HOME » NEWS » National-international » JAMMU MAN CHARGESHEETED FOR USING DEAD BROTHERS CERTIFICATES TO GET GOVT JOB STG LG

ಸರ್ಕಾರಿ ಕೆಲಸಕ್ಕಾಗಿ ಮೃತ ಸಹೋದರನ ಶಿಕ್ಷಣ ಪ್ರಮಾಣ ಪತ್ರ ಬಳಸಿದವನ ವಿರುದ್ಧ ಚಾರ್ಜ್‍ಶೀಟ್

ಶಕ್ತಿ ಬಂಧುವಿನ ಸಹೋದರನ ಹೆಸರು ಅಶೋಕ್ ಕುಮಾರ್. ಇವರು ದಕ್ಷಿಣ ಕಾಶ್ಮೀರದಲ್ಲಿರುವ ಅನಂತನಾಗ್ ಜಿಲ್ಲೆಯಲ್ಲಿರುವ ಕಾಲೇಜಿನಲ್ಲಿ 2ನೇ ವರ್ಷದ ಪದವಿಯನ್ನು 1977ರಲ್ಲಿ ಪೂರೈಸಿದ್ದರು. ತದನಂತರ ಇವರು ಕೆಲವು ವರ್ಷಗಳ ಬಳಿಕ ತೀರಿಕೊಂಡರು. ಆಗ 9ನೇ ತರಗತಿಯನ್ನೂ ಪಾಸಾಗದ ಶಕ್ತಿ ಬಂಧು ಅಶೋಕ್ ಕುಮಾರ್ ಅವರ ಪ್ರಮಾಣಪತ್ರಗಳನ್ನು ಪಡೆದುಕೊಂಡು ಐಎಮ್‍ಪಿಎ ಇಲಾಖೆಯ ಅಧಿಕಾರಿಗಳನ್ನು ಒಪ್ಪಿಸಿ ಕೆಲಸ ಪಡೆದುಕೊಂಡಿದ್ದಾರೆ.

news18-kannada
Updated:April 5, 2021, 12:22 PM IST
ಸರ್ಕಾರಿ ಕೆಲಸಕ್ಕಾಗಿ ಮೃತ ಸಹೋದರನ ಶಿಕ್ಷಣ ಪ್ರಮಾಣ ಪತ್ರ ಬಳಸಿದವನ ವಿರುದ್ಧ ಚಾರ್ಜ್‍ಶೀಟ್
ಸಾಂದರ್ಭಿಕ ಚಿತ್ರ
  • Share this:
ಮೃತ ಸಹೋದರನ ವಿದ್ಯಾಭ್ಯಾಸದ ಅರ್ಹತಾ ಪ್ರಮಾಣ ಪತ್ರ ಉಪಯೋಗಿಸಿಕೊಂಡು ಸರ್ಕಾರಿ ನೌಕರಿ ಪಡೆದುಕೊಂಡ ವ್ಯಕ್ತಿಯನ್ನು ಬಂಧಿಸಿದ ಜಮ್ಮು ಕಾಶ್ಮೀರದ ಅಪರಾಧಿ ವಿಭಾಗದ ಪೊಲೀಸರು ಆತನ ವಿರುದ್ಧ ಆರೋಪಪಟ್ಟಿ ದಾಖಲಿಸಿ ವಿಚಾರಣೆ ಕೈಗೊಂಡಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ಶಕ್ತಿ ಬಂಧು ಅಲಿಯಾಸ್ ಕಾಕಾ ಜಿ ಎಂಬ ವ್ಯಕ್ತಿ ಕೃತ್ಯ ಎಸಗಿದ್ದು, ಇವರು ಮೂಲತಃ ಪುಲ್ವಾಮದ ಅಚಾನ ಗ್ರಾಮದವರಾಗಿದ್ದು, ಪ್ರಸ್ತುತ ಜಮ್ಮುವಿನ ಪೋನಿಚೆಕ್‍ನಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಾರ್ಚ್ 3ರಂದು ಚಾರ್ಜ್ ಶೀಟ್ ದಾಖಲಿಸಿದ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದು, ಈ ವೇಳೆ ಶಕ್ತಿ ಬಂಧು 9ನೇ ತರಗತಿಯನ್ನು ಸಹ ಪಾಸಾಗಿಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಸಾರ್ವಜನಿಕ ಆಡಳಿತ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ (ಐಎಮ್‍ಪಿಎ) ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರು ಅವರು ಶಕ್ತಿ ಬಂಧು ತಮ್ಮ ಸಹೋದರ ಅಶೋಕ್ ಕುಮಾರ್ ಅವರ ವಿದ್ಯಾಭ್ಯಾಸ ಪತ್ರಗಳನ್ನು ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ದೂರಿನನ್ವಯ ಶಕ್ತಿ ಬಂಧು ವಿರುದ್ಧ ಚಾರ್ಜ್‍ಶೀಟ್ ದಾಖಲಿಸಲಾಗಿದೆ ಎಂದು ಜಮ್ಮುವಿನ ಅಪರಾಧಿ ವಿಭಾಗದ ಪೊಲೀಸರು ತಿಳಿಸಿದರು.

ಆರನೇ ವೇತನ ಆಯೋಗ ಜಾರಿಗೆ ಆಗ್ರಹ; ಬೇಡಿಕೆ ಈಡೇರದಿದ್ದರೆ ಏಪ್ರಿಲ್ 7ರಿಂದ ಸಾರಿಗೆ ಮುಷ್ಕರ ನಿಶ್ಚಿತ

ದೂರಿನಲ್ಲಿ ಏನಿದೆ?

ಶಕ್ತಿ ಬಂಧುವಿನ ಸಹೋದರನ ಹೆಸರು ಅಶೋಕ್ ಕುಮಾರ್. ಇವರು ದಕ್ಷಿಣ ಕಾಶ್ಮೀರದಲ್ಲಿರುವ ಅನಂತನಾಗ್ ಜಿಲ್ಲೆಯಲ್ಲಿರುವ ಕಾಲೇಜಿನಲ್ಲಿ 2ನೇ ವರ್ಷದ ಪದವಿಯನ್ನು 1977ರಲ್ಲಿ ಪೂರೈಸಿದ್ದರು. ತದನಂತರ ಇವರು ಕೆಲವು ವರ್ಷಗಳ ಬಳಿಕ ತೀರಿಕೊಂಡರು. ಆಗ 9ನೇ ತರಗತಿಯನ್ನೂ ಪಾಸಾಗದ ಶಕ್ತಿ ಬಂಧು ಅಶೋಕ್ ಕುಮಾರ್ ಅವರ ಪ್ರಮಾಣಪತ್ರಗಳನ್ನು ಪಡೆದುಕೊಂಡು ಐಎಮ್‍ಪಿಎ ಇಲಾಖೆಯ ಅಧಿಕಾರಿಗಳನ್ನು ಒಪ್ಪಿಸಿ ಕೆಲಸ ಪಡೆದುಕೊಂಡಿದ್ದಾರೆ. ಇವರು ಇದೇ ಸುಳ್ಳಿನ ಮೇಲೆ 30 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಜಮ್ಮುವಿನ ಅಪರಾಧಿ ವಿಭಾಗದಲ್ಲಿ ಪ್ರಕರಣ ದಾಖಲಿಸಿಕೊಂಡು ನಿಷ್ಠುರವಾಗಿ ತನಿಖೆ ಕೈಗೊಳ್ಳಲಾಗುತ್ತಿದೆ. ಐಎಮ್‍ಪಿಎ ಇಲಾಖೆ, ಶ್ರೀನಗರದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಬೋರ್ಡಿಂಗ್ ಸ್ಕೂಲ್, ಅಚಾನ್‍ನ ಪ್ರೌಢಶಾಲೆ, ಅಚಾನ್‍ನ ಸರ್ಕಾರಿ ಹುಡುಗರ ಶಾಲೆಯಿಂದಲೂ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.ಶಕ್ತಿ ಬಂಧು ಎಸಗಿದ ಕೃತ್ಯಗಳ ಆಧಾರದ ಮೇಲೆ ಅಪರಾಧ ವಿಭಾಗವು ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದೆ. ಇವರ ಈ ವರ್ತನೆ ಭಾರತೀಯ ದಂಡ ಸಂಹಿತೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಸಹೋದರ ಅಶೋಕ್ ಕುಮಾರ್ ಅವರ ಅರ್ಹತಾ ಪ್ರಮಾಣ ಪತ್ರಗಳನ್ನು ನೀಡಿ ಐಎಮ್‍ಪಿಎಯಲ್ಲಿ 30 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಶಕ್ತಿ ಬಂಧುವಿನ ಹೇಳಿಕೆಗಳು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ಮುಂದುವರೆಸಲಾಗಿದೆ. ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು.
Published by: Latha CG
First published: April 5, 2021, 12:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories