಸಜ್ಜಾಗಿದೆ. ನಾಲ್ಕು ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಫೆ.9ರಂದು ತಮಿಳುನಾಡಿಗೆ ಹಿಂದಿರುಗಿದ ಶಶಿಕಲಾ ಅವರಿಗೆ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಭವ್ಯವಾದ ಸ್ವಾಗತ ಕೋರಿದ್ದರು.

ಮುಂದೆ ವಿಧಾನಸಭಾ ಚುನಾವಣೆ ಇರುವ ಕಾರಣಕ್ಕೆ ಶಶಿಕಲಾ ಅವರ ಆಗಮನ ಎಐಎಡಿಎಂಕೆ ಪಕ್ಷದ ನಾಯಕರ ನಿದ್ದೆಗೆಡಿಸಿತ್ತು. ಶಶಿಕಲಾ ಅವರು ಜೈಲಿನಿಂದ ಬಿಡುಗಡೆಯಾಗಿ ತಮಿಳುನಾಡಿಗೆ ತೆರಳುವಾಗ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಅದ್ಭುತವಾಗಿ ಸ್ವಾಗತಿಸಿದ್ದರು.

ಜಯಲಲಿತಾ ಅವರ ಜನ್ಮದಿನದ ಪ್ರಯುಕ್ತ ಎಐಎಡಿಎಂಕೆ ಪಕ್ಷವು ತನ್ನ ಕಾರ್ಯಕರ್ತರಿಗೆ ತಮ್ಮ ತಮ್ಮ ಮನೆಗಳಲ್ಲಿ ದೀಪ ಹಚ್ಚಿ, ಪಕ್ಷವನ್ನು ಕಾಪಾಡುವಂತೆ ಪ್ರತಿಜ್ಞೆ ಮಾಡುವಂತೆ ಮನವಿ ಮಾಡಿದೆ. ತಮಿಳುನಾಡು ಸಿಎಂ ಪಳನಿಸ್ವಾಮಿ ಹಾಗೂ ಡಿಸಿಎಂ ಪನ್ನೀರ್​ ಸೆಲ್ವಂ ತಮ್ಮ ಪಕ್ಷದ ಕಾರ್ಯಕರ್ತರಿಗೆ ಈ ಮನವಿ ಮಾಡಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಲೆಕ್ಕಾಚಾರ ತಲೆಕೆಳಗು; ಜೆಡಿಎಸ್​ಗೆ ಒಲಿದ ಮೇಯರ್ ಪಟ್ಟ

ಇಂದು ಸಂಜೆ 6 ಗಂಟೆಗೆ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ತಮ್ಮ ಮನೆಗಳಲ್ಲಿ ದೀಪ ಹಚ್ಚಿ, ಕೊನೆಯುಸಿರು ಇರುವವರೆಗೂ ರಾಜ್ಯ ಜನರು ಹಾಗೂ ಪಕ್ಷವನ್ನು ಕಾಪಾಡುತ್ತೇವೆ ಎಂದು ಜಯಲಲಿತಾ ಅವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದ್ದು, ಎಲ್ಲರ ಚಿತ್ತ ತಮಿಳುನಾಡು ರಾಜಕಾರಣದತ್ತ ನೆಟ್ಟಿದೆ. ಎಐಎಡಿಎಂಕೆಯನ್ನು ಸೋಲಿಸಲು ಶತ್ರುಗಳು ಹಾಗೂ ದ್ರೋಹಿಗಳು ಕೈಜೋಡಿಸಿದ್ದಾರೆ ಎಂದು ಸಿಎಂ ಪಳನಿಸ್ವಾಮಿ ಹಾಗೂ ಡಿಸಿಎಂ ಪನ್ನೀರ್ ಸೆಲ್ವಂ ಅವರು ಕಾರ್ಯಕರ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸತತತ ಎರಡನೇ ಬಾರಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಪ್ರತಿಜ್ಞೆ ಮಾಡಿದ ಅವರು, ಅಂತಹ ಜನ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕಬೇಕಾದರೆ, ಕಠಿಣ ಶ್ರಮ, ಒಗ್ಗಟ್ಟು ಮತ್ತು ಪಕ್ಷ ನಿಷ್ಠೆ ಮೂಲಕ ಅವರನ್ನು ಸೋಲಿಸುವ ಮೂಲಕ ಮತ್ತೆ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಸುಮಾರು 10 ವರ್ಷಗಳ ಕಾಲ ಅಧಿಕಾರದಿಂದ ಹೊರಗಿರುವ ಪ್ರಮುಖ ವಿರೋಧ ಪಕ್ಷವಾದ ಡಿಎಂಕೆ, ಇದೇ ಏಪ್ರಿಲ್​ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಪಣ ತೊಟ್ಟಿದೆ. ಹೀಗಾಗಿ ಎಐಎಡಿಎಂಕೆ ಹಾಗೂ ಡಿಎಂಕೆ ಪಕ್ಷಗಳ ನಡುವೆ ಹಣಾಹಣಿ ಏರ್ಪಟ್ಟಿದೆ. 2011ರಲ್ಲಿ ಡಿಎಂಕೆ ಪಕ್ಷದಿಂದ ಅಧಿಕಾರವನ್ನು ಕಸಿದುಕೊಂಡ ಎಐಎಡಿಎಂಕೆ, ಜಯಲಲಿತಾ ಅವರ ನಾಯಕತ್ವದಲ್ಲಿ 2016ರಲ್ಲಿ ಮತ್ತೆ ಜಯಭೇರಿ ಬಾರಿಸಿತ್ತು.

top videos
    First published: