ಜಮ್ಮು ಕಾಶ್ಮೀರದಲ್ಲಿ ಗೃಹ ಬಂಧನದಲ್ಲಿದ್ದ ಮೂವರು ರಾಜಕಾರಣಿಗಳ ಬಿಡುಗಡೆ; ಮುಫ್ತಿಗಿಲ್ಲ ಬಿಡುಗಡೆ ಭಾಗ್ಯ

ಜಮ್ಮು ಕಾಶ್ಮೀರದಲ್ಲಿ ಕಳೆದ 2 ತಿಂಗಳಿಂದ ಗೃಹಬಂಧನದಲ್ಲಿರಿಸಿದ್ದ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇಂದು ಮೂವರು ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗಿದೆ.

news18-kannada
Updated:October 10, 2019, 1:18 PM IST
ಜಮ್ಮು ಕಾಶ್ಮೀರದಲ್ಲಿ ಗೃಹ ಬಂಧನದಲ್ಲಿದ್ದ ಮೂವರು ರಾಜಕಾರಣಿಗಳ ಬಿಡುಗಡೆ; ಮುಫ್ತಿಗಿಲ್ಲ ಬಿಡುಗಡೆ ಭಾಗ್ಯ
ಸಾಂದರ್ಭಿಕ ಚಿತ್ರ
  • Share this:
ಶ್ರೀನಗರ (ಅ.10): ಜಮ್ಮು ಕಾಶ್ಮೀರದಲ್ಲಿ ಆಗಸ್ಟ್​. 5ರಂದು 370ನೇ ವಿಧಿಯನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಸ್ಥಳೀಯ ರಾಜಕೀಯ ನಾಯಕರನ್ನು ಗೃಹಬಂಧನಲ್ಲಿರಿಸಿತ್ತು. ಈ ಪೈಕಿ ಮೂವರು ರಾಜಕೀಯ ನಾಯಕರನ್ನು ಉತ್ತಮ ನಡತೆಯ ಆಧಾರದ ಮೇಲೆ ಇಂದು ಬಿಡುಗಡೆ ಮಾಡಲಾಗಿದೆ.

370ನೇ ವಿಧಿ ರದ್ದುಗೊಳಿಸುವ ಹಿಂದಿನ ರಾತ್ರಿ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ, ಫಾರೂಕ್​ ಅಬ್ದುಲ್ಲಾ ಅವರನ್ನು ವಶಕ್ಕೆ ಪಡೆದು ಗೃಹಬಂಧನದಲ್ಲಿ ಇರಿಸಲಾಗಿತ್ತು. ಹಿರಿಯ ರಾಜಕೀಯ ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಪ್ರತಿಭಟಿಸಿದ್ದ ಕಾಂಗ್ರೆಸ್​ ಜಮ್ಮು-ಕಾಶ್ಮೀರದ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಘೋಷಿಸಿತ್ತು.

ಅಲ್ಲದೆ, ಕಳೆದ 2 ತಿಂಗಳಿಂದ ಗೃಹಬಂಧನದಲ್ಲಿರಿಸಿದ್ದ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಬೇಕೆಂಬ ಒತ್ತಾಯಗಳು ಕಣಿವೆ ರಾಜ್ಯದ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಲೇ ಇತ್ತು. ಈ ಬೆನ್ನಲ್ಲೇ ಇಂದು ಮೂವರು ರಾಜಕೀಯ ನಾಯಕರನ್ನು ಬಿಡುಗಡೆ ಮಾಡಿ ಜಮ್ಮು ಕಾಶ್ಮೀರ ರಾಜ್ಯಾಪಾಲರು ಆದೇಶಿಸಿದ್ದಾರೆ. ಆ. 5ರಿಂದ ಗೃಹಬಂಧನದಲ್ಲಿದ್ದ ಯವಾರ್ ಮಿರ್, ನೂರ್ ಮೊಹಮದ್ ಮತ್ತು ಶೋಯಬ್ ಲೋನ್ ಪ್ರಸ್ತುತ ಬಿಡುಗಡೆಗೊಂಡಿರುವ ಸ್ಥಳೀಯ ರಾಜಕೀಯ ನಾಯಕರು.

ಇಂದಿನಿಂದ ಜಮ್ಮು ಕಾಶ್ಮೀರ ಪ್ರವಾಸಿಗರಿಗೆ ಮುಕ್ತ; 2 ತಿಂಗಳ ಬಳಿಕ ನಿರ್ಬಂಧ ತೆರವುಗೊಳಿಸಿದ ಸರ್ಕಾರ

ರಫಿಯಾಬಾದ್​ ವಿಧಾನಸಭಾ ಕ್ಷೇತ್ರದ ಪಿಡಿಎ ಮಾಜಿ ಶಾಸಕ ಯವಾರ್ ಮಿರ್ ಬಿಡುಗಡೆಯಾಗಿದ್ದಾರೆ. ಉತ್ತರ ಕಾಶ್ಮೀರದಿಂದ ಕಾಂಗ್ರೆಸ್​ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದ ಶೋಯಬ್ ಲೋನ್ ಬಳಿಕ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನೂರ್ ಮೊಹಮದ್ ನ್ಯಾಷನಲ್ ಕಾನ್ಫರೆನ್ಸ್​ ಕಾರ್ಯಕರ್ತರಾಗಿದ್ದು, ಶ್ರೀನಗರದ ಬಟ್ಮಲೂ ಪ್ರದೇಶದಲ್ಲಿ ಪಕ್ಷದ ಕೆಲಸಗಳ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಈ ಮೂವರನ್ನು ಬಿಡುಗಡೆ ಮಾಡಿರುವುದಾಗಿ ಪ್ರಕಟಣೆ ಹೊರಡಿಸಲಾಗಿದೆ.

ರೈಲ್ವೆ ನಿಲ್ದಾಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಈ ಮೂವರು ರಾಜಕೀಯ ನಾಯಕರನ್ನು ಬಿಡುಗಡೆ ಮಾಡುವ ಮುನ್ನ ರಾಜ್ಯದಲ್ಲಿ ಶಾಂತಿ ಕಾಪಾಡುತ್ತೇವೆ ಮತ್ತು ಉತ್ತಮ ರೀತಿಯಲ್ಲಿ ನಡೆದುಕೊಳ್ಳುತ್ತೇವೆ ಎಂದು ಬಾಂಡ್​ ಮೇಲೆ ಸಹಿ ಹಾಕಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು ರಾಜ್ಯಪಾಲರ ಆಡಳಿತ ವಿಭಾಗದಿಂದ ಪೀಪಲ್ಸ್​ ಕಾನ್ಫರೆನ್ಸ್​ ನಾಯಕ ಇಮ್ರಾನ್​ ಅನ್ಸಾರಿ ಮತ್ತು ಸೈಯದ್ ಅಖೂನ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಈ ಇಬ್ಬರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಗೃಹಬಂಧನದಿಂದ ಬಿಡುಗಡೆ ಮಾಡಲಾಗಿತ್ತು.ಕೇಂದ್ರ ಸರ್ಕಾರ 370 ವಿಧಿಯನ್ನು ರದ್ದುಗೊಳಿಸುವ ಮುನ್ನ ಕಣಿವೆ ರಾಜ್ಯದ ರಾಜಕಾರಣಿಗಳು, ಪ್ರತ್ಯೇಕತಾವಾದಿಗಳು, ಹೋರಾಟಗಾರರು ಮತ್ತು ವಕೀಲರು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರನ್ನು ಜಮ್ಮು ಕಾಶ್ಮೀರದಲ್ಲಿ ಗೃಹಬಂಧನಲ್ಲಿ ಇರಿಸಲಾಗಿತ್ತು. ಅಲ್ಲದೆ, ಜಮ್ಮು ಕಾಶ್ಮೀರದಿಂದ ಹೊರಗೆ 250ಕ್ಕೂ ಅಧಿಕ ಜನರನ್ನು ಜೈಲಿನಲ್ಲಿ ಬಂಧಿಸಲಾಗಿತ್ತು.

ಷರತ್ತು ಬದ್ಧ ಬಿಡುಗಡೆ ಪ್ರಕ್ರಿಯೆಗೆ ಕಿಡಿಕಾರಿದ ಮುಫ್ತಿ; ಮುಂದುವರೆದ ಗೃಹಬಂಧನ

ಕಣಿವೆ ರಾಜ್ಯಾಡಳಿತ ಇಂದು ಕಣಿವೆ ರಾಜ್ಯದ ಸ್ಥಳೀಯ ಮೂವರು ರಾಜಕೀಯ ನಾಯಕರನ್ನು ಬಿಡುಗಡೆ ಮಾಡಿದ್ದರೂ ಸಹ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಬಿಡುಗಡೆ ಮಾಡಲಾಗಿಲ್ಲ. ಅವರ ಗೃಹಬಂಧನ ಇನ್ನೂ ಚಾಲ್ತಿಯಲ್ಲೇ ಇದೆ.ಈ ಪ್ರಸಂಗದ ಕುರಿತು ಟ್ವೀಟ್​ ಮೂಲಕ ಕಿಡಿಕಾರಿರುವ ಮೆಹಬೂಬಾ ಮುಫ್ತಿ, "ಕಣಿವೆ ರಾಜ್ಯದ ರಾಜಕೀಯ ನಾಯಕರ "ಷರತ್ತುಬದ್ಧ ಬಿಡುಗಡೆ"ಗಾಗಿ ಕೆಲವು ಬಾಂಡ್​ಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಗುತ್ತಿದೆ. ಇಂದು ಬಿಡುಗಡೆಯಾಗಿರುವ ನಾಯಕರಿಂದಲೂ ಸಹ ಬಾಂಡ್​ಗಳಿಗೆ ಸಹಿ ಪಡೆಯಲಾಗಿದೆ.  ನಾನು ಸೇರಿದಂತೆ ಅನೇಕ ನಾಯಕರುಗಳಿಗೆ ಈ ಬಾಂಡ್​ಗೆ ಸಹಿಹಾಕುವಂತೆ ಒತ್ತಾಯಿಸಲಾಯಿತು. ಆದರೆ, ನಾವು ಈ ಬಾಂಡ್​ಗೆ ಸಹಿಹಾಕದ ಕಾರಣ ನಮ್ಮನ್ನೂ ಇನ್ನೂ ಗೃಹ ಬಂಧನದಲ್ಲೇ ಇರಿಸಲಾಗಿದೆ. ನಮ್ಮ ಬಂಧನವೇ ಕಾನೂನು ಬಾಹೀರವಾದ ಕಾರಣ ಅವರ ಬಿಡುಗಡೆಯ ಷರತ್ತಾದರೂ ಏನು? ಎಂದು ಅವರು ಟ್ವೀಟ್​ ಮೂಲಕ ಪ್ರಶ್ನಿಸಿದ್ದಾರೆ.

First published: October 10, 2019, 1:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading