ಇಂತಹ ಮನಸ್ಥಿತಿಯಿಂದ ಬದಲಾವಣೆ ಸಾಧ್ಯವಿಲ್ಲ; ರಮೇಶ್​ ಕುಮಾರ್​ ಹೇಳಿಕೆಗೆ ಜಯಾ ಬಚ್ಚನ್​​ ಕಿಡಿ

ಕರ್ನಾಟಕದ ಶಾಸಕರಂತಹ ಮನೋಭಾವ ಹೊಂದಿದ ವ್ಯಕ್ತಿಗಳು ವಿಧಾನಸಭೆ ಅಥವಾ ಸಂಸತ್​​ನಲ್ಲಿ ಕುಳಿತರೆ ಬದಲಾವಣೆ ಸಾಧ್ಯವಾಗುವುದಿಲ್ಲ

ಜಯಾ ಬಚ್ಚನ್​​

ಜಯಾ ಬಚ್ಚನ್​​

 • Share this:
  ಅತ್ಯಾಚಾರ​ ಕುರಿತಾದ ಮಾಜಿ ಸ್ಪೀಕರ್ ರಮೇಶ್​ ಕುಮಾರ್ (Ramesh Kumar Controversial statement)  ವಿವಾದಾತ್ಮಕ ಹೇಳಿಕೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಎರಡು ಬಾರಿ ಸ್ಪೀಕರ್​ ಹುದ್ದೆ ನಿಭಾಯಿಸಿದ್ದ ಹಿರಿಯ ಶಾಸಕರು ಈ ರೀತಿ ಲಘುವಾಗಿ ಹೇಳಿಕೆ ನೀಡಿದ ಬಗ್ಗೆ ಬಿಜೆಪಿ ನಾಯಕರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಅವರ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್​ ತೀವ್ರ ಮುಜುಗರ ಅನುಭವಿಸುವಂತೆ ಆಗಿದೆ. ಅಲ್ಲದೇ ಈ ಸಂಬಂಧ ಎಐಸಿಸಿ ಕೂಡ ಗರಂ ಆಗಿ ಸ್ಪಷ್ಟನೆ ಕೇಳಿದೆ. ರಮೇಶ್​ ಕುಮಾರ್​ ಅವರ ಹೇಳಿಕೆ ಇಂದು ಸಂಸತ್​​ನಲ್ಲೂ ಸದ್ದು ಮಾಡಿದ್ದು, ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ಸಮಾಜವಾದಿ ಪಕ್ಷದ ಶಾಸಕಿ ಜಯಾ ಬಚ್ಚನ್ (Jaya Bachchan )​ ಕಿಡಿಕಾರಿದ್ದಾರೆ.

  ನಾಚಿಕೆಗೇಡಿನ ನಡವಳಿಕೆ

  ಈ ಸಂಬಂಧ ಸಂಸತ್ತಿನಲ್ಲಿ ಮಾತನಾಡಿದ ನಟಿ, ಶಾಸಕಿ ಜಯಾ ಬಚ್ಚನ್​, ಕಾಂಗ್ರೆಸ್​​ ನಾಯಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಕರ್ನಾಟಕದ ಶಾಸಕರಂತಹ ಮನೋಭಾವ ಹೊಂದಿದ ವ್ಯಕ್ತಿಗಳು ವಿಧಾನಸಭೆ ಅಥವಾ ಸಂಸತ್​​ನಲ್ಲಿ ಕುಳಿತರೆ ಬದಲಾವಣೆ ಸಾಧ್ಯವಾಗುವುದಿಲ್ಲ ಎಂದಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
  ಇದೊಂದು ನಾಚಿಕೆಗೇಡಿನ ನಡವಳಿಕೆ ಇದರ ವಿರುದ್ಧ ಪಕ್ಷ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವರು ತೆಗೆದುಕೊಂಡ ಕ್ರಮ ಮುಂದಿನ ಬಾರಿ ಜನಪ್ರತಿನಿಧಿಗಳು ಈ ರೀತಿ ಮಾತನಾಡುವ ಮುನ್ನ ಯೋಚನೆ ಮಾಡಬೇಕು ಎಂದು ಒತ್ತಾಯಿಸಿದರು.

  ಸಾರ್ವಜನಿಕವಾಗಿ ಟೀಕೆ

  ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಡೆದಿದೆ. ರೈತರ ಸಮಸ್ಯೆ ವಿಚಾರವಾಗಿ ಮಾತನಾಡುತ್ತಾ ಒಂದು ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಲೆಟ್ಸ್ ಎಂಜಾಯ್ ದ ಸಿಚುಯೇಶನ್ ಎಂದರು. ಆಗ ರಮೇಶ್ ಕುಮಾರ್ ಅವರು ಮಧ್ಯ ಪ್ರವೇಶಿಸಿ, ಯಾವಾಗ ರೇಪ್ ಅನಿವಾಯರ್ಯ ಆಗುತ್ತೋ ಆಗ ಮಲಗಿ ಆನಂದಿಸಬೇಕು ಎಂದು ಇಂಗ್ಲೀಷ್​​ನ ನುಡಿಯೊಂದನ್ನು ಪ್ರಸ್ತಾಪಿಸಿದರು. ಇದಕ್ಕೆ ಸ್ಪೀಕರ್ ಕಾಗೇರಿ ಯಾವ ಆಕ್ಷೇಪ ಕೂಡ ವ್ಯಕ್ತಪಡಿಸಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯ ವೈರಲ್ ಆಗಿದೆ. ಹಾಲಿ ಸ್ಪೀಕರ್ ಮತ್ತು ಮಾಜಿ ಸ್ಪೀಕರ್ ಅವರ ವರ್ತನೆ ಬಗ್ಗೆ ಹಲವು ಕಿಡಿಕಾರಿದ್ಧಾರೆ

  ಇದನ್ನು ಓದಿ: ಆಡಿದ ಮಾತುಗಳಿಗೆ ಕ್ಷಮೆ ಕೇಳಿದ ರಮೇಶ್ ಕುಮಾರ್

  ಕ್ಷಮೆಯಾಚಿಸಿದ ಮಾಜಿ ಸ್ಪೀಕರ್​

  ಇನ್ನು ರಮೇಶ್​ ಕುಮಾರ್​ ಅವರ ಈ ವಿವಾದಾತ್ಮಕ ಹೇಳಿಕೆ ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಮಾಜಿ ಸ್ಪೀಕರ್ ಟ್ವೀಟರ್​ ಮೂಲಕ ಕ್ಷಮೆ ಯಾಚಿಸಿದ್ದಾರೆ. ವಿಧಾನಸಭೆಯಲ್ಲಿ ನಾನು ಮಾಡಿದ ಅಸಡ್ಡೆ ಮತ್ತು ನಿರ್ಲಕ್ಷ್ಯದ ಮಾತಿಗೆ ಪ್ರಾಮಾಣಿಕವಾಗಿ ನಾನು ಪ್ರತಿಯೊಬ್ಬರ ಕ್ಷಮೆಯಾಚಿಸುತ್ತೇನೆ. ನನ್ನ ಹೇಳಿಕೆ ಮೂಲಕ ಇಂತಹ ಅಪರಾಧವನ್ನು ಹಗುರಗೊಳಿಸುವುದಲ್ಲ. ನಾನು ಮುಂದೆ ಪದ ಬಳಕೆಯಲ್ಲಿ ಎಚ್ಚರಿಕೆವಹಿಸುತ್ತೇನೆ ಎಂದಿದ್ದಾರೆ.

  ಇದನ್ನು ಓದಿ: ರೇಪ್ ಅನಿವಾರ್ಯ ಆದಾಗ ಆನಂದಿಸಬೇಕು ಎಂದ ರಮೇಶ್ ಕುಮಾರ್; ಮುಗುಳ್ನಕ್ಕ ಸ್ಪೀಕರ್

  ಕಿಡಿಕಾರಿದ ಕಾಂಗ್ರೆಸ್​  ನಾಯಕರು

  ಇನ್ನು ರಮೇಶ್ ಕುಮಾರ್​ ಅವರ ಹೇಳಿಕೆಗೆ ಪಕ್ಷದ ಹಲವು ಹಿರಿಯ​ ನಾಯಕರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇಂದು ಟ್ವೀಟ್​ ಮಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್​ ಸಿಂಗ್​ ಸುರ್ಜೇವಾಲಾ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು ಹಿರಿಯ ಕಾಂಗ್ರೆಸ್ ಶಾಸಕರ ನಡುವೆ ಸದನದಲ್ಲಿ ಹೆಚ್ಚು ಆಕ್ಷೇಪಾರ್ಹ ಮತ್ತು ಸಂವೇದನಾಶೀಲವಲ್ಲದ ಪ್ರಹಸನದ ವಿನಿಮಯವನ್ನು ಕಾಂಗ್ರೆಸ್ ಪಕ್ಷವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

  ವಿಧಾನಸಭೆಯಲ್ಲಿ ಈ ವಿಚಾರ ಕುರಿತು  ರಮೇಶ್ ಕುಮಾರ್ ಕ್ಷಮೆಯಾಚಿಸಿದ್ದಾರೆ. ಇದರ ಬಳಿಕ ಮಾತನಾಡಿದ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಈ ವಿಚಾರ ಬೆಳೆಸುವುದು ಬೇಡ. ಅವರು ಕ್ಷಮೆ ಕೇಳಿದ್ದಾರೆ. ಯಾವುದೋ ಸಾಂದರ್ಭಿಕ ವಿಚಾರವಾಗಿ ಅವರು ಮಾತನಾಡಿದ್ದಾರೆ. ಇದರ ಹಿಂದೆ ದುರುದ್ಧೇಶವಿಲ್ಲ ಎಂದಿದ್ದಾರೆ
  Published by:Seema R
  First published: