ಜಮ್ಮು-ಕಾಶ್ಮೀರದಲ್ಲಿ ಮತ್ತೋರ್ವ ರಾಜಕೀಯ ಮುಖಂಡನ ಹತ್ಯೆ; ಕಳೆದ 12 ದಿನಗಳಲ್ಲಿ ಇದು 4 ನೇ ರಾಜಕೀಯ ಕೊಲೆ!
ಅಪ್ನಿ ಪಕ್ಷದ ನಾಯಕ ಗುಲಾಂ ಹಾಸನ್ ಲೋನ್ ಕೊಲೆ ಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇಂದು ಸಂಜೆ ದೇವ್ಸರ್ ನಲ್ಲಿರುವ ಅವರ ಮನೆಗೆ ನುಗ್ಗಿದ ಉಗ್ರರು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಮ್ಮು-ಕಾಶ್ಮೀರ (ಆಗಸ್ಟ್ 19); ಶಂಕಿತ ಉಗ್ರರು ಗುರುವಾರ ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಕ್ಷದ ವಲಯ ಅಧ್ಯಕ್ಷರನ್ನು ಕುಲ್ಗಾಮ್ ಜಿಲ್ಲೆಯ ದೇವಸಾರ್ ನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಇದು ಕಳೆದ 12 ದಿನಗಳಲ್ಲಿ ನಡೆದ ನಾಲ್ಕನೇ ರಾಜಕೀಯ ಹತ್ಯೆಯಾಗಿದೆ. ಅಪ್ನಿ ಪಕ್ಷದ ನಾಯಕ ಗುಲಾಂ ಹಾಸನ್ ಲೋನ್ ಕೊಲೆ ಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇಂದು ಸಂಜೆ ದೇವ್ಸರ್ ನಲ್ಲಿರುವ ಅವರ ಮನೆಗೆ ನುಗ್ಗಿದ ಉಗ್ರರು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗುಂಡೇಟು ತಿಂದ ಗುಲಾಂ ಹಾಸನ್ ಲೋನ್ ಅವರನ್ನು ಶೀಘ್ರವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗುಲಾಂ ಹಾಸನ್ ಲೋನ್ ಈ ಹಿಂದೆ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯೊಂದಿಗೆ ಸಂಬಂಧ ಹೊಂದಿದ್ದರು. ಆದರೆ, ಇತ್ತೀಚೆಗೆ ಕೆಲವು ತಿಂಗಳ ಹಿಂದೆ ಸ್ಥಳೀಯ ಅಪ್ನಿ ಪಕ್ಷಕ್ಕೆ ಮತ್ತೆ ಮರಳಿದ್ದರು ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಮೂಬಾ ಮುಫ್ತಿ ಟ್ವೀಟ್ ಮೂಲಕ ಹತ್ಯೆಯನ್ನು ಖಂಡಿಸಿದ್ದು, "ದುರದೃಷ್ಟವಶಾತ್ ಕಾಶ್ಮೀರದಲ್ಲಿ ರಾಜಕೀಯ ಹತ್ಯೆಗಳಿಗೆ ಅಂತ್ಯವಿಲ್ಲದಂತಾಗಿದೆ. ಅಪ್ನಿ ಪಕ್ಷದ ನಾಯಕ ಗುಲಾಂ ಹಾಸನ್ ಲೋನ್ ಹತ್ಯೆಯನ್ನು ನಾನು ಖಂಡಿಸುತ್ತೇವೆ. ಮೃತರ ಕುಟುಂಬಕ್ಕೆ ನನ್ನ ಆಳವಾದ ಸಂತಾಪಗಳು" ಎಂದು ತಮ್ಮ ದುಖಃವನ್ನು ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಈ ಹತ್ಯೆಯನ್ನು ಖಂಡಿಸಿದ್ದು, "ಕುಲ್ಗಾಂನ ದೇವಸಾರ್ ನಲ್ಲಿ ರಾಜಕೀಯ ನಾಯಕ ಗುಲಾಂ ಹಾಸನ್ ಲೋನ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ಬೇಸರವಾಯಿತು. ಈ ಹೇಡಿಗಳ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ಪ್ರಕರಣದ ಹಿಂದಿನ ಅಪರಾಧಿಗಳನ್ನು ಶೀಘ್ರವೇ ಕಾನೂನಿನ ಮುಂದೆ ತರುತ್ತೇನೆ" ಎಂದು ಪ್ರತಿಜ್ಞೆ ಮಾಡಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಕಳೆದ ಎರಡು ವಾರಗಳಲ್ಲಿ ಇದು ನಾಲ್ಕನೇ ರಾಜಕೀಯ ಹತ್ಯೆಯಾಗಿದೆ. ಕಳೆದ ವಾರ ಅನಂತನಾಗ್ನಲ್ಲಿ ಬಿಜೆಪಿ ನಾಯಕ ಸರ್ಪಂಚ್ ಮತ್ತು ಅವರ ಪತ್ನಿಯನ್ನು ಕೊಲ್ಲಲಾಗಿತ್ತು. ಎರಡು ದಿನಗಳ ಹಿಂದೆ ಕುಲ್ಗಾಮ್ನ ಬ್ರಾಸ್ಲೂ ಪ್ರದೇಶದಲ್ಲಿ ಇನ್ನೊಬ್ಬ ಬಿಜೆಪಿ ನಾಯಕನನ್ನು ಕೊಲ್ಲಲಾಯಿತು. ಹೀಗಾಗಿ ಬಿಜೆಪಿ ನಾಯಕತ್ವವು ತನ್ನ ಕಾರ್ಯಕರ್ತರ ಭದ್ರತೆಯನ್ನು ಹೆಚ್ಚಿಸಲು ಒತ್ತಾಯಿಸುತ್ತಿದೆ.
ಉಗ್ರಗಾಮಿ ಗುಂಪು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. "ಆಪರೇಷನ್ ಕ್ಲೀನ್ ಔಟ್ ಕಾರ್ಯಕ್ರಮದ ಅಡಿಯಲ್ಲಿ ದಬ್ಬಾಳಿಕೆಯ ಆಡಳಿತದ ಭಾಗವಾಗಿ ಕಾಶ್ಮೀರ ತ್ಯಾಗಕ್ಕೆ ದ್ರೋಹ ಮಾಡುವವರ ವಿರುದ್ಧ ನಾವು ಸಮರ ಸಾರಿದ್ದೇವೆ" ಎಂದು ಆ ಪೋಸ್ಟ್ನಲ್ಲಿ ಉಗ್ರರು ತಿಳಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ