ಆಂಧ್ರ ರಾಜಕಾರಣದಲ್ಲಿ ಪವನ್​​​​ ಸಕ್ರಿಯ ಓಡಾಟ​​; ಮುಂದಿನ ಚುನಾವಣೆ ಗೆಲ್ಲಲು ಈಗಿನಿಂದಲೇ ಕಸರತ್ತು

ಕಳೆದ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಘೋರ ಪರಾಭವ ಅನುಭವಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪವನ್ ಕಲ್ಯಾಣ್ ಎರಡರಲ್ಲೂ ಸೋಲುಂಡಿದ್ದಾರೆ.

Ganesh Nachikethu | news18
Updated:August 7, 2019, 9:07 PM IST
ಆಂಧ್ರ ರಾಜಕಾರಣದಲ್ಲಿ ಪವನ್​​​​ ಸಕ್ರಿಯ ಓಡಾಟ​​; ಮುಂದಿನ ಚುನಾವಣೆ ಗೆಲ್ಲಲು ಈಗಿನಿಂದಲೇ ಕಸರತ್ತು
ಪವನ್ ಕಲ್ಯಾಣ್
Ganesh Nachikethu | news18
Updated: August 7, 2019, 9:07 PM IST
ನವದೆಹಲಿ(ಆಗಸ್ಟ್​.07): ಇತ್ತೀಚೆಗಿನ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಹೈರಾಣಾಗಿದ್ದ ಜನಸೇನೆ ಅಧ್ಯಕ್ಷ ಪವನ್​​ ಕಲ್ಯಾಣ್​​ ಮತ್ತೆ ಸಕ್ರಿಯ ರಾಜಕೀಯಕ್ಕೆ ವಾಪಸ್ಸಾಗಿದ್ದಾರೆ. ಈ ತಿಂಗಳಿನಿಂದಲೇ ಸೋಲಿನ ಪರಾಮರ್ಶೆ ಸಂಬಂಧ ಸಾಲುಸಾಲು ಸಭೆಗಳನ್ನು ನಡೆಸಲಿದ್ದಾರಂತೆ. ಮುಂದಿನ ಚುನಾವಣೆ ಗೆಲ್ಲಲು ಇಂದಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.

ಆಂಧ್ರ ಪ್ರದೇಶದ ವಿಜಯವಾಡ, ಮಂಗಳಗಿರಿ, ಕಾಕಿನಾಡ, ನರಸಾಪುರಂ ಕ್ಷೇತ್ರದಲ್ಲಿ ಸಭೆಗಳನ್ನು ಆಯೋಜಿಸಲಾಗಿದೆ. ರಾಜ್ಯಾದ್ಯಂತ ಸ್ಥಳೀಯ ಮಟ್ಟದಲ್ಲಿ ಪಕ್ಷ ಬಲಪಡಿಸುವ ಉದ್ದೇಶದೊಂದಿಗೆ ಈ ಸಭೆಗಳನ್ನು ಮಾಡಲಿದ್ದಾರಂತೆ. ಬಳಿಕ ಹಿರಿಯ ನಾಯಕರ ಸಲಹೆಯಂತೇ ಸಣ್ಣಪುಟ್ಟ ಸಮುದಾಯಗಳ ಉತ್ಸಾಹಿ ಮುಂದಾಳುಗಳನ್ನು ಗುರುತಿಸಿ ಪಕ್ಷ ಸಂಘಟನೆ ಚುರುಕುಗೊಳಿಸಲಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚೆಗಷ್ಟೇ ಜನಸೇನಾ ಪಕ್ಷದಿಂದ ಅಧಿಕೃತವಾಗಿ ಪತ್ರಿಕೆಯೊಂದನ್ನು ಹೊರತರಬೇಕೆಂದು ಪವನ್​​ ನಿರ್ಣಯಿಸಿದರು. ಪತ್ರಿಕೆಯಲ್ಲಿ ವಿದೇಶಿ ಆರ್ಥಿಕ ನೀತಿ, ರಾಜ್ಯದ ಅಭಿವೃದ್ದಿ, ಸರ್ಕಾರದ ಲೋಪದೋಷಗಳು ಎತ್ತಿ ತೋರಿಸಲಾಗುವುದು ಎಂದು ಹೇಳಲಾಗುತ್ತಿತ್ತು.

ಕಳೆದ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಘೋರ ಪರಾಭವ ಅನುಭವಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪವನ್ ಕಲ್ಯಾಣ್ ಎರಡರಲ್ಲೂ ಸೋಲುಂಡಿದ್ದಾರೆ.

ಇದನ್ನೂ ಓದಿ: ಜನಸೇನೆ ಪಕ್ಷ ಸಂಘಟನೆಗೆ ಮುಂದಾದ ಪವನ್​​ ಕಲ್ಯಾಣ್​​: ಸದ್ಯದಲ್ಲೇ ರಾಜ್ಯ ಸಮಿತಿ ವಿಸರ್ಜನೆ

ಈ ಬಾರಿ ಚುನಾವಣೆಯಲ್ಲಿ ಯಾವುದೇ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಕಣಕ್ಕೆ ಇಳಿದಿದ್ದ ಪವನ್ ಕಲ್ಯಾಣ್, ಜನಸೇನ ಪಕ್ಷದ ಸಾರಥ್ಯ ವಹಿಸಿದ್ದರು. ಆರಂಭದಲ್ಲಿ ಕಿಂಗ್ ಮೇಕರ್ ಆಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು.

ಜನಸೇನ ಪಕ್ಷ ಅಷ್ಟೆಲ್ಲಾ ಪ್ರಭಾವ ಬೀರದಿದ್ದರೂ, ಪವನ್ ಕಲ್ಯಾಣ್ ಮಾತ್ರ ವಿಧಾನಸಭೆಗೆ ಅಡಿಯಿಡಲಿದ್ದಾರೆ ಎಂದೇ ಊಹಿಸಲಾಗಿತ್ತು. ಆದರೆ ಆಂಧ್ರ ಜನರ ತೀರ್ಪು ಎಲ್ಲಾ ಊಹಾಪೋಹಗಳನ್ನೂ ತಲೆಕೆಳಗೆ ಮಾಡಿದೆ.
Loading...

ಗಾಜುವಾಕ ಕ್ಷೇತ್ರದಲ್ಲಿ ಪವನ್ ಸೋಲು ಸ್ವಲ್ಪ ಮುಂಚಿತವಾಗಿಯೇ ಗೊತ್ತಾಗಿತ್ತು. ಆದರೆ ಭೀಮಾವರಂನಲ್ಲಿ ಮಾತ್ರ ತನ್ನ ಪ್ರತಿಸ್ಪರ್ಧಿಯಾಗಿರುವ ವೈಎಸ್‌ಆರ್‌ಸಿಪಿ ಅಭ್ಯರ್ಥಿ ಗ್ರಂಥಿ ಶ್ರೀನು ಜತೆಗೆ ಜಿದ್ದಾಜಿದ್ದಿನ ಸ್ಪರ್ಧೆ ಎದುರಾಗಿತ್ತು. ಅಂತಿಮವಾಗಿ ವೈಎಸ್‌ಆರ್‌ಸಿಪಿ ಅಭ್ಯರ್ಥಿ ಮೇಲುಗೈ ಸಾಧಿಸಿದ್ದರು.

ಇದನ್ನೂ ಓದಿ: ಪವನ್​​ ಕಲ್ಯಾಣ್​​ ಗೆದ್ದಿದ್ದರೆ ಸಂತೋಷ ಪಡುತ್ತಿದ್ದೆ: ಹೀಗೆಂದ ಎದುರಾಳಿ ಯಾರು?

ವಿಶಾಖದಲ್ಲಿನ ಗಾಜುವಾಕ ಅಥವಾ ಭೀಮವರಂನಲ್ಲಿ ಕನಿಷ್ಠ ಒಂದು ಕಡೆಯಾದರೂ ಪವನ್ ಕಲ್ಯಾಣ್ ಗೆಲ್ಲುತ್ತಾರೆ ಎಂದೇ ಜನಸೇನ ಮೂಲಗಳು ಭಾವಿಸಿದ್ದವು. ಆದರೆ ಮತ ಎಣಿಕೆ ಕಾರ್ಯ ಆರಂಭವಾದ ಕ್ಷಣದಿಂದ ಪವನ್ ಯಾವ ಹಂತದಲ್ಲೂ ಮುನ್ನಡೆ ಸಾಧಿಸಲಿಲ್ಲ. ಮೊದಲು ಗಾಜುವಾಕದಲ್ಲಿ ಸೋತ ಪವನ್ ಕಲ್ಯಾಣ್ ಭೀಮಾವರಂನಲ್ಲಿ ಗೆಲ್ಲುತ್ತಾರೆಂದು ಅಭಿಮಾನಿಗಳು ಭಾವಿಸಿದ್ದರು. ಕೊನೆಗೆ ಅಲ್ಲೂ ಗೆಲುವು ಸಾಧಿಸಲಿಲ್ಲ.

-----------------------
First published:August 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...