HOME » NEWS » National-international » JAMMU KASHMIR DDC PHASE 1 POLLS BEGIN AMID HIGH SECURITY SNVS

ಕಾಶ್ಮೀರದಲ್ಲಿ ಚುನಾವಣೆ ಆರಂಭ; ಮೊದಲ ಹಂತದ ಮತನಾನ ಇಂದು; 1,427 ಅಭ್ಯರ್ಥಿಗಳು ಕಣದಲ್ಲಿ

ನ. 28, ಇವತ್ತಿನಿಂದ ಡಿಸೆಂಬರ್ 19 ರವರೆಗೆ ಒಟ್ಟು ಎಂಟು ಹಂತಗಳಲ್ಲಿ ಜಮ್ಮು ಕಾಶ್ಮೀರದ ಡಿಡಿಸಿ ಚುನಾವಣೆ ನಡೆಯುತ್ತಿದೆ. ಸರ್ಪಂಚ್ ಮತ್ತು ಪಂಚಾಯಿತಿ ಉಪಚುನಾವಣೆಗಳೂ ನಡೆಯುತ್ತಿವೆ. ಡಿ. 22ರಂದು ಫಲಿತಾಂಶ ಪ್ರಕಟವಾಗಲಿದೆ.

news18
Updated:November 28, 2020, 11:28 AM IST
ಕಾಶ್ಮೀರದಲ್ಲಿ ಚುನಾವಣೆ ಆರಂಭ; ಮೊದಲ ಹಂತದ ಮತನಾನ ಇಂದು; 1,427 ಅಭ್ಯರ್ಥಿಗಳು ಕಣದಲ್ಲಿ
ಕಾಶ್ಮೀರದ ಮತಗಟ್ಟೆಯೊಂದಲ್ಲಿರುವ ಸಿಬ್ಬಂದಿ
  • News18
  • Last Updated: November 28, 2020, 11:28 AM IST
  • Share this:
ನವದೆಹಲಿ(ನ. 28): ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕೊರೋನಾ ಬಿಕ್ಕಟ್ಟಿನ ನಂತರ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಡಿಡಿಸಿ (ಜಿಲ್ಲಾ ಅಭಿವೃದ್ಧಿ ಮಂಡಳಿ) ಚುನಾವಣೆ ಮತ್ತು ಪಂಜಾಯಿತಿ ಉಪಚುನಾವಣೆಗಳು ಇವತ್ತಿನಿಂದ ಆರಂಭಗೊಂಡಿವೆ. ಡಿಸೆಂಬರ್ 19ರವರೆಗೆ ಒಟ್ಟು ಎಂಟು ಹಂತಗಳಲ್ಲಿ ಮತದಾನ ನಡೆಯಲಿದೆ. ಇವತ್ತು ಮೊದಲ ಹಂತದ ಮತದಾನ ಆಗುತ್ತಿದೆ. ಒಟ್ಟಾರೆಯಾಗಿ 1,427 ಅಭ್ಯರ್ಥಿಗಳು ಕಣದಲ್ಲಿದ್ದು, ಸುಮಾರು ಏಳು ಲಕ್ಷ ಮತದಾರರಿಗೆ ಮತದಾನದ ಅವಕಾಶ ಇದೆ. ಇವರ ಪೈಕಿ ಕಾಶ್ಮೀರ ವಿಭಾಗದಲ್ಲಿ 3.73 ಲಕ್ಷ ಹಾಗೂ ಜಮ್ಮು ವಿಭಾಗದಲ್ಲಿ 3.28 ಲಕ್ಷ ಮಂದಿ ಮತದಾರರಿದ್ದಾರೆ. ಒಟ್ಟು 2,146 ಮತಗಟ್ಟೆಗಳಿವೆ. ಬೆಳಗ್ಗೆ ಏಳರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತದಾನವಾಗುತ್ತಿದೆ.

ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಡಿಸಿ ಚುನಾವಣೆಗೆ ಒಟ್ಟು 280 ಕ್ಷೇತ್ರಗಳಿವೆ. ಮೊದಲ ಹಂತದಲ್ಲಿ 43 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದ್ದು 296 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರ ಪೈಕಿ 89 ಮಹಿಳಾ ಅಭ್ಯರ್ಥಿಗಳಿರುವುದು ವಿಶೇಷ.

ಇನ್ನು, ಸರ್ಪಂಚ್ ಚುನಾವಣೆಯಲ್ಲಿ ಮೊದಲ ಹಂತದಲ್ಲಿ 94 ಕ್ಷೇತ್ರಗಳಲ್ಲಿ 279 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗೆಯೇ, 368 ಪಂಚಾಯಿತಿ ಉಪಚುನಾವಣೆಗಳಳಲ್ಲಿ 852 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: ಭಾರತದ ಆರ್ಥಿಕತೆ ನಿರೀಕ್ಷಿತ ಚೇತರಿಕೆ ಇಲ್ಲ; ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 7.5 ಕುಸಿತ

ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಸಕಲ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಜನರಿಗೆ ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆಗೆ ಸೂಚಿಸಲಾಗಿದೆ. ಸ್ಯಾನಿಟೈಸರ್, ಪಿಪಿಇ ಕಿಟ್ ಇತ್ಯಾದಿಗಳನ್ನ ಪ್ರತಿ ಮತಗಟ್ಟೆಗೂ ಒದಗಿಸಲಾಗಿದೆ. ಡಿಸೆಂಬರ್ 19ರವರೆಗೆ ಈ ಚುನಾವಣೆ ನಡೆಯಲಿದ್ದು, ಡಿಸೆಂಬರ್ 22ರಂದು ಮತ ಎಣಿಕೆ ಆಗಿ ಫಲಿತಾಂಶ ಪ್ರಕಟವಾಗಲಿದೆ.
Published by: Vijayasarthy SN
First published: November 28, 2020, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories