Shopian Encounter: ಕಾಶ್ಮೀರದ ಶೋಪಿಯಾನ್​ನಲ್ಲಿ ಗುಂಡಿನ ದಾಳಿ; ಬಿಎಸ್​ಎಫ್ ಯೋಧರಿಂದ ಮೂವರು ಉಗ್ರರ ಎನ್​ಕೌಂಟರ್

Jammu Kashmir Encounter | ಶೋಪಿಯಾನ್​ನಲ್ಲಿ ಭಾರತೀಯ ಭದ್ರತಾ ಪಡೆಯ ಸಿಬ್ಬಂದಿ ಮೂವರು ಉಗ್ರರನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶ್ರೀನಗರ (ಮೇ 6): ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ನಿನ್ನೆ ಸಂಜೆಯಿಂದ ನಡೆಯುತ್ತಿರುವ ಗುಂಡಿನ ದಾಳಿಯಲ್ಲಿ ಭಾರತೀಯ ಭದ್ರತಾ ಪಡೆಯ ಸಿಬ್ಬಂದಿ ಮೂವರು ಉಗ್ರರನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿದ್ದಾರೆ. ಈ ವೇಳೆ, ಇತ್ತೀಚೆಗಷ್ಟೆ ಉಗ್ರ ಸಂಘಟನೆಗೆ ಸೇರಿದ್ದ ತೌಷಿಫ್ ಅಹಮದ್ ಎಂಬ ಉಗ್ರ ಭಾರತೀಯ ಸೇನೆಗೆ ಶರಣಾಗಿದ್ದಾನೆ.

ಶೋಪಿಯಾನ್​ನಲ್ಲಿ ಉಗ್ರರು ಮತ್ತು ಬಿಎಸ್​ಎಫ್ ಯೋಧರ ನಡುವಿನ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಶೋಪಿಯಾನ್​ನಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಶೋಪಿಯಾನ್​ನ ಕನಿಗಮ್ ಪ್ರದೇಶದಲ್ಲಿ ಅಲ್-ಬಾದರ್ ಸಂಘಟನೆಯ ನಾಲ್ವರು ಸ್ಥಳೀಯ ಉಗ್ರರನ್ನು ಸುತ್ತುವರೆಯಲಾಗಿದೆ. ಇವರೆಲ್ಲರೂ ಇತ್ತೀಚೆಗಷ್ಟೆ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದರು. ಈ ನಾಲ್ವರನ್ನು ಶರಣಾಗುವಂತೆ ಮನವೊಲಿಸಲು ಜಮ್ಮು ಕಾಶ್ಮೀರದ ಪೊಲೀಸರು ಮತ್ತು ಭದ್ರತಾ ಪಡೆಯ ಯೋಧರು ಪ್ರಯತ್ನಿಸುತ್ತಿದ್ದಾರೆ.ದಕ್ಷಿಣ ಕಾಶ್ಮೀರದ ಕನಿಗಮ್ ಪ್ರದೇಶದಲ್ಲಿ ನಿನ್ನೆ ಭದ್ರತಾ ಪಡೆಯ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಸಿಕ್ಕಿ ಹಿನ್ನೆಲೆಯಲ್ಲಿ ಯೋಧರು ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.ಈ ವೇಳೆ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದು, ಮೂವರು ಉಗ್ರರು ಹತರಾಗಿದ್ದಾರೆ. ಇನ್ನೂ ಸಾಕಷ್ಟು ಉಗ್ರರು ಅಡಗಿಕೊಂಡಿದ್ದು, ಅವರಿಗೆ ಶರಣಾಗುವಂತೆ ಸೂಚಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.
Published by:Sushma Chakre
First published: