Bus Accident: ನದಿಗೆ ಉರುಳಿದ ಬಸ್; 6 ಐಟಿಬಿಟಿ ಯೋಧರು ಹುತಾತ್ಮ; ಹಲವರಿಗೆ ಗಂಭೀರ ಗಾಯ

 37 ಐಟಿಬಿಪಿ ಸಿಬ್ಬಂದಿ ಮತ್ತು ಇಬ್ಬರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿಯನ್ನು ಹೊತ್ತ ಬಸ್ ಚಂದನ್ವಾರಿ ಮತ್ತು ಪಹಲ್ಗಾಮ್ ನಡುವಿನ ಆಳವಾದ ಕಮರಿಯಲ್ಲಿ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಸ್ ಅಪಘಾತ

ಬಸ್ ಅಪಘಾತ

 • Share this:
  ಕಾಶ್ಮೀರ: ಭೀಕರ ರಸ್ತೆ ಅವಘಡವೊಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ (Anantnag Bus Accident) ಬ್ರೇಕ್ ವಿಫಲವಾದ ಕಾರಣ ಐಟಿಬಿಪಿ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ನದಿಗೆ (Bus Accident) ಉರುಳಿದೆ. ಈ ದುರ್ಘಟನೆಯಲ್ಲಿ 6 ಐಟಿಬಿಪಿ ಯೋಧರು (ITBT Jawans) ಹುತಾತ್ಮರಾಗಿದ್ದಾರೆ. ಹಲವು ಐಟಿಬಿಟಿ ಸಿಬ್ಬಂದಿ ಗಾಯಗೊಂಡಿದ್ದಾರೆ. 37 ಐಟಿಬಿಪಿ ಸಿಬ್ಬಂದಿ ಮತ್ತು ಇಬ್ಬರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿಯನ್ನು ಹೊತ್ತ ಬಸ್ ಚಂದನ್ವಾರಿ ಮತ್ತು ಪಹಲ್ಗಾಮ್ ನಡುವಿನ ಆಳವಾದ ಕಮರಿಯಲ್ಲಿ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರು ಐಟಿಬಿಪಿ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರೆ 10 ಮಂದಿಗೆ ಗಂಭೀರ ಗಾಯಗಳಾಗಿವೆ. 

  ಕಾಶ್ಮೀರ ವಲಯ ಪೊಲೀಸರು ನಂತರ ಟ್ವೀಟ್‌ನಲ್ಲಿ ಗಾಯಗೊಂಡವರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ವಿಮಾನದ ಮೂಲಕ ಸಾಗಿಸುತ್ತಿರುವಾಗ ಅಪಘಾತದಲ್ಲಿ ಆರು ಐಟಿಬಿಪಿ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಅಪಘಾತದಲ್ಲಿ ಒಟ್ಟು 25 ಐಟಿಬಿಪಿ ಸಿಬ್ಬಂದಿ ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

  ವರದಿಗಳ ಪ್ರಕಾರ ಅಮರನಾಥ ಯಾತ್ರೆಯಲ್ಲಿ ಕರ್ತವ್ಯ ಮುಗಿಸಿ ಮರಳುತ್ತಿದ್ದರು. ಆದರೆ ಮಾರ್ಗಮಧ್ಯೆಯೇ ಅವರು ಮರಳುತ್ತಿದ್ದ ಬಸ್ ನದಿಗೆ ಉರುಳಿ ಅವಘಡ ಸಂಭವಿಸಿದೆ.

  ಕಾಶ್ಮೀರಿ ಪಂಡಿತರ ಹತ್ಯೆ
  ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಕಾಶ್ಮೀರಿ ಪಂಡಿತರೋರ್ವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೃತರನ್ನು ಸುನೀಲ್ ಕುಮಾರ್ ಮತ್ತು ಗಾಯಾಳುವನ್ನು ಪಿಂಟು ಕುಮಾರ್ ಎಂದು ಗುರುತಿಸಲಾಗಿದೆ.

  ಸೇಬಿನ ತೋಟದಲ್ಲಿ ಸಿಡಿದ ಗುಂಡು
  ಶೋಪಿಯಾನ್‌ನ ಚೋಟಿಪೋರಾ ಪ್ರದೇಶದ ಸೇಬಿನ ತೋಟದಲ್ಲಿ ಭಯೋತ್ಪಾದಕರು ಕಾಶ್ಮೀರಿ ಪಂಡಿತರ ಮೇಲೆ ಗುಂಡು ಹಾರಿಸಿದ್ದಾರೆ.  ಗಾಯಗೊಂಡ ಕಾಶ್ಮೀರಿ ಪಂಡಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

  ಇದನ್ನೂ ಓದಿ: Har Ghar Tiranga: ತ್ರಿವರ್ಣ ಧ್ವಜದ ಜೊತೆ 5 ಕೋಟಿಗೂ ಹೆಚ್ಚು ಸೆಲ್ಫಿ ಅಪ್​ಲೋಡ್! ಪ್ರಧಾನಿ ಮೋದಿ ಮಾತಿಗೆ ಸಿಕ್ತು ಮನ್ನಣೆ

  ಕಳೆದ ಒಂದು ವಾರದಿಂದ ಕಾಶ್ಮೀರ ಕಣಿವೆಯಲ್ಲಿ ಉಗ್ರರು ದಾಳಿಯನ್ನು ಹೆಚ್ಚಿಸಿದ್ದಾರೆ. ಭಾನುವಾರ ನೌಹಟ್ಟಾದಲ್ಲಿ ಒಬ್ಬ ಪೊಲೀಸ್ ಮತ್ತು ಕಳೆದ ವಾರ ಬಂಡಿಪೋರಾದಲ್ಲಿ ವಲಸೆ ಕಾರ್ಮಿಕರನ್ನು ಹತ್ಯೆ ಮಾಡಲಾಗಿದೆ.

  ಇದನ್ನೂ ಓದಿ: Monkeypox In Dogs: ನಾಯಿಗೂ ತಗುಲಿದ ಮಂಕಿಪಾಕ್ಸ್! ಲಕ್ಷಣ ಹೇಗಿರುತ್ತೆ? ಇಲ್ಲಿದೆ ವಿವರ

  ಗ್ರೆನೇಡ್ ದಾಳಿ
  ಬುದ್ಗಾಮ್ ಮತ್ತು ಶ್ರೀನಗರ ಜಿಲ್ಲೆಗಳಲ್ಲಿ ಸೋಮವಾರ ಎರಡು ಗ್ರೆನೇಡ್ ದಾಳಿಗಳು ನಡೆದಿವೆ. ಈ ವರ್ಷದ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚದೂರ ಪಟ್ಟಣದ ತಹಶೀಲ್ದಾರ ಕಚೇರಿಯೊಳಗೆ ರಾಜ್ಯ ಸರ್ಕಾರಿ ನೌಕರ ರಾಹುಲ್ ಭಟ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಭಟ್ ಅವರು 20120-11ರಲ್ಲಿ ವಲಸಿಗರಿಗೆ ವಿಶೇಷ ಉದ್ಯೋಗ ಪ್ಯಾಕೇಜ್ ಅಡಿಯಲ್ಲಿ ಗುಮಾಸ್ತ ಹುದ್ದೆಯನ್ನು ಪಡೆದಿದ್ದರು.

  ಶೋಪಿಯಾನ್‌ನಲ್ಲಿ ನಡೆದ ಉದ್ದೇಶಿತ ಹತ್ಯೆಯ ಬಗ್ಗೆ ಕೇಳಲು ಭಯಂಕರವಾಗಿ ವಿಷಾದವಾಗುತ್ತಿದೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
  Published by:guruganesh bhat
  First published: