Seema.RSeema.R
|
news18-kannada Updated:February 13, 2020, 3:45 PM IST
ತಿರುಪತಿ ತಿಮ್ಮಪ್ಪ
ಹೈದ್ರಾಬಾದ್ (ಫೆ.13): ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲಿಯೇ ತಿರುಮಲ ತಿರುಪತಿಯ ದೇವಾಲಯ ಸ್ಥಾಪನೆಯಾಗಲಿದ್ದು, ಇದಕ್ಕಾಗಿ ಇಲ್ಲಿನ ಕೇಂದ್ರಾಡಳಿತ ಸರ್ಕಾರ 100 ಎಕರೆ ಜಾಗ ನೀಡಲು ಮುಂದಾಗಿದೆ.
ದೇವಾಲಯ ನಿರ್ಮಾಣಕ್ಕಾಗಿ ಜಮ್ಮು ಆಡಳಿತ ಏಳು ಸ್ಥಳಗಳನ್ನು ಗುರುತು ಮಾಡಿದೆ. ಅಷ್ಟೇ ಅಲ್ಲದೇ ತಿರುಮಲ
ತಿರುಪತಿ ದೇವಾಸ್ಥಾನಂ ಅಧಿಕಾರಿಗಳು ಕೂಡ ಯಾವ ಸ್ಥಳದಲ್ಲಿ ದೇವಾಸ್ಥಾನ ಕಟ್ಟುವುದು ಸೂಕ್ತ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಜಮ್ಮು ಕತ್ರಾ ಹೆದ್ದಾರಿ ಬಳಿ ಟಿಟಿಡಿಗೆ ಭೂಮಿ ನೀಡಲು ಜಮ್ಮು ಮತ್ತು ಕಾಶ್ಮೀರ ಆಡಳಿತ ಮುಂದಾಗಿದೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿಯವರನ್ನು ನಮ್ಮ ಅಧಿಕಾರಿಗಳು ಭೇಟಿಯಾಗಿದ್ದು, ಈ ಯೋಜನೆ ಕುರಿತು ವಿವರವಾದ ಚರ್ಚೆ ನಡೆಸಿದ್ದಾರೆ. ಉತ್ತರ ಭಾರತದ ಭಕ್ತರು ವೆಂಕಟೇಶ್ವರ ದೇವಾಲಯ ನಿರ್ಮಿಸುವಂತೆ ನಮಗೆ ಮನವಿ ಮಾಡುತ್ತಿದ್ದಾರೆ. ಈ ಹಿನ್ನೆಲೆ ಜಮ್ಮು ಮತ್ತು ಮುಂಬೈನಲ್ಲಿ ದೇವಾಲಯ ನಿರ್ಮಾಣ ಮಾಡಲು ಮುಂದಾಗಿದ್ದು, ಶೀಘ್ರದಲ್ಲಿಯೇ ಈ ಕಾರ್ಯ ಮುಗಿಸುತ್ತೇವೆ ಎಂದು ಟಿಟಿಡಿ ಆಡಳಿತ ಮಂಡಳಿ ಸದಸ್ಯ ಪುಟ್ಟ ಪ್ರತಾಪ್ ರೆಡ್ಡಿ ತಿಳಿಸಿದರು.
ಇದನ್ನು ಓದಿ: Janhvi Kapoor: ಬರಿಗಾಲಿನಲ್ಲಿ ತಿರುಪತಿ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಜಾಹ್ನವಿ ಕಪೂರ್..!
ಇದರ ಹೊರತಾಗಿ ಟಿಟಿಡಿ ಹರ್ಯಾಣದ ಕುರುಕ್ಷೇತ್ರದಲ್ಲಿ ವೇದ ಪಾಠಶಾಲೆಯನ್ನು ನಿರ್ಮಾಣ ಮಾಡುವ ಯೋಜನೆ ಇದೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಬಾಂದ್ರಾ ಬಳಿಕ ದೇವಾಲಯ ನಿರ್ಮಾಣಕ್ಕೆ ಸ್ಥಳ ನೀಡಿದೆ ಎಂದರು.
(ವರದಿ : ಮೆದಾಬಯಾನಿ ಬಾಲಕೃಷ್ಣ)
First published:
February 13, 2020, 3:21 PM IST