Kangana Ranaut: ಮಾನನಷ್ಟ ಮೊಕದ್ದಮೆ; ನಟಿ ಕಂಗನಾ ಬಂಧಿಸುವಂತೆ ನ್ಯಾಯಲಯದ ಮೊರೆ ಹೋದ ಜಾವೇದ್​ ಅಖ್ತರ್​

ಮುಂದಿನ ವಿಚಾರಣೆಯ ದಿನಾಂಕವಾದ ಸೆಪ್ಟೆಂಬರ್ 20 ರಂದು ನ್ಯಾಯಲಯದ ಮುಂದೆ ಹಾಜರಾಗುವಂತೆ ನ್ಯಾಯಾಲಯವು ಕಂಗನಾ ಅವರಿಗೆ ಸೂಚಿಸಿತು. ಕಳೆದ ವಾರ, ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸುವ ಕಂಗನಾ ಕೋರಿಕೆಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು.

ಮುಂದಿನ ವಿಚಾರಣೆಯ ದಿನಾಂಕವಾದ ಸೆಪ್ಟೆಂಬರ್ 20 ರಂದು ನ್ಯಾಯಲಯದ ಮುಂದೆ ಹಾಜರಾಗುವಂತೆ ನ್ಯಾಯಾಲಯವು ಕಂಗನಾ ಅವರಿಗೆ ಸೂಚಿಸಿತು. ಕಳೆದ ವಾರ, ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸುವ ಕಂಗನಾ ಕೋರಿಕೆಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು.

ಮುಂದಿನ ವಿಚಾರಣೆಯ ದಿನಾಂಕವಾದ ಸೆಪ್ಟೆಂಬರ್ 20 ರಂದು ನ್ಯಾಯಲಯದ ಮುಂದೆ ಹಾಜರಾಗುವಂತೆ ನ್ಯಾಯಾಲಯವು ಕಂಗನಾ ಅವರಿಗೆ ಸೂಚಿಸಿತು. ಕಳೆದ ವಾರ, ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸುವ ಕಂಗನಾ ಕೋರಿಕೆಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು.

 • Share this:
   Bollywood: ಖ್ಯಾತ ಸಾಹಿತಿ ಜಾವೇದ್ ಅಖ್ತರ್ (Javed Akhtar) ಅವರು ನಟಿ ಕಂಗನಾ ರಣಾವತ್ (Kangana Ranaut) ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ಒಂದು ದೊಡ್ಡ ಬೆಳವಣಿಗೆಯಲ್ಲಿ ನಡೆದಿದ್ದು, ಖ್ಯಾತ ಚಿತ್ರ ಸಾಹಿತಿಯ ತನ್ನ ವಕೀಲ ಜಯ್ ಭಾರದ್ವಾಜ್ (Jay Bharadwaj) ಮೂಲಕ, ಪ್ರಕರಣದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಬಾಲಿವುಡ್ ನಟಿ ವಿರುದ್ಧ ಬಂಧನ ವಾರೆಂಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

  ಜಾವೇದ್ ಅಖ್ತರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಮಯದಲ್ಲಿ ಕಂಗನಾ ರಣಾವತ್ ಅವರಿಗೆ ಮಂಗಳವಾರ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು (Andheri Metropolitan Magistrate’s court) ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿದೆ. ಕಂಗನಾ ಅವರ ವಕೀಲ ರಿಜ್ವಾನ್ ಸಿದ್ದಿಕಿ ಅವರು ನ್ಯಾಯಲಯದ ಮುಂದೆ ತಮ್ಮ ಮನವಿ ಸಲ್ಲಿಸಿದ್ದು, ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಕಾರಣ ನಟಿ ನಿರಂತರವಾಗಿ ಪ್ರಯಾಣಿಸುತ್ತಿರುವುದನ್ನು ಉಲ್ಲೇಖಿಸಿದ ನಂತರ ನ್ಯಾಯಾಲಯವು ಈ ವಿನಾಯಿತಿ  ನೀಡಿತು ಮತ್ತು ಅವರಲ್ಲಿ ಕೆಲವು ರೋಗಲಕ್ಷಣಗಳು ಕಾಣಿಸಿಕೊಂಡ ಕಾರಣ  ಕೋವಿಡ್ ಪರೀಕ್ಷೆಯನ್ನು (Covid test ) ಮಾಡಲು ಕೇಳಿರುವುದಾಗಿ ವರದಿಯಾಗಿದೆ.

  ಮುಂದಿನ ವಿಚಾರಣೆಯ ದಿನಾಂಕವಾದ ಸೆಪ್ಟೆಂಬರ್ 20 ರಂದು ನ್ಯಾಯಲಯದ ಮುಂದೆ ಹಾಜರಾಗುವಂತೆ ನ್ಯಾಯಾಲಯವು ಕಂಗನಾ ಅವರಿಗೆ ಸೂಚಿಸಿತು. ಕಳೆದ ವಾರ, ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸುವ ಕಂಗನಾ ಕೋರಿಕೆಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಕಂಗನಾ, ತನ್ನ ವಕೀಲ ರಿಜ್ವಾನ್ ಸಿದ್ದಿಕಿ ಮೂಲಕ, ಈ ವರ್ಷದ ಆರಂಭದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರಂಭಿಸಿದ ಮಾನನಷ್ಟ ಮೊಕದ್ದಮೆಗಳನ್ನು ಪ್ರಶ್ನಿಸಿದ್ದರು, ನ್ಯಾಯಾಲಯವು ಈ ಪ್ರಕರಣದ ಕುರಿತು ತೀವ್ರವಾಗಿ ಗಮನ ಹರಿಸಲು ವಿಫಲವಾಗಿದೆ ಎಂದು ಹೇಳಿತು.

  ಜಾವೇದ್ ಅಖ್ತರ್ ಪರ ವಕೀಲ ಜಯ್ ಭಾರದ್ವಾಜ್ ಅವರು ಹೈಕೋರ್ಟ್‌ಗೆ ಹೇಳಿದ್ದು, ರಣಾವತ್ ಭಾಗವಹಿಸಿದ ಸಂದರ್ಶನದಲ್ಲಿ ಜಾವೇದ್​ ಅಖ್ತರ್​ ವಿರುದ್ದ ಮಾಡಿರುವ ಮಾನಹಾನಿಕರ ಹೇಳಿಕೆಗಳನ್ನು ಉಲ್ಲೇಖಿಸಿರುವ ದೂರು ಮತ್ತು ಆಯ್ದ ಭಾಗಗಳನ್ನು ಪರಿಶೀಲಿಸಿದ ನಂತರ ಮ್ಯಾಜಿಸ್ಟ್ರೇಟ್ ಅವರು ಈ ಕೇಸನ್ನು ಪೊಲೀಸ್ ತನಿಖೆಗೆ ಸೂಚಿಸಿದ್ದಾರೆ, ಇದರಲ್ಲಿ ಅವರು ಆಪಾದಿತ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಹೇಳಲಾಗಿತ್ತು.

  ಇದನ್ನೂ ಓದಿ: Afghan Cricket| ತಾಲಿಬಾನ್ ಕಾಟ, ಅಫ್ಘನ್​ನಲ್ಲಿ ಕ್ರಿಕೆಟ್​ಗೆ ಪೀಕಲಾಟ; ಐಸಿಸಿ ನಿರ್ಧಾರದ ಮೇಲೆ ನಿಂತಿದೆ ಭವಿಷ್ಯ!

  ಹಿರಿಯ ಪತ್ರಕರ್ತರಿಗೆ ನೀಡಿದ ದೂರದರ್ಶನ ಸಂದರ್ಶನದಲ್ಲಿ ತನ್ನ ವಿರುದ್ಧ ಮಾನಹಾನಿಕರ ಮತ್ತು ಆಧಾರರಹಿತ ಟೀಕೆಗಳನ್ನು ಮಾಡಿದ್ದಕ್ಕಾಗಿ ಅಖ್ತರ್ ಕಳೆದ ವರ್ಷ ನವೆಂಬರ್‌ನಲ್ಲಿ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ರಣಾವತ್ ವಿರುದ್ಧ ಕ್ರಿಮಿನಲ್ ದೂರನ್ನು ದಾಖಲಿಸಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: