HOME » NEWS » National-international » JAMMU KASHMIR PREGNANT WOMAN GIVES BIRTH TO GIRL CHILD IN ARMY VEHICLE AS SNOWFALL BLOCKS ROAD SCT

Kashmir: ಕಾಶ್ಮೀರದಲ್ಲಿ ಭಾರೀ ಹಿಮಪಾತ; ಸೇನಾ ವಾಹನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಸೋಮವಾರ ವಿಪರೀತವಾದ ಹಿಮಪಾತವಾಗಿದ್ದರಿಂದ ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್​ ಘೋಷಿಸಲಾಗಿತ್ತು. ಇಲ್ಲಿನ ಕುಪ್ವಾರ ಜಿಲ್ಲೆಯ ಸೇನಾ ವಾಹನದಲ್ಲಿಯೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗು ಮತ್ತು ತಾಯಿಯನ್ನು ಬಳಿಕ ಆಸ್ಪತ್ರೆಗೆ ಸೇರಿಸಲಾಗಿದೆ.

Sushma Chakre | news18
Updated:February 3, 2021, 3:14 PM IST
Kashmir: ಕಾಶ್ಮೀರದಲ್ಲಿ ಭಾರೀ ಹಿಮಪಾತ; ಸೇನಾ ವಾಹನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ಸೇನಾ ವಾಹನದಲ್ಲಿ ಹುಟ್ಟಿದ ಮಗು
  • News18
  • Last Updated: February 3, 2021, 3:14 PM IST
  • Share this:
ಶ್ರೀನಗರ (ಫೆ. 3): ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಜನರು ಒಂದು ಕಡೆಯಿಂದ ಮತ್ತೊಂದು ಕಡೆ ಸಂಚರಿಸಲು ಪರದಾಡುತ್ತಿದ್ದಾರೆ. ಜಮ್ಮು ಕಾಶ್ಮೀರದ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಮಿಲಿಟರಿ ಸಿಬ್ಬಂದಿಯೇ ಹೊತ್ತುಕೊಂಡು ಹೋಗಿ ಮಿಲಿಟರಿ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಈ ವೇಳೆ ಆಸ್ಪತ್ರೆಗೆ ಹೋಗುವ ಮೊದಲೇ ಆಕೆ ಸೇನಾ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತನ್ನ ಹೆಂಡತಿ, ಮಗುವನ್ನು ಉಳಿಸಿದ ಸೈನಿಕರಿಗೆ ಧನ್ಯವಾದ ತಿಳಿಸಿದರು ಮಹಿಳೆಯ ಗಂಡ ಸೇನಾ ಬೇಸ್​ನಲ್ಲಿ ಸಿಹಿ ಹಂಚಿದ್ದಾರೆ.

ಹಿಮಪಾತದಿಂದ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದರಿಂದ ಆಕೆಯನ್ನು ಸೇನಾ ವಾಹನದಲ್ಲಿ ಕರೆದೊಯ್ಯಲಾಗಿದೆ. ಸೋಮವಾರ ವಿಪರೀತವಾದ ಹಿಮಪಾತವಾಗಿದ್ದರಿಂದ ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್​ ಘೋಷಿಸಲಾಗಿತ್ತು. ಇಲ್ಲಿನ ಕುಪ್ವಾರ ಜಿಲ್ಲೆಯ ಸೇನಾ ವಾಹನದಲ್ಲಿಯೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗು ಮತ್ತು ತಾಯಿಯನ್ನು ಬಳಿಕ ಆಸ್ಪತ್ರೆಗೆ ಸೇರಿಸಲಾಗಿದೆ.

Jammu Kashmir Pregnant Woman Gives Birth to Girl child in Army Vehicle as Snowfall Blocks Road
ಸೇನಾ ವಾಹನದಲ್ಲಿ ಹುಟ್ಟಿದ ಮಗು


ರಾತ್ರಿ ಇದ್ದಕ್ಕಿದ್ದಂತೆ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಗೆ ಸಹಾಯ ಮಾಡುವಂತೆ ಆಶಾ ಕಾರ್ಯಕರ್ತೆ ಕಮಾಂಡರ್​ಗೆ ಫೋನ್ ಮಾಡಿದ್ದರು. ತಕ್ಷಣ ಸೇನಾ ಆಂಬುಲೆನ್ಸ್​ ಕಳುಹಿಸಲಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಹೆರಿಗೆಯಾಗಿತ್ತು ಎಂದು ರಕ್ಷಣಾ ಇಲಾಖೆಯ ವಕ್ತಾರ ತಿಳಿಸಿದ್ದಾರೆ.

ಇದನ್ನೂ ಓದಿ: ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತು ಹಿಮದಲ್ಲಿ ಸಾಗಿದ ಯೋಧರು; ವಿಡಿಯೋ ನೋಡಿ ಸಲಾಂ ಎಂದ ಪ್ರಧಾನಿ ಮೋದಿ

ಕಳೆದ ತಿಂಗಳು ಕೂಡ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ಹಿಮಪಾತವಾಗಿದ್ದರಿಂದ ಗರ್ಭಿಣಿಯನ್ನು ಸೈನಿಕರು ತಮ್ಮ ಭುಜದ ಮೇಲೆ ಹೊತ್ತುಕೊಂಡು ಹೋಗಿದ್ದರು. ಹಿಮಪಾತದ ನಡುವೆ ತುಂಬು ಗರ್ಭಿಣಿ ಶಮೀಮಾ ಎಂಬ ಮಹಿಳೆ ಸಿಕ್ಕಿಹಾಕಿಕೊಂಡಿದ್ದರು. ಭಾರೀ ಹಿಮಪಾತವಾಗಿದ್ದರಿಂದ ಯಾರಿಗೂ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆಗ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ ಯೋಧರು ಆಕೆಯನ್ನು ಸ್ಟ್ರೆಚರ್​ನಲ್ಲಿ ಮಲಗಿಸಿಕೊಂಡು ಹಿಮದಲ್ಲಿ ಸಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಹಿಮದಲ್ಲಿ ಕಾಲು ಹುಗಿದು ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲೂ ಸುಮಾರು 4 ಗಂಟೆಗಳ ಕಾಲ ಹಿಮದಲ್ಲಿ ಗರ್ಭಿಣಿಯನ್ನು ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದರು. ಅದಾದ ಕೆಲವೇ ನಿಮಿಷಗಳಲ್ಲಿ ಶಮೀಮಾಗೆ ಹೆರಿಗೆಯಾಗಿತ್ತು.



ಒಂದು ತಂಡವಾದ ನಂತರ ಮತ್ತೊಂದು ತಂಡದಂತೆ ಒಟ್ಟು 100 ಯೋಧರು ಮಹಿಳೆಯನ್ನು ಆಸ್ಪತ್ರೆಗೆ ತಲುಪಿಸಿದ್ದರು. ಈ ವಿಷಯವನ್ನು ಭಾರತೀಯ ಸೇನೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿತ್ತು. ಒಟ್ಟಿನಲ್ಲಿ ದೇಶ ಕಾಯಲು ಮಾತ್ರವಲ್ಲದೆ ಆಪತ್ಕಾಲದಲ್ಲಿ ನೆರವಾಗುವ ಸೈನಿಕರಿಗೆ ದೊಡ್ಡ ಸಲಾಂ ಹೇಳಲೇಬೇಕು!
Published by: Sushma Chakre
First published: February 3, 2021, 3:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories