• Home
  • »
  • News
  • »
  • national-international
  • »
  • Jammu Encounter Today: ಜಮ್ಮು ಕಾಶ್ಮೀರದಲ್ಲಿ ಎನ್​ಕೌಂಟರ್; 3 ಭಯೋತ್ಪಾದಕರ ಹತ್ಯೆ

Jammu Encounter Today: ಜಮ್ಮು ಕಾಶ್ಮೀರದಲ್ಲಿ ಎನ್​ಕೌಂಟರ್; 3 ಭಯೋತ್ಪಾದಕರ ಹತ್ಯೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಸಂತ್‌ಗಢ ಪ್ರದೇಶದಲ್ಲಿ ಸಿಲಿಂಡರಾಕಾರದ ಐಇಡಿ, 300-400 ಗ್ರಾಂ ಆರ್‌ಡಿಎಕ್ಸ್, ಏಳು 7.62 ಎಂಎಂ ಕಾರ್ಟ್ರಿಡ್ಜ್‌ಗಳು ಮತ್ತು ಐದು ಡಿಟೋನೇಟರ್‌ಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.

  • News18 Kannada
  • Last Updated :
  • Jammu and Kashmir, India
  • Share this:

ಜಮ್ಮು ಮತ್ತು ಕಾಶ್ಮೀರದ ಬೆಳ್ಳಂಬೆಳಗ್ಗೆ ಎನ್​ಕೌಂಟರ್ ನಡೆದಿದೆ. ಸಿದ್ರಾ ಎಂಬ ಪ್ರದೇಶದಲ್ಲಿ ಅಡಗಿಕೊಂಡಿದ್ದ ಮೂವರು ಭಯೋತ್ಪಾದಕರು ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ (Encounter in Jammu) ಮೃತಟ್ಟಿದ್ದಾರೆ. ಈ ಎನ್​ಕೌಂಟರ್​ನಲ್ಲಿ ಮೂವರೂ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಗುಂಡಿನ ಚಕಮಕಿ ನಡೆದಾಗ (Encounter in Jammu) ಭಯೋತ್ಪಾದಕರು (Jammu Terrorist Attack) ಟ್ರಕ್​ನಲ್ಲಿ ಅಡಗಿ ಕುಳಿತಿದ್ದರು ಎಂದು ಭದ್ರತಾ ಪಡೆಗಳು ತಿಳಿಸಿವೆ. ಎನ್‌ಕೌಂಟರ್ ಸ್ಥಳದಿಂದ (Jammu Encounter Today) ಓರ್ವ ಭಯೋತ್ಪಾದಕನ ಮೃತದೇಹವನ್ನು ಹೊರತೆಗೆಯಲಾಗಿದೆ.


ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ 15 ಕಿಲೋಗ್ರಾಂಗಳಷ್ಟು ಸುಧಾರಿತ ಸ್ಫೋಟಕ ಸಾಧನಗಳನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದರು. ಈ ಘಟನೆ ನಡೆದ ಕೇವಲ ಒಂದು ದಿನದ ನಂತರ ಜಮ್ಮು ಕಾಶ್ಮೀರ ಪೊಲೀಸರು ಪ್ರಮುಖ ಭಯೋತ್ಪಾದಕ ದಾಳಿಯನ್ನು ತಪ್ಪಿಸಿದ್ದಾರೆ.


ಹಲವು ಸ್ಫೋಟಕಗಳನ್ನು ವಶಪಡಿಸಿಕೊಂಡ ಜಮ್ಮು ಕಾಶ್ಮೀರ ಪೊಲೀಸರು
ಬಸಂತ್‌ಗಢ ಪ್ರದೇಶದಲ್ಲಿ ಸಿಲಿಂಡರಾಕಾರದ ಐಇಡಿ, 300-400 ಗ್ರಾಂ ಆರ್‌ಡಿಎಕ್ಸ್, ಏಳು 7.62 ಎಂಎಂ ಕಾರ್ಟ್ರಿಡ್ಜ್‌ಗಳು ಮತ್ತು ಐದು ಡಿಟೋನೇಟರ್‌ಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಈ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಭಯೋತ್ಪಾದನಾ ಯೋಜನೆಯನ್ನು ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶಂಕಿತ ಉಗ್ರನ ಬಂಧನ
ಅಷ್ಟೇ ಅಲ್ಲದೇ, ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಯ ಕೋಡೆಡ್ ಶೀಟ್ ಮತ್ತು ಲೆಟರ್ ಪ್ಯಾಡ್ ಪುಟವನ್ನು ಪೊಲೀಸರು ವಶಪಡಿಸಿಕೊಂಡು ಶಂಕಿತನನ್ನು ಬಂಧಿಸಿದ್ದಾರೆ.


ಇದನ್ನೂ ಓದಿ: Court Order: ಮದುವೆಯಾಗಿ 6 ವರ್ಷವಾದ್ರೂ ಹೆಂಡತಿಯನ್ನು ಹತ್ತಿರ ಸೇರಿಸದ ಸಲಿಂಗಕಾಮಿ ಗಂಡ, ಕೋರ್ಟ್​ನಿಂದ ಖಡಕ್ ಆದೇಶ


ಸಣ್ಣ ಶಸ್ತ್ರಾಸ್ತ್ರಗಳನ್ನು ಡ್ರೋನ್ ಮೂಲಕ ಭಾರತಕ್ಕೆ ಇಳಿಸಿದ್ದ ಪಾಕ್
CNN-News18 ಗೆ ಕಳೆದ ಕೆಲ ದಿನಗಳ ಹಿಂದೆ ದೊರೆತಿದ್ದ ಗುಪ್ತಚರ ಮಾಹಿತಿಯ ಪ್ರಕಾರ ಈ ಮುನ್ನ ಎಲ್ಲಾ ಲಾಂಚ್ ಪ್ಯಾಡ್‌ಗಳಲ್ಲಿ ತರಬೇತಿ ಪಡೆದ ಭಯೋತ್ಪಾದಕ ಪಡೆಗಳೇ ಕಾರ್ಯನಿರ್ವಹಿಸುತ್ತಿದ್ದರು. ಈ ಪಡೆಗಳನ್ನು ಪಾಕಿಸ್ತಾನದ ISI ನಿಂದ ನೇರವಾಗಿ ನಿರ್ವಹಿಸಲಾಗುತ್ತಿತ್ತು. ಪಾಕಿಸ್ತಾನವು 300 ಕ್ಕೂ ಅಧಿಕ ಸಣ್ಣ ಶಸ್ತ್ರಾಸ್ತ್ರಗಳನ್ನು ಡ್ರೋನ್ ಮೂಲಕ ಭಾರತಕ್ಕೆ ಇಳಿಸಿದೆ ಎನ್ನಲಾಗಿತ್ತು.


ಶ್ರೀನಗರದಲ್ಲಿ ಬೀಡುಬಿಟ್ಟ 50 ವಿದೇಶಿ ಭಯೋತ್ಪಾದಕರು
ಅಂದಾಜಿನ ಪ್ರಕಾರ ಎಲ್‌ಇಟಿ ಮತ್ತು ಜೈಶ್‌ನ ಸುಮಾರು 50 ವಿದೇಶಿ ಭಯೋತ್ಪಾದಕರು ಈಗಾಗಲೇ ಶ್ರೀನಗರದ ಮುಖ್ಯ ಪಟ್ಟದಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗಿತ್ತು. ಅವರನ್ನು ಆರಾಮದಾಯಕವಾದ ಸ್ಥಳದಲ್ಲಿ ಇರಿಸಲಾಗಿದ್ದು ಅಗತ್ಯ ಬಿದ್ದಾಗ ಹಾಗೂ ಸೂಕ್ತ ಅವಕಾಶ ದೊರೆತಾಗ ಅವರು ಕಾರ್ಯತತ್ಪರರಾಗುತ್ತಾರೆ ಎಂಬುದು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ವರದಿಯಾಗಿತ್ತು.


ಇದನ್ನೂ ಓದಿ: Prahlad Modi: ಮೋದಿ ಸಹೋದರ ಪ್ರಹ್ಲಾದ್ ಮೋದಿ ಹಿನ್ನೆಲೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ


ಕದನ ವಿರಾಮ ಉಲ್ಲಂಘಿಸುವಂತೆ ಭಯೋತ್ಪಾದಕ ಸಂಘಟನೆಗಳು ಸೇನೆಯ ಮೇಲೆ ಒತ್ತಡ ಹೇರುತ್ತಿರುವುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನವು ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು CNN-News18 ಇತ್ತೀಚೆಗೆ ವರದಿ ಮಾಡಿತ್ತು

Published by:ಗುರುಗಣೇಶ ಡಬ್ಗುಳಿ
First published: