ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ; ಭಾರತದ ಪ್ರವಾಸ ರದ್ದುಗೊಳಿಸಿದ ಜಪಾನ್​ ಪ್ರಧಾನಿ

ಪ್ರಧಾನಿ ಮೋದಿ ಹಾಗೂ ಜಪಾನ್​ ಪ್ರಧಾನಿ ಅಬೆ ನಡುವೆ ಡಿ.15ರಿಂದ 17ರವರೆಗೆ ಗುವಾಹತಿಯಲ್ಲಿ ಸಭೆ ನಡೆಸಲು ಸಕಲ ಸಿದ್ಧತೆ ನಡೆಸಲಾಗಿತ್ತು.

Seema.R | news18-kannada
Updated:December 13, 2019, 11:20 AM IST
ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ; ಭಾರತದ ಪ್ರವಾಸ ರದ್ದುಗೊಳಿಸಿದ ಜಪಾನ್​ ಪ್ರಧಾನಿ
ಜಪಾನ್​-ಭಾರತದ ಪ್ರಧಾನಿ
  • Share this:
ನವದೆಹಲಿ (ಡಿ.13): ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ ಜಪಾನ್​ ಪ್ರಧಾನಿ ಭಾರತದ ಪ್ರವಾಸ ರದ್ದುಗೊಳಿಸಿದ್ದಾರೆ.

ಜಪಾನ್​ ಪ್ರಧಾನಿ ಶಿಂಜೋ ಅಬೆ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಈ ಭಾನುವಾರ ಸಭೆ ನಿರ್ಧಾರವಾಗಿತ್ತು. ಈ ಸಭೆ ಅಸ್ಸಾಂನ ಗೌವಹತಿಯಲ್ಲಿ ಆಯೋಜಿಸಲಾಗಿತ್ತು. ಆದರೆ, ಈಶಾನ್ಯ ರಾಜ್ಯದಲ್ಲಿ ಪ್ರತಿಭಟನೆ ಉಲ್ಭಣಗೊಂಡ ಹಿನ್ನೆಲೆ ಈ ಪ್ರವಾಸವನ್ನು ರದ್ದು ಗೊಳಿಸಲಾಗಿದೆ ಎಂದು ರಾಯಿಟರ್​ ವರದಿ ಮಾಡಿದೆ.

ಇನ್ನು ಗುರುವಾರ ಬಾಂಗ್ಲಾದೇಶ ವಿದೇಶಾಂಗ ಸಚಿವ ಎಕೆ ಅಬ್ದುಲ್​ ಮೊಮೆನ್​ ಮತ್ತು ಗೃಹ ಸಚಿವರ ನಡುವೆ ಮೇಘಾಲಯದಲ್ಲಿ ಭೇಟಿ ನಿಗದಿಯಾಗಿತ್ತು. ಇದು ಕೂಡ ರದ್ದು ಗೊಂಡಿತಿಉ.

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕಳೆದೆರಡು ದಿನಗಳಿಂದ ಈಶಾನ್ಯ ರಾಜ್ಯದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿದೆ.  ಅಲ್ಲದೇ ಜಪಾನ್​ ಪ್ರಧಾನಿಗೆ ಸ್ವಾಗತ ಕೋರಿ ಗುವಾಹತಿಯಲ್ಲಿ ಹಾಕಿದ್ದ ಬ್ಯಾನರ್​ನ್ನು ಕಿತ್ತು ಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಡೆಯ ಕ್ಷಣದವರೆಗೂ ಈ ಭೇಟಿ ಬಗ್ಗೆ ಎರಡು ದೇಶದ ಸರ್ಕಾರಗಳು ಪ್ರಯತ್ನಿಸಿದವು. ಆದರೆ, ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಇದನ್ನು ಕೈಬಿಡಲಾಗಿದೆ.

ಇದನ್ನು ಓದಿ: ಅಸ್ಸಾಂನಲ್ಲಿ ಇಂದೂ ಮುಂದುವರಿದ ಪ್ರತಿಭಟನೆ ; ಸುಧಾರಣೆ ಕಾಣುತ್ತಿಲ್ಲ ಪರಿಸ್ಥಿತಿ, ಕರ್ಫ್ಯೂ ಮುಂದುವರಿಕೆ

ಇನ್ನು ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವರ ವಕ್ತಾರ ರವೀಶ್​ ಕುಮಾರ್​, ಈ ಭೇಟಿ ಕುರಿತು ಯಾವುದೇ ಮಾಹಿತಿ ಹಂಚಿಕೊಳ್ಳಲು ಇಲ್ಲ ಎಂದಿದ್ದಾರೆ.ಕಳೆದವಾರ ಮಾತನಾಡಿದ ಅವರು, ಪ್ರಧಾನಿ ಮೋದಿ ಅಬೆ ನಡುವೆ ಡಿ.15ರಿಂದ 17ರವರೆಗೆ ಸಭೆ ನಡೆಯಲಿದೆ ಎಂದು ಅವರು ತಿಳಿಸಿದ್ದರು.
Published by: Seema R
First published: December 13, 2019, 11:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading