ಜಮ್ಮುವಿನಲ್ಲಿ ಉಗ್ರರ ದಾಳಿ; ಮನ ಕಲಕುವಂತಿದೆ ಮೃತ ಪೊಲೀಸ್​ ಅಧಿಕಾರಿಯ​ ಮಗನ ಈ ಫೋಟೋ

ಜಮ್ಮು ಕಾಶ್ಮೀರದ ಅನಂತ್​ನಾಗ್​ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಪೊಲೀಸ್​ ಅಧಿಕಾರಿ ಅರ್ಷದ್​ ಅಹಮದ್​ ಖಾನ್​ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆ ವೇಳೆ ತೆಗೆದ ಫೋಟೋವೊಂದು ಈಗ ವೈರಲ್ ಆಗಿದೆ.

Sushma Chakre | news18
Updated:June 18, 2019, 2:53 PM IST
ಜಮ್ಮುವಿನಲ್ಲಿ ಉಗ್ರರ ದಾಳಿ; ಮನ ಕಲಕುವಂತಿದೆ ಮೃತ ಪೊಲೀಸ್​ ಅಧಿಕಾರಿಯ​ ಮಗನ ಈ ಫೋಟೋ
ಮೃತ ಅಧಿಕಾರಿಯ ಮಗುವನ್ನೆತ್ತಿಕೊಂಡು ಹೋಗುತ್ತಿರುವ ಪೊಲೀಸ್
  • News18
  • Last Updated: June 18, 2019, 2:53 PM IST
  • Share this:
ಶ್ರೀನಗರ (ಜೂ. 18): ಜಮ್ಮು ಕಾಶ್ಮೀರದ ಅನಂತ್​ನಾಗ್​ನಲ್ಲಿ ಕಳೆದ ವಾರ ನಡೆದ ಉಗ್ರರ ದಾಳಿಯಲ್ಲಿ ಪೊಲೀಸ್​ ಅಧಿಕಾರಿ ಅರ್ಷದ್ ಖಾನ್​ ಗುಂಡೇಟಿಗೆ ಬಲಿಯಾಗಿದ್ದರು. ನಿನ್ನೆಯಷ್ಟೇ ಅವರ ಅಂತ್ಯಕ್ರಿಯೆ ನೆರವೇರಿದ್ದು, ಈ ವೇಳೆ ಅರ್ಷದ್​ ಖಾನ್​ ಮಗನನ್ನು ಹೊತ್ತು ನಡೆಯುತ್ತಿರುವ ಪೊಲೀಸ್​ ಅಧಿಕಾರಿಯ ಫೋಟೋ ಮನಕಲಕುವಂತಿದೆ.

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಅರ್ಷದ್ ಖಾನ್​ ಅವರ ಅಂತಿಮ ದರ್ಶನದ ವೇಳೆ ಅವರ 4 ವರ್ಷದ ಮಗನನ್ನು ಎತ್ತಿಕೊಂಡು ಬರುತ್ತಿರುವ ಹಿರಿಯ ಪೊಲೀಸ್​ ಅಧಿಕಾರಿ  ಕಣ್ಣಂಚಲ್ಲಿ ಕಂಬನಿಯನ್ನು ತುಂಬಿಕೊಂಡಿದ್ದರೆ, ಆ ಬಾಲಕ ಹಿಂತಿರುಗಿ ಹೂವಿನಿಂದ ಮುಚ್ಚಿಹೋಗಿದ್ದ ತಂದೆಯ ಮೃತದೇಹವನ್ನು ನೋಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಈ  ಫೋಟೋವನ್ನು ಜಮ್ಮು ಕಾಶ್ಮೀರ ಪೊಲೀಸ್​ ಇಲಾಖೆ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದೆ.ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋ ನಿನ್ನೆ ಶ್ರೀನಗರದಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ತೆಗೆದಿದ್ದು. ಶ್ರೀನಗರದ ಹಿರಿಯ ಸೂಪರಿಂಟೆಂಡೆಂಟ್​ ಪೊಲೀಸ್ ಹಸೀಬ್ ಮುಘಲ್ ತನ್ನ ಸಹೋದ್ಯೋಗಿಯ ಸಾವಿಗೆ ಕಣ್ಣಿರು ಹಾಕುತ್ತ ಗೆಳೆಯನ ಮಗನನ್ನು ಎತ್ತಿಕೊಂಡು ಹೋಗುತ್ತಿರುವ ಫೋಟೋ ಎಂಥವರ ಕಣ್ಣನ್ನೂ ತೇವಗೊಳಿಸುವಂತಿದೆ.

ಕಳೆದ ಬುಧವಾರ ಅನಂತ್​ನಾಗ್​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಐವರು ಸೈನಿಕರು ಸಾವನ್ನಪ್ಪಿದ್ದರು. ಈ ವೇಳೆ ಅರ್ಷದ್​ ಖಾನ್​ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯ ಆಸ್ಪತ್ರೆಯಲ್ಲಿ ಭಾನುವಾರ ಸಾವನ್ನಪ್ಪಿದ್ದರು.

First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ