HOME » NEWS » National-international » JAPAN PM SHINZO ABE SET TO ANNOUNCE RESIGNATION TODAY CITING WORSENING HEALTH RMD

ಅನಾರೋಗ್ಯ ಹಿನ್ನೆಲೆ; ಅಧಿಕಾರದಿಂದ ಕೆಳಗಿಳಿಯಲು ಮುಂದಾದ ಜಪಾನ್​ ಪ್ರಧಾನಿ ಶಿಂಜೋ ಅಬೆ?

ಇಂದು ಭಾರತೀಯ ಕಾಲಮಾನ ಸಂಜೆ 5 ಗಂಟೆಗೆ ಶಿಂಜೋ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಅವರು  ರಾಜೀನಾಮೆ ನೀಡುವ ಬಗ್ಗೆ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.  

news18-kannada
Updated:August 28, 2020, 12:29 PM IST
ಅನಾರೋಗ್ಯ ಹಿನ್ನೆಲೆ; ಅಧಿಕಾರದಿಂದ ಕೆಳಗಿಳಿಯಲು ಮುಂದಾದ ಜಪಾನ್​ ಪ್ರಧಾನಿ ಶಿಂಜೋ ಅಬೆ?
ಶಿಂಜೋ ಅಬೆ
  • Share this:
ನವದೆಹಲಿ (ಆಗಸ್ಟ್​ 28): ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಇಂದು ಅಧಿಕಾರದಿಂದ ಕೆಳಗಿಳಿಯುವ ಸಾಧ್ಯತೆ ಇದೆ. ಈ ಬಗ್ಗೆ ಜಪಾನ್​ನ ಮಾಧ್ಯಮಗಳು ವರದಿ ಮಾಡಿವೆ.

ಶಿಂಜೋ ಅಬೆ ಕಳೆದ ಎರಡು ವರ್ಷಗಳಿಂದ ಅಲ್ಸರೇಟಿವ್ ಕೊಲೈಟಿಸ್ ಹೆಸರಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಎದುರಾದರೆ ಜೀರ್ಣಾಂಗವ್ಯೂಹದಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಈ ಕಾರಣಕ್ಕೆ ಶಿಂಜೋ ಅಬೆ ಪದೇ ಪದೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದರಿಂದ ಸರ್ಕಾರ ಕಾರ್ಯಾಚರಣೆಗೆ ಅಡಚಣೆ ಉಂಟಾಗುತ್ತಿದೆ. ಹೀಗಾಗಿ ಶಿಂಜೋ ಇಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಾರಂತೆ. 2021 ಸೆಪ್ಟೆಂಬರ್​ ತಿಂಗಳಲ್ಲಿ ಅವರ ಅಧಿಕಾರಾವಧಿ ಪೂರ್ಣಗೊಳ್ಳುವುದರಲ್ಲಿತ್ತು.

ಇಂದು ಭಾರತೀಯ ಕಾಲಮಾನ ಸಂಜೆ 5 ಗಂಟೆಗೆ ಶಿಂಜೋ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಅವರು  ರಾಜೀನಾಮೆ ನೀಡುವ ಬಗ್ಗೆ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಪದವಿ ಪರೀಕ್ಷೆಯಿಲ್ಲದೆ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಪಾಸ್​​ ಮಾಡಲು ಸಾಧ್ಯವಿಲ್ಲ‘ - ಸುಪ್ರೀಂಕೋರ್ಟ್​

ಅನಾರೋಗ್ಯ ಕಾರಣಕ್ಕೆ 2007ರಲ್ಲಿ ಶಿಂಜೋ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಶಿಂಜೋ ಹೀನಾಯವಾಗಿ ಸೋತಿದ್ದರು. 2012ರಲ್ಲಿ ನಡೆದ ಸಾರ್ವತ್ರಿಕವಾಗಿ ಚುನಾವಣೆಯಲ್ಲಿ ಶಿಂಜೋ ಜಯಭೇರಿ ಬಾರಿಸಿದ್ದರು.
Youtube Video

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರದಲ್ಲಿ ಜಪಾನ್​ ಹಾಗೂ ಭಾರತದ ನಡುವಿನ ಸಂಬಂಧ ಮತ್ತಷ್ಟು ಉತ್ತಮವಾಗಿತ್ತು. ಅಹಮದಾಬಾದ್ ಹಾಗೂ ಮುಂಬೈ ನಡುವಿನ ಬುಲೆಟ್​ ರೈಲು ಯೋಜನೆಗೆ ಜಪಾನ್​ ತಂತ್ರಜ್ಞಾನ ಹಾಗೂ ಧನಸಹಾಯ ಮಾಡುತ್ತಿದೆ.
Published by: Rajesh Duggumane
First published: August 28, 2020, 12:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories