HOME » NEWS » National-international » JANATA CURFEW FOR 15 DAYS FROM TOMORROW IN MAHARASHTRA HG

No Lockdown: ಮಹಾರಾಷ್ಟ್ರದಲ್ಲಿ 15 ದಿನಗಳ ಕಾಲ ಜನತಾ ಕರ್ಫ್ಯೂ; ಯಾವುದಕ್ಕೆಲ್ಲಾ ನಿರ್ಬಂಧ ಗೊತ್ತಾ?

ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ಲಾಕ್​ಡೌನ್ ನಿರ್ಧಾರದ ಬದಲು ಸೆಮಿ ಲಾಕ್​ಡೌನ್ ಮೊರೆ ಹೋಗಿದೆ. ನಾಳೆಯಿಂದ 15 ದಿನಗಳ ಕಾಲ ರಾಜ್ಯಾದ್ಯಂತ ಜನತಾ ಕರ್ಫ್ಯೂಯನ್ನು ಜಾರಿಗೊಳಿಸಲಾಗಿದೆ.

news18-kannada
Updated:April 14, 2021, 8:28 AM IST
No Lockdown: ಮಹಾರಾಷ್ಟ್ರದಲ್ಲಿ 15 ದಿನಗಳ ಕಾಲ ಜನತಾ ಕರ್ಫ್ಯೂ; ಯಾವುದಕ್ಕೆಲ್ಲಾ ನಿರ್ಬಂಧ ಗೊತ್ತಾ?
ಪ್ರಾತಿನಿಧಿಕ ಚಿತ್ರ
  • Share this:
ಮುಂಬೈ: ದೇಶದಲ್ಲಿ ಕೊರೋನಾ 2ನೇ ಅಲೆಯಿಂದ ತೀವ್ರವಾಗಿ ತತ್ತರಿಸಿರುವ ರಾಜ್ಯ ಮಹಾರಾಷ್ಟ್ರ. ದಿನೇ ದಿನೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿದ್ದು, ಸೋಂಕಿನ ಚೈನ್ ಕಟ್ ಮಾಡುವ ಸಲುವಾಗಿ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯವನ್ನುದ್ದೇಶಿಸಿ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಇರುವುದಿಲ್ಲ. ಆದರೆ ನಾಳೆಯಿಂದ 15 ದಿನಗಳ ಕಾಲ ಜನತಾ ಕರ್ಫ್ಯೂ ಇರಲಿದೆ ಎಂದು ಘೋಷಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ಲಾಕ್​ಡೌನ್ ನಿರ್ಧಾರದ ಬದಲು ಸೆಮಿ ಲಾಕ್​ಡೌನ್ ಮೊರೆ ಹೋಗಿದೆ. ನಾಳೆಯಿಂದ 15 ದಿನಗಳ ಕಾಲ ರಾಜ್ಯಾದ್ಯಂತ ಜನತಾ ಕರ್ಫ್ಯೂಯನ್ನು ಜಾರಿಗೊಳಿಸಲಾಗಿದೆ. ನಾಳೆ ರಾತ್ರಿ 8 ಗಂಟೆಯಿಂದ ಇಡೀ ರಾಜ್ಯದಲ್ಲಿ 144 ಸೆಕ್ಷನ್ ಜಾರಿಯಾಗಲಿದೆ. ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಜನರ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ. ಅನಗತ್ಯವಾಗಿ ಮನೆಯಿಂದ ಹೊರಬರದೆ ಜತನಾ ಕರ್ಫ್ಯೂವನ್ನು ಪಾಲಿಸಬೇಕು ಎಂದು ಸಿಎಂ ಉದ್ಧವ್ ಠಾಕ್ರೆ ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕ ಬಸ್ ಸೇವೆ, ರೈಲುಗಳು ಲಭ್ಯವಿರಲಿದೆ. ಪೆಟ್ರೋಲ್ ಬಂಕ್ಗಳು, ಸೇಬಿಗೆ ಬಂಧಿಸಿದ ಆರ್ಥಿಕ ಕಚೇರಿಗಳು, ನಿರ್ಮಾಣ ಕಾರ್ಯಗಳು ಎಂದಿನಂತೆ ನಡೆಲಿವೆ. ಹೋಟೆಲ್-ರೆಸ್ಟೋರೆಂಟ್ಗಳಲ್ಲೇ ಆಹಾರ ಸೇವಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಕೇವಲ ಪಾರ್ಸೆಲ್, ಹೋಂ ಡಿಲಿವರಿ ಸೇವೆಗಳು ಮಾತ್ರ ಲಭ್ಯವಿರಲಿದೆ.

ಮಾಲ್​ಗಳು, ಶಾಪ್​ಗಳು, ಸಿನಿಮಾ ಮಂದಿರಗಳು, ಆಡಿಟೋರಿಯಂಗಳು, ಜಿಮ್, ಈಜುಕೊಳಗಳು, ಕ್ರೀಡಾಂಗಣಗಳು, ಪಾರ್ಕ್ಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸಾರ್ವಜನಿಕ ಸಭೆ, ಸಮಾರಂಭಗಳು, ಧಾರ್ಮಿಕ ಉತ್ಸವಗಳಿಗೆ ಸಂಪೂರ್ಣ ನಿರ್ಬಂಧವೇರಲಾಗಿದೆ. ಸಿನಿಮಾ ಹಾಗೂ ಧಾರವಾಹಿ ಚಿತ್ರೀಕರಣಕ್ಕೂ ಅವಕಾಶವಿಲ್ಲ. ಅಗತ್ಯ ಸೇವೆಗಳಾದ ಆಸ್ಪತ್ರೆ, ಆಹಾರ ಸಂಬಂಧಿತ ಸೇವೆಗಳು ಮಾತ್ರ ಅಭಾದಿತ ಎಂದು ಸಿಎಂ ಉದ್ಧವ್ ಠಾಕ್ರೆ ತಮ್ಮ ಅಧಿಕೃತ ಆದೇಶದಲ್ಲಿ ತಿಳಿಸಿದ್ದಾರೆ. ನಾಳೆ ರಾತ್ರಿ 8 ಗಂಟೆಯಿಂದ ಮೇ 1ರವರೆಗೆ ಜನತಾ ಕರ್ಫ್ಯೂ ಜಾರಿಯಲ್ಲಿರಲಿದೆ.

ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ 5,400 ಕೋಟಿ ರೂ. ಮೀಸಲಿಡಲಾಗುವುದು. ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಜಿಎಸ್ಟಿ ರಿಟನ್ಸ್​​ಗೆ 3 ತಿಂಗಳು ಕಾಲವಕಾಶ ನೀಡಲಾಗುವುದು. 7 ಕೋಟಿ ಫಲಾನುಭವಿಗಳಿಗೆ 3 ಕೆಜಿ ಗೋಧಿ ಮತ್ತು 2 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು. ಈ ಅವಧಿಯಲ್ಲಿ 2 ಲಕ್ಷ ಫಲಾನುಭವಿಗಳಿಗೆ ಶಿವ ಭೋಜನ್ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು. ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ 1,500 ರೂ. ನೆರವು ಹಾಗೂ ಮನೆ ಕೆಲಸದವರಿಗೆ 1,500 ರೂ. ನೆರವು ನೀಡಲಾಗುವುದು ಎಂದು ಸಿಎಂ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಬೆಡ್​​ಗಳು, ಆಕ್ಸಿಜನ್ ಕೊರತೆಯಿರುವುದನ್ನು ಒಪ್ಪಿಕೊಂಡ ಸಿಎಂ ಉದ್ಧವ್ ಠಾಕ್ರೆ ಇದಕ್ಕಾಗಿ ಕೇಂದ್ರ ಸರ್ಕಾರದ ಸಹಾಯ ಕೇಳಲಿದ್ದೇವೆ ಎಂದು ಇದೇ ವೇಳೆ ತಿಳಿಸಿದರು. ಇತರ ರಾಜ್ಯಗಳಿಂದ ಆಕ್ಸಿಜನ್ ರವಾನಿಸಲು ವಿಮಾನಕ್ಕಾಗಿ ಪ್ರಧಾನಿ ಮೋದಿ ಅವರಿಗೆ ವಿನಂತಿಸುತ್ತೇನೆ. ರಾಜ್ಯದಲ್ಲಿ ವ್ಯಾಕ್ಸಿನೇಷನ್ ಕಾರ್ಯವನ್ನು ಹೆಚ್ಚಿಸಬೇಕಿದೆ. ರಾಜ್ಯದ ವೈದ್ಯಕೀಯ ವಲಯದ ಮೇಲೆ ಭಯಂಕರ ಒತ್ತಡವಿದೆ. ಅದನ್ನು ಮೀರಿ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ಶ್ರಮಿಸುತ್ತಿದ್ದೇವೆ. ರಾಜ್ಯದ ಜನತೆ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ನಾವು ಈ ಸಂಕಷ್ಟ ಕಾಲದಿಂದ ಪಾರಾಗಲು ಸಾಧ್ಯ ಎಂದರು.  ಇನ್ನು ಮಹಾರಾಷ್ಟ್ರದಲ್ಲಿ ಇಂದು 60,212 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
Published by: Harshith AS
First published: April 13, 2021, 9:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories