Jammu-Kashmir Issue: UN ಸಭೆಯಲ್ಲಿ ಮತ್ತೆ ವಿಷಯ ಕೆದಕಿದ ಪಾಕ್, ತಿರುಗೇಟು ನೀಡಿದ ಭಾರತ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಭಾಷಣದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 13 ಬಾರಿ ಜಮ್ಮು ಮತ್ತು ಕಾಶ್ಮೀರ‌ ವಿವಾದದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ವಿಶ್ವಸಂಸ್ಥೆ ಸಭೆ

ವಿಶ್ವಸಂಸ್ಥೆ ಸಭೆ

  • Share this:
ನವದೆಹಲಿ(ಸೆ. 25): ವಿಶ್ವಸಂಸ್ಥೆಯ (United Nations) 76ನೇ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Pakistan Prime Minister Imran Khan) ಅವರು ಮತ್ತೆ ಜಮ್ಮು‌ ಹಾಗೂ ಕಾಶ್ಮೀರದ ವಿವಾದವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ (India) ಪಾಕಿಸ್ತಾನದ ನಿಲುವಿಗೆ ತಿರುಗೇಟು ನೀಡಿದೆ. 'ಜಮ್ಮು - ಕಾಶ್ಮೀರ ಮತ್ತು ಲಡಾಖ್ (Jammu - Kashmir and Ladakh) ಭಾರತದ ಅವಿಭಾಜ್ಯ ಅಂಗವಾಗಿವೆ. ಕೂಡಲೇ ಪಾಕಿಸ್ತಾನವು‌ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭೂಪ್ರದೇಶಗಳನ್ನು ಖಾಲಿ ಮಾಡಬೇಕು' ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಸ್ನೇಹ ದುಬೆ (Secretary of External Affairs Ministry,  Sneha Dubey) ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಭಾಷಣದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 13 ಬಾರಿ ಜಮ್ಮು ಮತ್ತು ಕಾಶ್ಮೀರ‌ ವಿವಾದದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನ (Pakistan) ಜಮ್ಮು ಮತ್ತು ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆಯ ಸಭೆಗಳಲ್ಲಿ ‌ಮತ್ತು ಅಂತಾರಾಷ್ಟ್ರೀಯ ಸಮುದಾಯದ (International Community) ವೇದಿಕೆಗಳಲ್ಲಿ ‌ಆಗಾಗ ವಿಷಯ ಪ್ರಸ್ತಾಪಿಸುತ್ತಲೇ‌ ಇರುತ್ತದೆ. ಈಗ 13 ಬಾರಿ‌ ಒತ್ತಿ ಹೇಳಿರುವುದರಿಂದ ಭಾರತ ಕೂಡ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದೆ.

ಇಮ್ರಾನ್ ಖಾನ್ ಭಯೋತ್ಪಾದನೆ (Terrorism) ಬಗ್ಗೆ ಕೂಡ ಮಾತನಾಡಿದ್ದು 'ಪಾಕಿಸ್ಥಾನ ಭಯೋತ್ಪಾದನೆ‌‌ ವಿರುದ್ಧದ ಯುದ್ಧದಲ್ಲಿ ಸೇರಿಕೊಂಡಿದ್ದರಿಂದ ಹೆಚ್ಚು ನಷ್ಟ ಅನುಭವಿಸಿದೆ.‌ ಪಾಕಿಸ್ತಾನದ 80,000 ಜನರ ಭಯೋತ್ಪಾದನೆಯಿಂದ ಕೊಲ್ಲಲ್ಪಟ್ಟಿದ್ದಾರೆ. ಪಾಕಿಸ್ತಾನಕ್ಕೆ 150 ಬಿಲಿಯನ್ ಡಾಲರ್ ನಷ್ಟು ‌ಆರ್ಥಿಕ‌ ನಷ್ಟವಾಗಿದೆ' ಎಂದು ಹೇಳಿದ್ದಾರೆ.‌

ಇದನ್ನೂ ಓದಿ:Mayawati| ಜಾತಿ ಜನಗಣತಿಗೆ ಕೇಂದ್ರ ನಕಾರ; ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಮಾಯಾವತಿ ಕಿಡಿ!

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಸ್ನೇಹ ದುಬೆ, 'ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ.‌ ಭಯೋತ್ಪಾದಕರನ್ನು ಪಾಕಿಸ್ತಾನವು ಬಹಿರಂಗವಾಗಿ (Open Support to Terrorists) ಬೆಂಬಲಿಸುತ್ತಿದೆ. ಪಾಕಿಸ್ಥಾನವನ್ನು ಭಯೋತ್ಪಾದಕರಿಗೆ ತರಬೇತಿ ನೀಡುವ ಮತ್ತು ಹಣಕಾಸು ಒದಗಿಸುವ ದೇಶ ಎಂದೇ ಕರೆಯಲ್ಪಡಲಾಗುತ್ತದೆ. ಪಾಕಿಸ್ತಾನವು ನಂದಿಸುವಿಕೆಯ ಹೆಸರಿನಲ್ಲಿ ಬೆಂಕಿ ಹಚ್ಚುವ ದೇಶವಾಗಿದೆ' ಎಂದಿದ್ದಾರೆ.

ತಾಲಿಬಾನ್ ಪರ ಇಮ್ರಾನ್ ಖಾನ್ ಲಾಬಿ

ಜಮ್ಮು ಮತ್ತು ಕಾಶ್ಮೀರ, ಭಯೋತ್ಪಾದನೆ ಬಳಿಕ ಇಮ್ರಾನ್ ಖಾನಗ ಅವರು ತಾಲಿಬಾನ್ ಪರ ಲಾಬಿ ಮಾಡುವ ಮಾತುಗಳನ್ನು ಆಡಿದ್ದಾರೆ.‌ 'ಅಸ್ಥಿರ ಅಫ್ಘಾನಿಸ್ತಾನವು (Afghanistan) ಅಂತರಾಷ್ಟ್ರೀಯ ಭಯೋತ್ಪಾದಕರ ಸ್ವರ್ಗವಾಗಲಿದೆ. ಆದುದರಿಂದ ಪ್ರಸ್ತುತ ಸರ್ಕಾರವನ್ನು ಬಲಪಡಿಸಬೇಕು, ಸ್ಥಿರಗೊಳಿಸಬೇಕು' ಎಂದು ವಿಶ್ವಸಂಸ್ಥೆ ವೇದಿಕೆಯಲ್ಲಿ ಬಹಿರಂಗ ತಾಲಿಬಾನ್ ಸರ್ಕಾರದ ಪರ ಲಾಬಿ ಮಾಡಿದ್ದಾರೆ.

ಇದನ್ನೂ ಓದಿ:Infosys: ಆದಾಯ ತೆರಿಗೆ ಪೋರ್ಟಲ್​ನಲ್ಲಿ ಈಗ ತಾಂತ್ರಿಕ ದೋಷಗಳಿಲ್ಲ, ಮತ್ತಷ್ಟು ಉತ್ತಮ ಸ್ವರೂಪ ಪಡೆದುಕೊಂಡಿದೆ; ಇನ್ಫೋಸಿಸ್

ಇಂದು ಮೋದಿ ಭಾಷಣ

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ವಿಶ್ವಸಂಸ್ಥೆಯ (United Nations) 76ನೇ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಲಿದ್ದು ಪಾಕಿಸ್ತಾನಕ್ಕೆ ತಿರುಗೇಟು ನೀಡುವರೇ ಎಂಬುದನ್ನು ಕಾದುನೋಡಬೇಕು.‌ ಅಲ್ಲದೆ ಈಗಾಗಲೇ ಕ್ವಾಡ್ (Quad) ದೇಶಗಳ ಶೃಂಗಸಭೆಯಲ್ಲಿ ಭಯೋತ್ಪಾದನೆ, ಭದ್ರತೆ ಮತ್ತಿತರರ ವಿಷಯಗಳನ್ನು ಚರ್ಚಿಸಿರುವ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಏನು ಮಾತನಾಡುತ್ತಾರೆ ಎನ್ನುವುದನ್ನು ಕಾದುನೋಡಬೇಕು. ಅಫ್ಘಾನಿಸ್ತಾನದ ವಿಷಯವನ್ನು ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ (America President Joe Biden) ಜೊತೆ ಚರ್ಚಿಸಿರುವ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೂಡ ಭಾರತದ ನಿಲುವನ್ನು ಪ್ರತಿಪಾದಿಸುವ ಸಾಧ್ಯತೆ ಇದೆ.
Published by:Latha CG
First published: