Pawan Kalyan: ಕೊರೋನಾ ವಿರುದ್ಧ ಹೋರಾಡಲು ಎರಡು ಕೋಟಿ ನೀಡಲು ನಿರ್ಧರಿಸಿದ ಪವನ್​ ಕಲ್ಯಾಣ್​..!

Pawan Kalyan Donates 2 Crore: ಆಯಾ ರಾಜ್ಯ ಸರ್ಕಾರಗಳು ಕೊರೋನಾ ತಡೆಗಾಗಿ ಪ್ರತ್ಯೇಕ ನಿಧಿಯನ್ನು ಮೀಸಲಿಡುತ್ತಿವೆ. ಅಲ್ಲದೆ ಸೆಲೆಬ್ರಿಟಿಗಳೂ ಸಹ ಬಡ ಕಲಾವಿದರಿಗಾಗಿ ಹಣ ಸಹಾಯ ಮಾಡುತ್ತಿದ್ದಾರೆ. ಈಗ ಜನಸೇನಾ ಮುಖ್ಯ ಹಾಗೂ ನಟ ಪವನ್​ ಕಲ್ಯಾಣ್​ ಸಹ ಧನ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

Anitha E | news18-kannada
Updated:March 26, 2020, 11:12 AM IST
Pawan Kalyan: ಕೊರೋನಾ ವಿರುದ್ಧ ಹೋರಾಡಲು ಎರಡು ಕೋಟಿ ನೀಡಲು ನಿರ್ಧರಿಸಿದ ಪವನ್​ ಕಲ್ಯಾಣ್​..!
ಪವನ್​ ಕಲ್ಯಾಣ್​ 
  • Share this:
ವಿಶ್ವದೆಲ್ಲೆಡೆ ಕೊರೋನಾ ಕರಾಳ ನರ್ತನದಿಂದಾಗಿ ಜನರು ತತ್ತರಿಸಿದ್ದಾರೆ. ಇದೇ ವೇಳೆ ಈ ಮಹಾಮಾರಿ ಹರಡದಂತೆ ತಡೆಯೋಲು 21 ದಿನಗಳಕಾಲ ಇಡೀ ದೇಶವನ್ನು ಲಾಕ್​ಡೌನ್​ ಮಾಡಲಾಗಿದೆ.

ಮತ್ತೊಂದು ಕಡೆ ಆಯಾ ರಾಜ್ಯ ಸರ್ಕಾರಗಳು ಕೊರೋನಾ ತಡೆಗಾಗಿ ಪ್ರತ್ಯೇಕ ನಿಧಿಯನ್ನು ಮೀಸಲಿಡುತ್ತಿವೆ. ಅಲ್ಲದೆ ಸೆಲೆಬ್ರಿಟಿಗಳೂ ಸಹ ಬಡ ಕಲಾವಿದರಿಗಾಗಿ ಹಣ ಸಹಾಯ ಮಾಡುತ್ತಿದ್ದಾರೆ. ಈಗ ಜನಸೇನಾ ಮುಖ್ಯ ಹಾಗೂ ನಟ ಪವನ್​ ಕಲ್ಯಾಣ್​ ಸಹ ಧನ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

Pawan Kalyan starrer Vakeel Saab movie released date may get postponed
ಪವನ್​ ಕಲ್ಯಾಣ್​


ನಟ ಪವನ್​ ಕಲ್ಯಾಣ್​ ಕೊರೋನಾ ವಿರುದ್ಧ ಹೋರಾಡಲು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ಹಣ ನೀಡುವುದಾಗಿ ಟ್ವೀಟ್​ ಮಾಡಿದ್ದಾರೆ. ಇಂತಹ ಸಮಯದಲ್ಲಿ ಪ್ರಧಾನಿ ಅವರಿಗೆ ಬೆಂಬಲ ನೀಡಲು ಧನ ಸಹಾಯ ಮಾಡಲು ನಿರ್ಧರಿಸಿರುವುದಾಗಿ ಟ್ವೀಟ್​ನಲ್ಲಿ ಪವರ್​ ಸ್ಟಾರ್​ ವಿವರಿಸಿದ್ದಾರೆ.


ಅದರಂತೆ ಆಂಧ್ರ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 50 ಲಕ್ಷ ಕೊಡುವುದಾಗಿ ಪವನ್​ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.ನಟ ನಿತಿನ್​ ಸಹ ಈಗಾಗಲೇ ಆಂಧ್ರ ಹಾಗೂ ತೆಲಂಗಾಣ ಸರ್ಕಾರಕ್ಕೆ ತಲಾ 10 ಲಕ್ಷ ಹಣ ನೀಡಿದ್ದಾರೆ. ಉಳಿದಂತೆ ಬಡ ಕಲಾವಿದರಿಗಾಗಿ ರಜಿನಿಕಾಂತ್​, ಸೂರ್ಯ, ಕಾರ್ತಿ ಸಹ ಹಣ ಸಹಾಯ ಮಾಡಿದ್ದಾರೆ.

Nikhil-Revathi: ಬೇವು ಬೆಲ್ಲ ಹಂಚಿಕೊಂಡು ಸುಖ-ದುಖಃದಲ್ಲಿ ಸಮಪಾಲು ಸ್ವೀಕರಿಸುವುದಾಗಿ ಸಾರಿದ ನಿಖಿಲ್​-ರೇವತಿ..! 

 
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading