• Home
  • »
  • News
  • »
  • national-international
  • »
  • ಬಿಜೆಪಿ ಸೇರಿದ ಜಯಪ್ರದಾ; ಅಜಾಮ್​ ಖಾನ್​ ವಿರುದ್ಧ ಚುನಾವಣಾ ಕಣಕ್ಕೆ?

ಬಿಜೆಪಿ ಸೇರಿದ ಜಯಪ್ರದಾ; ಅಜಾಮ್​ ಖಾನ್​ ವಿರುದ್ಧ ಚುನಾವಣಾ ಕಣಕ್ಕೆ?

ಜಯಪ್ರದಾ

ಜಯಪ್ರದಾ

ತೆಲಗು ದೇಶಂ ಪಕ್ಷದೊಂದಿಗೆ ರಾಜಕೀಯ ಜೀವನ ಆರಂಭಿಸಿದ ಜಯಪ್ರದಾ ನಂತರ ಸಮಾಜವಾದ ಪಕ್ಷಕ್ಕೆ ಸೇರ್ಪಡನೆಯಾದರು. ಎರಡು ಬಾರಿ ಸಮಾಜವಾದಿ ಪಕ್ಷದಿಂದ ಸಂಸದೆಯಾಗಿ ಆಯ್ಕೆಯಾಗಿದ್ದ ಅವರು, ಈಗ ಬಿಜೆಪಿ ಸೇರಿದ್ದಾರೆ

  • News18
  • Last Updated :
  • Share this:

ನವದೆಹಲಿ (ಮಾ.26): ಲೋಕಸಭಾ ಚುನಾವಣೆಗೆ ಇನ್ನೇನು ಎರಡುವಾರ ಬಾಕಿ ಇದೆ ಎನ್ನುವಾಗ  ಹಿರಿಯ ನಟಿ, ಮಾಜಿ ಸಂಸದೆ ಜಯಪ್ರದಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಸಮಾಜವಾದಿ ಪಕ್ಷದ  ನಾಯಕ ಅಜಾಮ್​ ಖಾನ್​ ವಿರುದ್ಧ ರಾಮ್​ಪುರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ

ತೆಲಗು ದೇಶಂ ಪಕ್ಷದೊಂದಿಗೆ ರಾಜಕೀಯ ಜೀವನ ಆರಂಭಿಸಿದ ಜಯಪ್ರದಾ ನಂತರ ಸಮಾಜವಾದ ಪಕ್ಷಕ್ಕೆ ಸೇರ್ಪಡನೆಯಾದರು. ಎರಡು ಬಾರಿ ಸಮಾಜವಾದಿ ಪಕ್ಷದಿಂದ ಸಂಸದೆಯಾಗಿ ಆಯ್ಕೆಯಾಗಿದ್ದ ಅವರು, ಈಗ ಬಿಜೆಪಿ ಸೇರಿದ್ದಾರೆ

ಬಿಜೆಪಿ ಸೇರ್ಪಡನೆ ಬಳಿಕ ಮಾತನಾಡಿದ ಅವರು, ಇದು ನನ್ನ ಜೀವನದ ಪ್ರಮುಖ ಘಟನೆಯಾಗಿದೆ. ನಾನು ರಾಷ್ಟ್ರೀಯ ಪಕ್ಷದ ಭಾಗವಾಗುತ್ತಿರುವುದಕ್ಕೆ ಸಂತೋಷವಾಗಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಕೆಲಸ ಮಾಡುವುದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದರು.

ಅಜಾಮ್​ ಖಾನ್​ ನನ್ನನ್ನು ಶೋಷಣೆ ಮಾಡಿದರು. ಅವರಿಂದ ನನಗೆ ಬೆದರಿಕೆಗಳು ಎದುರಾಗಿದ್ದವು ಎಂದು ಈ ಹಿಂದೆ ಜಯಪ್ರದ ತಿಳಿಸಿದ್ದರು.

ಇದನ್ನು ಓದಿ: ನನಗೆ ನೈತಿಕತೆಯಿದೆ ಅದಕ್ಕೇ ಧೈರ್ಯವಾಗಿ ಪ್ರಧಾನಿ ಮೋದಿಯನ್ನು ಪ್ರಶ್ನಿಸ್ತೀನಿ; ಟ್ವಿಟ್ಟರ್​ ಲೈವ್​ನಲ್ಲಿ ಸಿದ್ದರಾಮಯ್ಯ

ನಾನು ಸಮಾಜವಾದಿ ಪಕ್ಷದ ಸಂಸದೆಯಾಗಿದ್ದರೂ, ಅಜಾಮ್​ ಖಾನ್​ ನನ್ನ ಮೇಲೆ ಶೋಷಣೆ ನಡೆಸಿದರು, ನನ್ನ ಮೇಲೆ ಆ್ಯಸಿಡ್​ ದಾಳಿ ಮಾಡಲು ಪ್ರಯತ್ನಿಸಿದರು. ನಾಳೆ ನಾನು ಬದುಕಿರುತ್ತೇನಾ ಎಂಬ ಬಗ್ಗೆ ಕೂಡ ನನಗೆ ಸ್ಪಷ್ಟನೆ ಇರಲಿಲ್ಲ. ನಾನು ಮನೆ ಬಿಡುವಾಗಲು ನಾನು ಸುರಕ್ಷಿತವಾಗಿ ಬರುತ್ತೇನೆ ಎಂಬ ನಂಬಿಕೆ ಇಲ್ಲ ಎಂದು ನನ್ನ ತಾಯಿಗೆ ಹೇಳುತ್ತಿದೆ. ಇದರಿಂದಾಗಿ ನಾನು ಪಕ್ಷದಿಂದ ಉಚ್ಛಾಟನೆಗೊಂಡೆ ಎಂದು ಕಳೆದ ತಿಂಗಳು ಮುಂಬಯಿನಲ್ಲಿ ನಡೆದ ಬುಕ್​ ಫೆಸ್ಟಿವಲ್​ನಲ್ಲಿ ಅವರು ತಿಳಿಸಿದ್ದರು.

ಪಕ್ಷದಿಂದ ಉಚ್ಛಾಟನೆಗೊಂಡ ಬಳಿಕ ಜಯಪ್ರದ ಅಜಿತ್​ ಸಿಂಗ್​ ಜೊತೆ ರಾಷ್ಟ್ರೀಯ ಲೋಕ ದಳ ಸೇರಿದರು. ಬಳಿಕ 2014ರಲ್ಲಿ ಬಿಜ್ನೂರ್​ನಿಂದ ಸ್ಪರ್ಧೆ ಮಾಡಿ ಸೋತಿದ್ದರು.

First published: